ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಸಾವಿರಾರು ಕೋಟಿ ರೂಪಾಯಿ ಪಾವತಿಸದೇ ದೇಶ ಬಿಟ್ಟು ಓಡಿಹೋಗಿದ್ದ ವಜ್ರದ ಉದ್ಯಮಿ ನೀರವ್ ಮೋದಿಯನ್ನು ಲಂಡನ್ನಲ್ಲಿ ಬಂಧಿಸಲಾಗಿದೆ.
ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ 13 ಸಾವಿರ ಕೋಟಿ ರೂಪಾಯಿ ಸಾಲ ಪಡೆದು ಮರುಪಾವತಿ ಮಾಡದೇ ತಲೆತಪ್ಪಿಸಿಕೊಂಡಿದ್ದರು. ಆದರೀಗ ಅವರನ್ನು ಲಂಡನ್ನಲ್ಲಿ ಬಂಧನ ಮಾಡಲಾಗಿದ್ದು ಭಾರತದ ಜತೆ ಹಸ್ತಾಂತರ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ. ಎಲ್ಲವೂ ಲೆಕ್ಕಾಚಾರಗಳಂತೆ ನಡೆದರೆ ಮದ್ಯ ದೊರೆ ವಿಜಯ್ ಮಲ್ಯಾ ಸ್ಥಿತಿಯೇ ನೀರವ್ ಮೋದಿಗೂ ಬರಲಿದೆ.
ಜಾಮೀನು ಕೋರಿ ನೀರವ್ ಮೋದಿ ಅರ್ಜಿ ಸಲ್ಲಿಸಬಹುದು. ಕೋರ್ಟ್ ಜಾಮೀನು ನೀಡಿದರೆ ಅವರ ಬಂಧನ ಅಸಾಧ್ಯವಾಗಲಿದೆ. ಇತ್ತೀಚೆಗೆ ಅವರು ಬೆಲೆಬಾಳುವ ಜಾಕೆಟ್ ಧರಿಸಿ ಲಂಡನ್ ಬೀದಿಗಳಲ್ಲಿ ಕಾಣಿಸಿಕೊಂಡಿದ್ದರು.
ಪಂಜಾಬ್ ನ್ಯಾಷನಲ್ ಬ್ಯಾಂಕ್ನ 13,000 ಕೋಟಿ ರೂ. ಹಗರಣದ ಪ್ರಮುಖ ಆರೋಪಿ ಆಗಿರುವ ನೀರವ್ ಲಂಡನ್ನಲ್ಲಿ ತಲೆಮರಿಸಿಕೊಂಡಿದ್ದರು. ಅವರನ್ನು ಭಾರತಕ್ಕೆ ಹಸ್ತಾಂತರಿಸುವಂಗತೆ ಭಾರತ ಕೋರಿತ್ತು. ಕೇಂದ್ರ ಗೃಹಸಚಿವಾಲಯದ ಕಾರ್ಯದರ್ಶಿ ಸಾಜಿದ್ ಜಾವೀದ್ ದೃಢೀಕರಿಸಿದ ನಂತರದಲ್ಲಿ ಈ ಬೆಳವಣಿಗೆ ನಡೆದಿತ್ತು.
ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಮುಂಬೈ ಬ್ರ್ಯಾಂಚ್ ಒಂದರಲ್ಲಿ ಬೃಹತ್ ಮೊತ್ತದ ಅವ್ಯವಹಾರ ನಡೆದಿರುವುದನ್ನು ಪತ್ತೆಹಚ್ಚಿತ್ತು. ಸುಮಾರು 1.77 ಬಿಲಿಯನ್ ಡಾಲರ್ (ಸುಮಾರು 13,000 ಕೋಟಿ ರೂ) ಮೊತ್ತದಷ್ಟು ವಂಚನೆ ಎಸಗಲಾಗಿದೆ ಎಂದು ಸಂಸ್ಥೆ ಹೇಳಿತ್ತು. 2018ರ ಆಗಸ್ಟ್ ತಿಂಗಳಲ್ಲಿ ನೀರವ್ ಮೋದಿ ಹಸ್ತಾಂತರಕ್ಕೆ ಭಾರತ ಮನವಿ ಮಾಡಿತ್ತು. ಜೊತೆಗೆ ಭಾರತ ಅವರನ್ನು ಗಡೀಪಾರು ಮಾಡುವಂತೆ ಕೋರಿತ್ತು. ಅಕ್ರಮ ಹಣ ವರ್ಗಾವಣೆ ಸೇರಿ ಅನೇಕ ಪ್ರಕರಣಗಳು ಅವರ ಮೇಲಿವೆ. ಇತ್ತೀಚೆಗೆ ಅವರಿಗೆ ಸೇರಿದ ಐಷಾರಾಮಿ ಕಟ್ಟಡವನ್ನು ನೆಲಸಮ ಮಾಡಲಾಗಿತ್ತು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…