Featured

ಲಖನೌ: ದೇಗುಲವನ್ನು ನಿರ್ಮಾಣ ಮಾಡುವುಕ್ಕಿಂತ ಅದನ್ನು ರಕ್ಷಿಸಿಕೊಳ್ಳುವುದೇ ದೊಡ್ಡ ಸವಾಲು : ಪೇಜಾವರ ಶ್ರೀ – vishwanews24

ಲಖನೌ: ದೇಗುಲವನ್ನು ನಿರ್ಮಾಣ ಮಾಡುವುಕ್ಕಿಂತ ಅದನ್ನು ರಕ್ಷಿಸಿಕೊಳ್ಳುವುದೇ ದೊಡ್ಡ ಸವಾಲು : ಪೇಜಾವರ ಶ್ರೀ

ಲಖನೌ: ದೇಗುಲವನ್ನು ನಿರ್ಮಾಣ ಮಾಡುವುಕ್ಕಿಂತ ಅದನ್ನು ರಕ್ಷಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ ಎಂದು ಅಯೋಧ್ಯೆ ರಾಮ ಮಂದಿರ ಟ್ರಸ್ಟ್‌ನ ಸದಸ್ಯರಾದ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಹೇಳಿದ್ದಾರೆ.

ಲಖನೌದಲ್ಲಿ ಮಾತನಾಡಿದ ಅವರು ಭಾರತ ಶತಮಾನಗಳಿಂದ ಕಂಡ ಕನಸು ನನಸಾಗುತ್ತಿದೆಯಾದ್ರೂ ಜವಾಬ್ದಾರಿ ಮುಗಿಯಿತೆಂದು ಯಾರೂ ಅಂದುಕೊಳ್ಳಬಾರದು. ಮುಂದೆ ಎಷ್ಟು ವರ್ಷಗಳ ಕಾಲ ನಿರ್ಮಾಣಗೊಂಡ ದೇವಾಲಯ ಅದೇ ಸ್ವರೂಪದಲ್ಲಿರಲಿದೆ? ಮತ್ತು ಆ ದೇಗುಲಕ್ಕೆ ಯಾರೊಬ್ಬರೂ ಹಾನಿ ಮಾಡದಂತೆ ತಡೆಯುವುದು ಹೇಗೆ ಎಂಬುದು ನಮ್ಮ ಆಲೋಚನೆಯಾಗಿರಬೇಕು’ ಎಂದು ಅವರು ನುಡಿದಿದ್ದಾರೆ. ನಮ್ಮ ಮಕ್ಕಳು ಹಿಂದೂ ಧರ್ಮದಲ್ಲಿರುವವರೆಗೂ ಹಾಗೂ ಹಿಂದೂಗಳು ಬಹುಸಂಖ್ಯಾತರಾಗಿರುವವರೆಗೂ ರಾಮ ಮಂದಿರ ಹಾಗೇ ಇರಲಿದೆ. ಬುದ್ಧನ ಮೂರ್ತಿ ನಾಶ ಮಾಡಿದ ಆಫ್ಗಾನಿಸ್ತಾನದ ಸ್ಥಿತಿಯನ್ನು ಊಹಿಸಿಕೊಳ್ಳಬಹುದು’ ಎಂದಿದ್ದಾರೆ. ನಾವು ಇಲ್ಲಿ ಶಾಶ್ವತವಾಗಿ ನೆಲೆಸಿರುವುದಿಲ್ಲ. ಆದರೆ ಬದುಕಿರುವಾಗ ಹಿಂದೂ ಹಾಗೂ ಸನಾತನ ಧರ್ಮವನ್ನು ನಮ್ಮ ಮಕ್ಕಳಿಗೆ ದಾಟಿಸಬೇಕು. ನಮ್ಮ ಸಂತತಿಗಳಿಗೆ ಸಂಸ್ಕೃತಿಯನ್ನು ದಾಟಿಸುವ ಮೂಲಕ ಧರ್ಮವನ್ನು ಉಳಿಸಬಹುದು’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Vishwa News 24

Recent Posts

ಎಸ್‌ಐಆರ್‌ ವಿವಾದ: ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ರಾಜ್ಯಾದ್ಯಂತ ಹೋರಾಟ :ಯಡಿಯೂರಪ್ಪ ಎಚ್ಚರಿಕೆ – vishwanews24

ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…

12 hours ago

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ – vishwanews24

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…

12 hours ago

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ – vishwanews24

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…

13 hours ago

ಕಾರ್ಕಳ : ಅ. 5 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…

13 hours ago

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ – vishwanews24

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…

13 hours ago

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…

13 hours ago