ಲಕ್ನೊ, : ಮದುವೆಯಾಗುವ ಏಕೈಕ ಉದ್ದೇಶದಿಂದ ಬಲವಂತವಾಗಿ ಮತಾಂತರ ಮಾಡುವುದನ್ನು ತಡೆಯುವ ಸಲುವಾಗಿ ಉತ್ತರ ಪ್ರದೇಶ ಸರಕಾರ ಅತ್ಯಂತ ಕಠಿಣವಾದ ಕಾನೂನು ಜಾರಿಗೊಳಿಸಿದೆ. ಲವ್ ಜೆಹಾದ್ ವಿರುದ್ಧ ತರಲಾದ ಕಾನೂನು ಇದು ಎನ್ನಲಾಗಿದೆ. ಬಲವಂತದ ಮತಾಂತರಕ್ಕೆ 10 ವರ್ಷ ಜೈಲು ಶಿಕ್ಷೆ ವಿಧಿಸುವ ಅಂಶ ಈ ಕಾನೂನಿನಲ್ಲಿದೆ.
ಯೋಗಿ ಆದಿತ್ಯನಾಥ ಸರ್ಕಾರ ಕರಡು ಸುಗ್ರೀವಾಜ್ಞೆಗೆ ಅನುಮೋದನೆಯನ್ನು ನೀಡಿದೆ. ವಿಶೇಷವೆಂದರೆ, ಈ ಸುಗ್ರೀವಾಜ್ಞೆಯಲ್ಲಿ ಲವ್ ಜೆಹಾದ್ ಎಂಬ ಶಬ್ದವನ್ನು ಬಳಸಿಲ್ಲ. ಬದಲಾಗಿ ಕರಡು ಮಸೂದೆಯನ್ನು “ಮತಾಂತರ ತಡೆಯುವ ವಿಧಿ”ಎಂದು ಹೆಸರಿಸಲಾಗಿದೆ.
ಅನ್ಯಧರ್ಮೀಯರನ್ನು ಪ್ರೇಮಿಸಿ ವಿವಾಹವಾಗುವುದಕ್ಕೆ ಧಾರ್ಮಿಕ ಮತಾಂತರವಾಗುವುದನ್ನು ಬಿಜೆಪಿ ನಾಯಕರು ಲವ್ ಜಿಹಾದ್ ಎಂದು ಹೇಳುತ್ತಿದ್ದು, ಅದನ್ನು ತಡೆಗಟ್ಟಲು ಉತ್ತರ ಪ್ರದೇಶ ಸರ್ಕಾರ ಕಠಿಣ ಕಾನೂನನ್ನು ಜಾರಿಗೊಳಿಸಿದೆ.
ಮಂಗಳವಾರ ನಡೆದ ಸಂಪುಟ ಸಭೆ ಈ ಕರಡನ್ನು ಅಂಗೀಕರಿಸಿದೆ. ಮಸೂದೆಯನ್ನು ಮತಾಂತರ ವಿರೋಧಿ ಕಾನೂನು ಎಂದು ಪರಿಗಣಿಸಲಾಗಿದೆ ಮತ್ತು ಇದು ಜನರನ್ನು ಬಲವಂತವಾಗಿ, ಪ್ರೀತಿಯ ನೆಪದಲ್ಲಿ ಅಥವಾ ಬೆದರಿಕೆ ಹಾಕುವ ಮೂಲಕ ಇತರ ಧರ್ಮಗಳಿಗೆ ಪರಿವರ್ತಿಸುವುದನ್ನು ತಡೆಯುತ್ತದೆ.
ಲವ್ ಜಿಹಾದ್ ಎಂಬ ಪದವನ್ನು ಮಸೂದೆಯಲ್ಲಿ ಬಳಸಲಾಗಿಲ್ಲ ಮತ್ತು ಎಲ್ಲಾ ಧರ್ಮಗಳಿಗೆ ಸಂಬಂಧಿಸಿದ ಮತಾಂತರಗಳನ್ನು ಹೊಸ ಕಾನೂನಿನ ವ್ಯಾಪ್ತಿಗೆ ತರಲಾಗುವುದು. ನಿಖರವಾಗಿ ಹೇಳಬೇಕೆಂದರೆ, ಅದು ಕೇವಲ ಹಿಂದೂ-ಮುಸ್ಲಿಂ ಮತಾಂತರಗಳು ಅಥವಾ ವಿವಾಹದ ನಿರ್ದಿಷ್ಟ ಉದ್ದೇಶದ ಮತಾಂತರಗಳ ಬಗ್ಗೆ ಗಮನ ಹರಿಸಿಲ್ಲ ಎಂದು ಕಾನೂನು ಆಯೋಗದ ಮುಖ್ಯಸ್ಥ ಜಸ್ಟಿಸ್ ಆದಿತ್ಯ ಮಿತ್ತಲ್ ಹೇಳಿದ್ದಾರೆ.
ಒಂದು ವೇಳೆ ಸಮುದಾಯವನ್ನೇ ಮತಾಂತರ ಮಾಡಲು ಮುಂದಾದರೆ 3-10 ವರ್ಷ ಜೈಲು ಮತ್ತು50,000 ದಂಡ ವಿಧಿಸಬಹುದಾಗಿದೆ. ಒಬ್ಬ ವ್ಯಕ್ತಿ ಮತಾಂತರಗೊಂಡು ಮದುವೆಯಾಗಲು ಬಯಸಿದರೆ ಆತ ಸಂಬಂಧಿಸಿದ ಅಧೀಕಾರಿಯ ಅನುಮತಿಯನ್ನು ಮದುವೆಗೂ ಎರಡೂ ತಿಂಗಳು ಮುನ್ನ ಪಡೆದುಕೊಳ್ಳಬೇಕಾಗುವುದು.
ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…
ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…
ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು ಮಂಗಳೂರು: ಮಂಗಳೂರು ಪ್ರಾದೇಶಿಕ ಸಾರಿಗೆ…
ಕಾಪು: ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ಉಡುಪಿ: ಐದನೇ ವರ್ಷದ ಉಚ್ಚಿಲ ದಸರಾ ಲಲಿತ ಪಂಚಮಿಯ ಸಂಭ್ರಮ…
ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ ಉಡುಪಿ: ಉಚ್ಚಿಲ ಮಹಾಲಕ್ಷ್ಮೀ…
ಕೋಳಿಮರಿ ವಿತರಣೆ: ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ ಉಡುಪಿ: ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ…