Featured

ಲವ್‌ ಜೆಹಾದ್‌ ವಿರುದ್ಧ ಉ.ಪ್ರ.ದಲ್ಲಿ ಕಠಿಣ ಕಾನೂನು ; ಮತಾಂತರ ನಿಷೇಧ ಸುಗ್ರೀವಾಜ್ಞೆಗೆ ಯೋಗಿ ಸಂಪುಟ ಅಸ್ತು ; 10 ವರ್ಷ ಜೈಲು ಶಿಕ್ಷೆ ಪ್ರಸ್ತಾವ -Vishwanews24

ಲವ್‌ ಜೆಹಾದ್‌ ವಿರುದ್ಧ ಉ.ಪ್ರ.ದಲ್ಲಿ ಕಠಿಣ ಕಾನೂನು ; ಮತಾಂತರ ನಿಷೇಧ ಸುಗ್ರೀವಾಜ್ಞೆಗೆ ಯೋಗಿ ಸಂಪುಟ ಅಸ್ತು ; 10 ವರ್ಷ ಜೈಲು ಶಿಕ್ಷೆ ಪ್ರಸ್ತಾವ -Vishwanews24

ಲಕ್ನೊ, : ಮದುವೆಯಾಗುವ ಏಕೈಕ ಉದ್ದೇಶದಿಂದ ಬಲವಂತವಾಗಿ ಮತಾಂತರ ಮಾಡುವುದನ್ನು ತಡೆಯುವ ಸಲುವಾಗಿ ಉತ್ತರ ಪ್ರದೇಶ ಸರಕಾರ ಅತ್ಯಂತ ಕಠಿಣವಾದ ಕಾನೂನು ಜಾರಿಗೊಳಿಸಿದೆ. ಲವ್‌ ಜೆಹಾದ್‌ ವಿರುದ್ಧ ತರಲಾದ ಕಾನೂನು ಇದು ಎನ್ನಲಾಗಿದೆ. ಬಲವಂತದ ಮತಾಂತರಕ್ಕೆ 10 ವರ್ಷ ಜೈಲು ಶಿಕ್ಷೆ ವಿಧಿಸುವ ಅಂಶ ಈ ಕಾನೂನಿನಲ್ಲಿದೆ.
ಯೋಗಿ ಆದಿತ್ಯನಾಥ ಸರ್ಕಾರ ಕರಡು ಸುಗ್ರೀವಾಜ್ಞೆಗೆ ಅನುಮೋದನೆಯನ್ನು ನೀಡಿದೆ. ವಿಶೇಷವೆಂದರೆ, ಈ ಸುಗ್ರೀವಾಜ್ಞೆಯಲ್ಲಿ ಲವ್‌ ಜೆಹಾದ್‌ ಎಂಬ ಶಬ್ದವನ್ನು ಬಳಸಿಲ್ಲ. ಬದಲಾಗಿ ಕರಡು ಮಸೂದೆಯನ್ನು “ಮತಾಂತರ ತಡೆಯುವ ವಿಧಿ”ಎಂದು ಹೆಸರಿಸಲಾಗಿದೆ.

ಅನ್ಯಧರ್ಮೀಯರನ್ನು ಪ್ರೇಮಿಸಿ ವಿವಾಹವಾಗುವುದಕ್ಕೆ ಧಾರ್ಮಿಕ ಮತಾಂತರವಾಗುವುದನ್ನು ಬಿಜೆಪಿ ನಾಯಕರು ಲವ್ ಜಿಹಾದ್ ಎಂದು ಹೇಳುತ್ತಿದ್ದು, ಅದನ್ನು ತಡೆಗಟ್ಟಲು ಉತ್ತರ ಪ್ರದೇಶ ಸರ್ಕಾರ ಕಠಿಣ ಕಾನೂನನ್ನು ಜಾರಿಗೊಳಿಸಿದೆ.

ಮಂಗಳವಾರ ನಡೆದ ಸಂಪುಟ ಸಭೆ ಈ ಕರಡನ್ನು ಅಂಗೀಕರಿಸಿದೆ. ಮಸೂದೆಯನ್ನು ಮತಾಂತರ ವಿರೋಧಿ ಕಾನೂನು ಎಂದು ಪರಿಗಣಿಸಲಾಗಿದೆ ಮತ್ತು ಇದು ಜನರನ್ನು ಬಲವಂತವಾಗಿ, ಪ್ರೀತಿಯ ನೆಪದಲ್ಲಿ ಅಥವಾ ಬೆದರಿಕೆ ಹಾಕುವ ಮೂಲಕ ಇತರ ಧರ್ಮಗಳಿಗೆ ಪರಿವರ್ತಿಸುವುದನ್ನು ತಡೆಯುತ್ತದೆ.

ಲವ್ ಜಿಹಾದ್ ಎಂಬ ಪದವನ್ನು ಮಸೂದೆಯಲ್ಲಿ ಬಳಸಲಾಗಿಲ್ಲ ಮತ್ತು ಎಲ್ಲಾ ಧರ್ಮಗಳಿಗೆ ಸಂಬಂಧಿಸಿದ ಮತಾಂತರಗಳನ್ನು ಹೊಸ ಕಾನೂನಿನ ವ್ಯಾಪ್ತಿಗೆ ತರಲಾಗುವುದು. ನಿಖರವಾಗಿ ಹೇಳಬೇಕೆಂದರೆ, ಅದು ಕೇವಲ ಹಿಂದೂ-ಮುಸ್ಲಿಂ ಮತಾಂತರಗಳು ಅಥವಾ ವಿವಾಹದ ನಿರ್ದಿಷ್ಟ ಉದ್ದೇಶದ ಮತಾಂತರಗಳ ಬಗ್ಗೆ ಗಮನ ಹರಿಸಿಲ್ಲ ಎಂದು ಕಾನೂನು ಆಯೋಗದ ಮುಖ್ಯಸ್ಥ ಜಸ್ಟಿಸ್‌ ಆದಿತ್ಯ ಮಿತ್ತಲ್‌ ಹೇಳಿದ್ದಾರೆ.

ಒಂದು ವೇಳೆ ಸಮುದಾಯವನ್ನೇ ಮತಾಂತರ ಮಾಡಲು ಮುಂದಾದರೆ   3-10 ವರ್ಷ ಜೈಲು ಮತ್ತು50,000 ದಂಡ ವಿಧಿಸಬಹುದಾಗಿದೆ.  ಒಬ್ಬ ವ್ಯಕ್ತಿ ಮತಾಂತರಗೊಂಡು ಮದುವೆಯಾಗಲು ಬಯಸಿದರೆ ಆತ ಸಂಬಂಧಿಸಿದ ಅಧೀಕಾರಿಯ ಅನುಮತಿಯನ್ನು ಮದುವೆಗೂ ಎರಡೂ ತಿಂಗಳು ಮುನ್ನ ಪಡೆದುಕೊಳ್ಳಬೇಕಾಗುವುದು.

Vishwa News 24

Recent Posts

ಉಡುಪಿ: ಮಹಾವೀರ ಜಯಂತಿ – ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ  – vishwanews24

ಉಡುಪಿ: ಮಹಾವೀರ ಜಯಂತಿ ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ  ಮಾ.31ರ ಮಂಗಳವಾರ ಬದಲಾಗಿ ಮಾ. 30ರ ಸೋಮವಾರ ರಜೆ ಘೋಷಣೆ ಉಡುಪಿ:…

18 hours ago

ಮಾ.30ಕ್ಕೆ ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ – vishwanews24

ಮಾ.30ಕ್ಕೆ ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ ಬೆಂಗಳೂರು: ಮಾ.30ಕ್ಕೆ ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ  ಮಾ.31ಕ್ಕೆ ಮುಂದೂಡಿಕೆ…

18 hours ago

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ನಿಯಮದಲ್ಲಿಈ ವರ್ಷವೂ 60 ದಿನಗಳ ವಿನಾಯಿತಿ : ಮಧು ಬಂಗಾರಪ್ಪ – vishwanews24

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ನಿಯಮದಲ್ಲಿಈ ವರ್ಷವೂ 60 ದಿನಗಳ ವಿನಾಯಿತಿ : ಮಧು ಬಂಗಾರಪ್ಪ ಬೆಂಗಳೂರು:…

19 hours ago

ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಆಹ್ವಾನ – vishwanews24

ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಆಹ್ವಾನ ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ…

20 hours ago

ಬಂಟ್ವಾಳ: ಯುವತಿ ನಾಪತ್ತೆ ; ಪ್ರಕರಣ ದಾಖಲು – vishwanews24

ಬಂಟ್ವಾಳ: ಯುವತಿ ನಾಪತ್ತೆ; ಪ್ರಕರಣ ದಾಖಲು ಬಂಟ್ವಾಳ: ಕೆಲಸಕ್ಕೆಂದು ಹೊರಟ ಯುವತಿ ಮನೆಗೆ ಮರಳದೇ ನಾಪತ್ತೆಯಾಗಿರುವ ಘಟನೆ ಬಂಟ್ವಾಳ ತಾಲೂಕಿನ…

20 hours ago

ಉಡುಪಿ : ಗ್ಯಾರಂಟಿ ಯೋಜನೆಗಳಿಂದ ಜನ ಸಾಮಾನ್ಯರಿಗೆ ಸಾಕಷ್ಟು ಅನುಕೂಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ – vishwanews24

 ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಜಯ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉಡುಪಿ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಎರಡೂ…

20 hours ago