ಉಡುಪಿ

‘ಲವ್‌ ಬಾಬಾ’ ಚಿತ್ರದ ನಾಯಕಿಯಾಗಿ ಮಂಗಳಮುಖಿ ಕಾಜಲ್‌

ಉಡುಪಿ: ಮಂಗಳಮುಖಿಯಾಗಿರುವ ಉಡುಪಿಯ ರಂಗಭೂಮಿ ಕಲಾವಿದೆ ಕಾಜಲ್‌ ಅವರು ‘ಲವ್‌ ಬಾಬಾ’ ಚಲನಚಿತ್ರದ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂದು ಚಿತ್ರದ ನಿರ್ದೇಶಕ ಚಂದನ್‌ ಗೌಡ ಅವರು ತಿಳಿಸಿದ್ದಾರೆ.

ರಂಗಭೂಮಿಯಲ್ಲಿ ಪಳಗಿರುವ ಕಾಜಲ್‌ ಅವರು ಇತ್ತೀಚೆಗೆ ‘ಐಸಿಯು-ನೋಡುವೆ ನಿನ್ನನ್ನೆ’ ನಾಟಕದಲ್ಲಿ ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟನೆ ನೀಡಿದ್ದಾರೆ. ಚಲನಚಿತ್ರಗಳಲ್ಲಿ ಈ ಹಿಂದಿನಿಂದಲೂ ಮಂಗಳಮುಖೀಯರನ್ನು ಹೆಚ್ಚಾಗಿ ಹಾಸ್ಯ ಪಾತ್ರಗಳಿಗೆ ಬಳಸಲಾಗುತ್ತಿತ್ತು. ಆದರೆ ಇದೀಗ ಮೊದಲ ಬಾರಿಗೆ ಮಂಗಳಮುಖೀಯೋರ್ವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. 30 ಲ. ರೂ. ಬಜೆಟ್‌ ನ ಈ ಚಿತ್ರದ ಚಿತ್ರೀಕರಣ ಮೈಸೂರು ಮತ್ತು ಮಂಗಳೂರಿನಲ್ಲಿ ನಡೆಯುತ್ತಿದೆ. ಈ ವರ್ಷದಲ್ಲೇ ಚಿತ್ರ ಬಿಡುಗಡೆಗೊಳಿಸಲು ನಿರ್ಧರಿಸಿದ್ದೇವೆ ಎಂದು ಚಂದನ್‌ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬಾಲ್ಯದ ಕನಸು’
ನಾನು ಮೂಲತಃ ಮಂಡ್ಯದವಳು. ನಾನು ಸಣ್ಣವಳಿರುವಾಗಲೇ ನಟಿ, ರೇಡಿಯೋ ಜಾಕಿಯಾಗಬೇಕು ಎಂಬ ಕನಸಿತ್ತು. ಉಡುಪಿಯ ರಂಗಭೂಮಿ ಸಂಸ್ಥೆಯಲ್ಲಿ ನಾಟಕಗಳಲ್ಲಿ ಅವಕಾಶ ದೊರೆಯಿತು. ಇದು ನನಗೆ ಹೆಚ್ಚು ಗೌರವ ತಂದುಕೊಟ್ಟಿತು. ಇದೀಗ ‘ಲವ್‌ ಬಾಬಾ’ ಚಿತ್ರದಲ್ಲಿ ನನಗೆ ನಾಯಕಿಯಾಗುವ ಅವಕಾಶ ನೀಡಲಾಗಿದೆ. ಈ ಮೂಲಕ ನನ್ನಲ್ಲಿರುವ ಹೆಣ್ಣಿನ ಭಾವನೆಗಳಿಗೆ ಬೆಲೆ ನೀಡಿದಂತಾಗಿದೆ. ಮಂಗಳಮುಖೀಯರಿಗೂ ವಿಶೇಷ ಗೌರವ ದೊರೆತಂತಾಗಿದೆ. ಇದರಿಂದ ತಂಬಾ ಖುಷಿಯಾಗಿದೆ ಎಂದು ನಟಿ ಕಾಜಲ್‌ ಹೇಳಿದರು. ಚಂದನ್‌ ಗೌಡ ಈ ಹಿಂದೆ ‘ಮಳೆಗಾಲ’ ಎಂಬ ಸಿನೆಮಾ ನಿರ್ದೇಶಿಸಿದ್ದರು. ‘ಲವ್‌ ಬಾಬಾ’ ಅವರ ಎರಡನೇ ಚಿತ್ರ. ಇದರಲ್ಲಿ ಉಡುಪಿಯ ಅಬ್ದುಲ್‌ ರೆಹಮಾನ್‌ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅಬ್ದುಲ್‌ ರೆಹಮಾನ್‌, ಕಲಾವಿದ ರವಿ ಉಪಸ್ಥಿತರಿದ್ದರು.

 

Vishwa News 24

Recent Posts

ಪಾಟ್ನಾ: ಪ್ಯಾಸೆಂಜರ್​​​​ ರೈಲಿನಲ್ಲಿ ಆಕಸ್ಮಿಕ ಬೆಂಕಿ ಅವಘಡ : ತಪ್ಪಿದ ಭಾರೀ ಅನಾಹುತ – vishwanews24

ಪ್ಯಾಸೆಂಜರ್​​​​ ರೈಲಿನಲ್ಲಿ ಆಕಸ್ಮಿಕ ಬೆಂಕಿ ಅವಘಡ :ತಪ್ಪಿದ ಭಾರೀ ಅನಾಹುತ ಪಾಟ್ನಾ: ಬಿಹಾರದ ಸಸಾರಾಮ್ ರೈಲು ನಿಲ್ದಾಣದಲ್ಲಿ ಪಾಟ್ನಾಗೆ ತೆರಳಲು…

2 hours ago

ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿಡಿ ಸತೀಶನ್ ಪ್ರಮಾಣವಚನ ಸ್ವೀಕಾರ – vishwanews24

ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿಡಿ ಸತೀಶನ್ ಪ್ರಮಾಣವಚನ ಸ್ವೀಕಾರ ತಿರುವನಂತಪುರಂ: ಕೇರಳಂ ಸರಕಾರದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್ ಪ್ರಮಾಣವಚನ ಸ್ವೀಕರಿಸಿದರು.…

2 hours ago

ಕಾಂಗ್ರೆಸ್‌ ಸರ್ಕಾರದ ಸಾಧನಾ ಸಮಾವೇಶ : ನಾಳೆ 1.52 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ: ಪರಮೇಶ್ವರ್‌ – vishwanews24

ಕಾಂಗ್ರೆಸ್‌ ಸರ್ಕಾರದ ಸಾಧನಾ ಸಮಾವೇಶ : ನಾಳೆ 1.52 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ: ಪರಮೇಶ್ವರ್‌ ಬೆಂಗಳೂರು: ತುಮಕೂರಿನಲ್ಲಿ ನಾಳೆ…

3 hours ago

ಪಡುಬಿದ್ರಿ : ಚಿನ್ನಾಭರಣವಿದ್ದ ಬ್ಯಾಗ್ ವಾರೀಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ – vishwanews24

ಪಡುಬಿದ್ರಿ : ಚಿನ್ನಾಭರಣವಿದ್ದ ಬ್ಯಾಗ್ ವಾರೀಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ ಪಡುಬಿದ್ರಿ: ಬಸ್ ನಿಲ್ದಾಣದಲ್ಲಿ ದೊರೆತ ಸಾವಿರಾರು…

3 hours ago

ಉಡುಪಿ: ಬಿಜೆಪಿ ಯುವ ಮೋರ್ಚಾದಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗೋಬ್ಯಾಕ್ ಪ್ರತಿಭಟನೆ – vishwanews24

ಉಡುಪಿ: ಬಿಜೆಪಿ ಯುವ ಮೋರ್ಚಾದಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗೋಬ್ಯಾಕ್ ಪ್ರತಿಭಟನೆ ಉಡುಪಿ: ಉಡುಪಿ ಜಿಲ್ಲೆಯನ್ನು ರಾಜ್ಯ ಕಾಂಗ್ರೆಸ್…

2 days ago

ಮಂಗಳೂರು : ಹಿಜಾಬ್ ನಿಷೇಧ ಹಿಂಪಡೆಯುವ ನಿರ್ಧಾರವನ್ನು ಸ್ವಾಗತಿಸಿದ ವಿಮೆನ್ ಇಂಡಿಯಾ ಮೂವ್ಮೆಂಟ್ – vishwanews24

ಹಿಜಾಬ್ ನಿಷೇಧ ಹಿಂಪಡೆಯುವ ನಿರ್ಧಾರವನ್ನು ಸ್ವಾಗತಿಸಿದ ವಿಮೆನ್ ಇಂಡಿಯಾ ಮೂವ್ಮೆಂಟ್.. ಸುಪ್ರೀಂ ಕೋರ್ಟ್‌ನಲ್ಲಿ ಅಧಿಕೃತ ಕ್ರಮಗಳನ್ನು ಪೂರ್ಣಗೊಳಿಸಲು ಸರ್ಕಾರಕ್ಕೆ ಮನವಿ…

2 days ago