ಹೊಸದಿಲ್ಲಿ: ಮುಂಬರುವ ಲೋಕಸಭೆ ಚುನಾವಣೆ ಅಖಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿಂತು ಸೆಣಸುವ ಸಮರ್ಥ ಅಭ್ಯರ್ಥಿ ಪ್ರತಿಪಾಳಯದಲ್ಲಿ ಇಲ್ಲ ಎನ್ನುವ ದಟ್ಟ ಅಭಿಪ್ರಾಯದ ನಡುವೆಯೇ, ರಾಹುಲ್ ಗಾಂಧಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಲು ಕಾಂಗ್ರೆಸ್ ನಿರಾಕರಿಸಿದೆ.
ಏಕಾಂಗಿಯಾಗಿ ಚುನಾವಣೆ ಎದುರಿಸಿ ಗೆಲ್ಲುವ ಕನಸನ್ನು ಎಂದೋ ಕೈಬಿಟ್ಟಿರುವ ಕಾಂಗ್ರೆಸ್, ಮಿತ್ರಪಕ್ಷಗಳನ್ನು ಒಗ್ಗೂಡಿಸಿ ಸೆಣಸುವ ಕನಸು ಕಾಣುತ್ತಿದೆ. ಆದರೆ ಆ ಪ್ರಯತ್ನ ಕೂಡ ಇದುವರೆಗೆ ನಿರೀಕ್ಷಿತ ಮಟ್ಟ ಮುಟ್ಟಿಲ್ಲ. ಇದರಿಂದ ಆತಂಕಗೊಂಡಿರುವ ಕಾಂಗ್ರೆಸ್, ಪ್ರಧಾನಿ ಪಟ್ಟದ ಗೊಡವೆಯಿಂದ ದೂರ ಉಳಿಯಲು ನಿರ್ಧರಿಸಿದೆ.
ಸದ್ಯದ ಸ್ಥಿತಿಯಲ್ಲಿ ರಾಹುಲ್ ಗಾಂಧಿ ನಾಯಕತ್ವವೂ ಪಕ್ಷದೊಳಗೆ ಭರವಸೆ ಮೂಡಿಸುವಲ್ಲಿ ವಿಫಲವಾಗಿದೆ. ಮೋದಿ ಅಲೆಯ ಅಬ್ಬರ ಯಥಾಸ್ಥಿತಿ ಮುಂದುವರಿದಿರುವುದರಿಂದ ಪ್ರತಿಪಾಳಯದಲ್ಲಿ ಅವರಿಗೆ ತಕ್ಕ ಎದುರಾಳಿ ಬೇಕು. ರಾಹುಲ್ ಅವರಿಗೆ ಆ ವರ್ಚಸ್ಸು ಇಲ್ಲ ಎನ್ನುವುದು ಖುದ್ದು ಕಾಂಗ್ರೆಸ್ ನಾಯಕರೇ ಒಪ್ಪಿರುವ ವಾಸ್ತವ. ಈ ಬಗ್ಗೆ ಕೆಲವು ನಾಯಕರು ಪಕ್ಷದ ಕಾರ್ಯಕಾರಿಣಿ ಸಭೆ (ಸಿಡಬ್ಲ್ಯೂಸಿ)ಯಲ್ಲಿಯೇ ಸ್ಪಷ್ಟ ನಿರಾಕರಣೆ ತೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘‘ನನಗೆ ಪ್ರಧಾನಿ ಪಟ್ಟದ ಆಸೆ ಇಲ್ಲ. ಮೈತ್ರಿಕೂಟದ ಸಮರ್ಥರೊಬ್ಬರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಒಪ್ಪಲು ನಾನು ಸಿದ್ಧ,’’ ಎಂದು ಖುದ್ದು ರಾಹುಲ್ ಅವರೇ ಕೆಲದಿನಗಳ ಹಿಂದೆ ಸ್ಪಷ್ಟಪಡಿಸಿದ್ದಾರೆ.
ಕುಂದಾಪುರ: ಹೋಂ ಸ್ಟೇ ಎನ್ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಕುಂದಾಪುರ…
ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ :…
ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…
ಉಡುಪಿ: ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…
ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…
ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…