Featured

ಲೋಕಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ ; ಮುಂದಿನ ತಿಂಗಳು ಪ್ರಧಾನಿ ಮೋದಿ ರ್ಯಾಲಿ

ಬೆಂಗಳೂರು: 2019ರ ಲೋಕಸಭಾ ಚುನಾವಣೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈಗಾಗಲೇ ಪ್ರಚಾರದ ಸಿದ್ಧತೆಯಲ್ಲಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಅವರು ದೇಶಾದ್ಯಂತ ಸುಮಾರು 50 ರ್ಯಾಲಿಗಳಲ್ಲಿ ಭಾಗವಹಿಸಲಿದ್ದು ಅವುಗಳಲ್ಲಿ ಕರ್ನಾಟಕದಲ್ಲಿ ನಡೆಸುವ ರ್ಯಾಲಿಗಳು ಕೂಡ ಅವರ ಪ್ರಚಾರ ಕಾರ್ಯಕ್ರಮದಲ್ಲಿ ಪ್ರಮುಖವಾಗಿದೆ.

ಪಂಜಾಬ್ ರಾಜ್ಯದ ಮುಕ್ತಸಾರ್ ಜಿಲ್ಲೆಯಲ್ಲಿ ಕಳೆದ ವಾರ ಮತ್ತು ನಿನ್ನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವ ಮೂಲಕ ಪ್ರಧಾನಿ ಮೋದಿಯವರು ಈಗಾಗಲೇ ತಮ್ಮ ಮಿಂಚಿನ ದಾಳಿಯ ರೀತಿಯ ಪ್ರಚಾರ ರ್ಯಾಲಿಗಳನ್ನು ಭಾಗವಹಿಸಿದ್ದಾರೆ. ಮುಂದಿನ ತಿಂಗಳು ಕರ್ನಾಟಕದಲ್ಲಿ ಕೂಡ ಅವರು ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.

ಮೋದಿಯವರು ಕರ್ನಾಟಕದಲ್ಲಿ ಬೃಹತ್ ರೈತ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಅದು ಹಾವೇರಿ ಅಥವಾ ಚಿಕ್ಕೋಡಿಯಲ್ಲಿ ಆಗಿರಬಹುದು. ಸ್ಥಳ ಮತ್ತು ದಿನಾಂಕ ಸದ್ಯದಲ್ಲಿಯೇ ನಿಗದಿಯಾಗಲಿದೆ. ಅದು ಆಗಸ್ಟ್ ಮಧ್ಯಭಾಗದಲ್ಲಿ ಇರಬಹುದು. ಲೋಕಸಭೆ ಚುನಾವಣೆಗೆ ಮುನ್ನ ರೈತರನ್ನು ಭೇಟಿ ಮಾಡುವ ಕಾರ್ಯಕ್ರಮ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್  ತಿಳಿಸಿದ್ದಾರೆ.

ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್ ಗಢ ರಾಜ್ಯಗಳಲ್ಲಿ ಈ ವರ್ಷ ನಡೆಯುವ ಚುನಾವಣಾ ಸಂಬಂಧ ರ್ಯಾಲಿಗಳಿಗೆ ಹೊರತಾದ ರ್ಯಾಲಿ ಇದಾಗಲಿದೆ. ಪ್ರಧಾನಿ ಮೋದಿಯವರು 150 ಕ್ಷೇತ್ರಗಳಲ್ಲಿ ಸುಮಾರು 50 ರ್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ. ಮೋದಿಯವರ ಜೊತೆಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಹಿರಿಯ ನಾಯಕರಾದ ನಿತಿನ್ ಗಡ್ಕರಿ ಮತ್ತು ರಾಜನಾಥ್ ಸಿಂಗ್ ಅವರು ಕೂಡ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಜುಲೈ 28ಕ್ಕೆ ಅಮಿತ್ ಶಾ ಭೇಟಿಬಿಜೆಪಿ ಅಧ್ಯಕ್ಷ ಅಮಿತ್ ಶಾ ಇದೇ ತಿಂಗಳ 28ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದು, ಪಕ್ಷದಲ್ಲಿ ಸ್ಥಾನಮಾನಗಳನ್ನು ಹಂಚಿಕೆ ಮಾಡಿ ಲೋಕಸಭಾ ಚುನಾವಣೆಗೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಸನ್ನದ್ಧು ಮಾಡಲಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯವರೆಗೆ ಬಿ ಎಸ್ ಯಡಿಯೂರಪ್ಪನವರೇ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆಯಿದೆ.

Vishwa News 24

Recent Posts

ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು – vishwanews24

ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು…

2 days ago

ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ – vishwanews24

ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ ಬೆಂಗಳೂರು:…

2 days ago

ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್‌ – vishwanews24

ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್‌ ಕಾರವಾರ: ಉತ್ತರ ಕನ್ನಡ  ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ,…

2 days ago

ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್‌ – vishwanews24

ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್‌ ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ನಮ್ಮ…

2 days ago

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ – vishwanews24

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ ದಾವಣಗೆರೆ: ಹರಿಹರದ  ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣ ಆದೇಶವನ್ನು…

3 days ago

ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ – ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು – vishwanews24

ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ - ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು ವಿಟ್ಲ:…

3 days ago