Featured

ಲೋಕಸಭೆ ಚುನಾವಣೆ : ಕಾಂಗ್ರೆಸ್​ ಸೇರಿದರೆ ಪ್ರಕಾಶ್​​ ರೈ ಅವರಿಗೆ ಬೆಂಬಲ : ಕೆಪಿಸಿಸಿ ಅಧ್ಯಕ್ಷ ​​ ಗುಂಡೂರಾವ್ – Vishwanews24

ಬೆಂಗಳೂರು:  ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ಎಂದು ಕೋರಿದ್ದ ಬಹುಭಾಷ ನಟನಿಗೆ ರಾಜ್ಯ ಕಾಂಗ್ರೆಸ್​​ ನಿರಾಸೆ ಮೂಡಿಸಿದೆ.  ನಮ್ಮದು ರಾಷ್ಟ್ರೀಯ ಪಕ್ಷ. ಹೀಗಾಗಿ ಪರೋಕ್ಷ ಬೆಂಬಲ ನೀಡಲು ಸಾಧ್ಯವಿಲ್ಲ. ಒಂದು ವೇಳೆ ಕಾಂಗ್ರೆಸ್​ ಸೇರಿದರೇ ಪ್ರಕಾಶ್​​ ರೈ ಅವರಿಗೆ ಬೆಂಬಲ ನೀಡಬಹುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​​ ಗುಂಡೂರಾವ್​​​ ತಿಳಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾಗರರ ಜತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್​​ ಗುಂಡೂರಾವ್​​ ಅವರು, ಪ್ರಕಾಶ್​​​ ರೈ ವಿಚಾರವನ್ನು ಈಗಾಗಲೇ ಸಭೆಯಲ್ಲಿ ಚರ್ಚಿಸಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ನನ್ನ ಜತೆಗೆ ಬೆಂಬಲ ನೀಡಿ ಎಂದು ರೈ ಮನವಿ ಮಾಡಿದ್ದಾರೆ. ನಮ್ಮದು ರಾಷ್ಟ್ರೀಯ ಪಕ್ಷ. ಆದ್ದರಿಂದ ಅವರು ಕಾಂಗ್ರೆಸ್​​ ಸೇರಿದರೆ ಬೆಂಬಲ ನೀಡಬಹುದು ಎಂದು ಭರವಸೆ ನೀಡಿದ್ದಾರೆ. ಇತ್ತ ಬೆಂಗಳೂರು ಸೆಂಟ್ರಲ್​​​ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸುತ್ತಿರುವ ರೈ ಅವರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತದೆ ಎಂಬ ಸಣ್ಣ ನಿರೀಕ್ಷೆಯಿತ್ತು. ಆದರೀಗ ಎಲ್ಲವೂ ಹುಸಿಯಾಗಿದೆ. ಆದರಿಂದ ರೈ ತಮ್ಮ ಸ್ವಂತ ಬಲದಿಂದಲೇ ಹೋರಾಡಬೇಕಿದೆ.

ಇನ್ನು  ಪ್ರಸ್ತುತ ಬೆಂಗಳೂರು ಸೆಂಟ್ರಲ್ ಕ್ಷೇತ್ರವು ಬಿಜೆಪಿಯ ವಶದಲ್ಲಿದೆ. ಇಲ್ಲಿನ ಹಾಲಿ ಸಂಸದ ಪಿ.ಸಿ.ಮೋಹನ್ ಎರಡು ಬಾರಿ ಗೆದ್ದಿದ್ದು, ಹ್ಯಾಟ್ರಿಕ್​​ ಗೆಲುವಿನ ನಿರೀಕ್ಷೆಯಲ್ಲಿದ್ಧಾರೆ. ಈಗಾಗಲೇ ಚುನಾವಣೆ ಪ್ರಚಾರ ಆರಂಬಿಸಿರುವ ಪ್ರಕಾಶ್​​ ರೈ ಅವರು, ಯೋಚಿಸಿ ವೋಟ್​​ ಮಾಡುವಂತೆ ಜನರಲ್ಲಿ ಮನವಿ ಮಾಡುತ್ತಿದ್ದಾರೆ. ಅಲ್ಲದೇ ಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎನ್ನಲಾಗಿದೆ.

Vishwa News 24

Recent Posts

ಕಾಪು : ಭಾರತ್ ಜೋಡೋ ಮತ್ತು ಗ್ಯಾರಂಟಿ ಯೋಜನೆಗಳ ಮಾಹಿತಿ ಕಾರ್ಯಾಗಾರ – vishwanews24

ಕಾಪು : ಭಾರತ್ ಜೋಡೋ ಮತ್ತು ಗ್ಯಾರಂಟಿ ಯೋಜನೆಗಳ ಮಾಹಿತಿ ಕಾರ್ಯಾಗಾರ ಕರ್ನಾಟಕ ಸರ್ಕಾರದ ಯೋಜನೆಗಳಾದ ಭಾರತ್ ಜೋಡೋ ಮತ್ತು…

1 day ago

ದೇಶ ವಿರೋಧಿ ಚಟುವಟಿಕೆ ಮಾಡಿದಾಗ ಆರ್‌ಎಸ್‌ಎಸ್ ವಿರುದ್ಧ ಮಾತನಾಡಬೇಕಾಗುತ್ತೆ : ಬಿ.ಕೆ. ಹರಿಪ್ರಸಾದ್‌ – vishwanews24

ದೇಶ ವಿರೋಧಿ ಚಟುವಟಿಕೆ ಮಾಡಿದಾಗ ಆರ್‌ಎಸ್‌ಎಸ್ ವಿರುದ್ಧ ಮಾತನಾಡಬೇಕಾಗುತ್ತೆ : ಬಿ.ಕೆ. ಹರಿಪ್ರಸಾದ್‌ ಬೀದರ್‌: ‘ದೇಶ ವಿರೋಧಿ ಚಟುವಟಿಕೆ ಮಾಡಿದಾಗ…

1 day ago

ಬಿಜೆಪಿಯಿಂದ ಅಧಿವೇಶನಕ್ಕೆ ಅಡ್ಡಿ ಹಿಂದೆ ಹಿಡನ್ ಅಜೆಂಡಾ: ಯು.ಟಿ.ಖಾದರ್ ಆರೋಪ – vishwanews24

ವಿಧಾನಸಭೆ ಅಧಿವೇಶನ ರಾಜಕೀಯ ಮಾಡುವ ಸಭಾಂಗಣ ಆಗಬಾರದು .. ಪರಿಹಾರ ಕಂಡುಕೊಳ್ಳಲು ಇರುವ ವೇದಿಕೆಗೆ ಅಡ್ಡಿ ಪಡಿಸಿರುವ ಬಿಜೆಪಿಯನ್ನು ಜನತೆ…

1 day ago

ಕುಂದಾಪುರ: ಸಮುದ್ರ ಮಧ್ಯದಲ್ಲಿ ಸಿಲುಕಿಕೊಂಡಿದ್ದ ದೋಣಿ – ನಾಲ್ವರು ಮೀನುಗಾರರ ರಕ್ಷಣೆ – vishwanews24

ಕುಂದಾಪುರ: ಸಮುದ್ರ ಮಧ್ಯದಲ್ಲಿ ಸಿಲುಕಿಕೊಂಡಿದ್ದ ದೋಣಿ - ನಾಲ್ವರು ಮೀನುಗಾರರ ರಕ್ಷಣೆ ಕುಂದಾಪುರ :ಮೀನುಗಾರಿಕಾ ದೋಣಿಯ ಎಂಜಿನ್ ದೋಷದಿಂದ ಸಮುದ್ರದ…

1 day ago

ಮಂಗಳೂರು: ಆಹಾರ ಸುರಕ್ಷತೆ ತಪಾಸಣೆಗೆ ತಾಲೂಕು ಮಟ್ಟದಲ್ಲಿ ವಾಚ್‌ಟೀಮ್ : ಸಚಿವ ಯು.ಟಿ.ಖಾದರ್ – vishwanews24

ಮಂಗಳೂರು: ಕೃತಕ ಪನ್ನೀರ್, ಫುಡ್ ಕಲರ್‌, ಅಜಿನಮೊಟೊ ವಿರುದ್ಧ ಕ್ರಮ ಆಹಾರ ಸುರಕ್ಷತೆ ತಪಾಸಣೆಗೆ ತಾಲೂಕು ಮಟ್ಟದಲ್ಲಿ ವಾಚ್‌ಟೀಮ್ :…

2 days ago

ವಂದೇ ಭಾರತ್ ಪ್ರಾಯೋಗಿಕ ಸಂಚಾರ ಪೂರ್ಣ ; ಸುಬ್ರಹ್ಮಣ್ಯ ರೋಡ್ ನಿಂದ ಮಂಗಳೂರಿಗೆ ಯಶಸ್ವಿಯಾಗಿ ತೆರಳಿದ ರೈಲು  – vishwanews24

ವಂದೇ ಭಾರತ್ ಪ್ರಾಯೋಗಿಕ ಸಂಚಾರ ಪೂರ್ಣ ; ಸುಬ್ರಹ್ಮಣ್ಯ ರೋಡ್ ನಿಂದ ಮಂಗಳೂರಿಗೆ ಯಶಸ್ವಿಯಾಗಿ ತೆರಳಿದ ರೈಲು  ಪುತ್ತೂರು: ಹಲವು…

2 days ago