ನವದೆಹಲಿ, : ಜನವರಿ 1ರಿಂದ ಲ್ಯಾಂಡ್‌ಲೈನ್ ಫೋನ್‌ನಿಂದ ಯಾವುದೇ ಮೊಬೈಲ್‌ಗೆ ಕರೆ ಮಾಡಬೇಕಾದರೆ ಪ್ರಾರಂಭದಲ್ಲಿ ‘0’ ಒತ್ತುವುದನ್ನು ಕಡ್ಡಾಯ ಮಾಡಲಾಗಿದೆ.
ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರವು ಲ್ಯಾಂಡ್‌ಲೈನ್‌ನಿಂದ ಮೊಬೈಲ್‌ಗೆ ಕರೆ ಮಾಡುವ ಮುನ್ನ ‘0’ ಅನ್ನು ಡಯಲ್ ಮಾಡಬೇಕು ಎಂದು ಮೇ.29ರಂದು ದೂರಸಂಪರ್ಕ ಸಚಿವಾಲಯಕ್ಕೆ ಶಿಫಾರಸ್ಸು ಮಾಡಿತ್ತು. ನ.20ರಂದು ಸುತ್ತೋಲೆ ಹೊರಡಿಸಿದ ಟ್ರಾಯ್ ಈ ಶಿಫಾರಸ್ಸನ್ನು ಜಾರಿಗೆ ತರುವುದಾಗಿ ತಿಳಿಸಿದೆ.
ಗ್ರಾಹಕರು ಪ್ರಾರಂಭದಲ್ಲಿ ‘0’ ಸಂಖ್ಯೆಯನ್ನು ಒತ್ತದೇ ಕರೆ ಮಾಡಿದ್ದಲ್ಲಿ ರೆಕಾರ್ಡ್ ಮೂಲಕ ‘0’ ಅನ್ನು ಒತ್ತುವಂತೆ ಮಾಹಿತಿ ನೀಡಬೇಕು ಎಂದು ಕಂಪೆನಿಗಳಿಗೆ ಸೂಚನೆ ನೀಡಲಾಗಿದೆ.
ಈ ಬದಲಾವಣೆಯ ಬಗ್ಗೆ ಲ್ಯಾಂಡ್ ಲೈನ್ ಗ್ರಾಹಕರಿಗೆ ಮಾಹಿತಿ ನೀಡಬಹುದು ಎಂದು ಡಿಒಟಿ ಯ ವೆಬ್ ಸೈಟ್ ನಲ್ಲಿ ನವೆಂಬರ್ 20ರಂದು ಸುತ್ತೋಲೆ ಯಲ್ಲಿ ತಿಳಿಸಲಾಗಿದೆ. ‘ಸ್ಥಿರ-ದಿಂದ ಮೊಬೈಲ್ ಕರೆಗಳನ್ನು ‘0’ ಡಯಲ್ ಮಾಡಬೇಕು. ಸ್ಥಿರ-ಮೊಬೈಲ್ ಕರೆಗಳಿಗೆ ‘0’ ಒತ್ತಬೇಕು. ಡಯಲಿಂಗ್ ಮಾಡುವ ಅಗತ್ಯದ ಬಗ್ಗೆ ಸ್ಥಿರ ಲೈನ್ ಚಂದಾದಾರರಿಗೆ ಮಾಹಿತಿ ನೀಡಲು ಸೂಕ್ತ ವಾದ ಘೋಷಣೆಯನ್ನು ಫಿಕ್ಸೆಡ್ ಲೈನ್ ಸ್ವಿಚ್ ಗಳಲ್ಲಿ ನೀಡಬಹುದು’ ಎಂದು ಹೇಳಿದೆ.
ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…
ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…
ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು ಮಂಗಳೂರು: ಮಂಗಳೂರು ಪ್ರಾದೇಶಿಕ ಸಾರಿಗೆ…
ಕಾಪು: ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ಉಡುಪಿ: ಐದನೇ ವರ್ಷದ ಉಚ್ಚಿಲ ದಸರಾ ಲಲಿತ ಪಂಚಮಿಯ ಸಂಭ್ರಮ…
ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ ಉಡುಪಿ: ಉಚ್ಚಿಲ ಮಹಾಲಕ್ಷ್ಮೀ…
ಕೋಳಿಮರಿ ವಿತರಣೆ: ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ ಉಡುಪಿ: ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ…