Featured

ವಂಚನೆ ಆರೋಪ: ನಿರ್ದೇಶಕಿ ವಿಸ್ಮಯ ಗೌಡ ವಿರುದ್ಧ ಎಫ್​ಐಆರ್ ದಾಖಲು – vishwanews24

ವಂಚನೆ ಆರೋಪ: ನಿರ್ದೇಶಕಿ ವಿಸ್ಮಯ ಗೌಡ ವಿರುದ್ಧ ಎಫ್​ಐಆರ್ ದಾಖಲು

ಬೆಂಗಳೂರು: ನವನಿರ್ದೇಶಕಿ ವಿಸ್ಮಯ ಗೌಡ ವಿರುದ್ಧ ವಂಚನೆ ಆರೋಪ ಬಸವೇಶ್ವರನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

6.5 ಲಕ್ಷ ಸಾಲ ಪಡೆದು ಹಣ ನೀಡದೇ ವಿಸ್ಮಯ ಗೌಡ ವಂಚಿಸಿದ್ದಾರೆಂದು ಎಂದು ಹಿಮಾನ್ವಿ ಬಿಂದು ದೂರು ದಾಖಲಿಸಿದ್ದರು. ಸಾಲ ಮರಳಿಸುವಂತೆ ಕೇಳಿದಾಗ ಬೆದರಿಕೆ ಹಾಕಿದ್ದಾರೆ ಎಂದು ಹಿಮಾನ್ವಿ ದೂರು ದಾಖಲಿಸಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆ ಎಫ್‌ಐಆರ್ ದಾಖಲಿಸಲಾಗಿದೆ.

ದೂರಿನ ಸಾರಾಂಶದಂತೆ, 2019 ರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಹಿಮಾನ್ವಿಗೆ, ವಿಸ್ಮಯ ಗೌಡ ಪರಿಚಯವಾಗಿದ್ದರು. ತಾನು ಸಿನಿಮಾ ನಿರ್ದೇಶಕಿ ಹಾಗೂ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂ ನಲ್ಲಿ ಲೈಫ್ ಕೋಚರ್ ಆಗಿರುವುದಾಗಿ ಹೇಳಿಕೊಂಡಿದ್ದರು. ಪಿರ್ಯಾದುದಾರರು ಈಕೆಯ ಬಗ್ಗೆ ತಿಳಿದುಕೊಂಡು ಆರೋಪಿತೆಯ ಬಳಿ ಕೆಲವು ಬಾರಿ ಮ್ಯಾನಿಫೆಸ್ಟೇಶನ್ ಕ್ಲಾಸಸ್ ತೆಗೆದುಕೊಂಡಿದ್ದು ಆರೋಪಿತೆ ಕೆಲವು ಬಾರಿ ನಮ್ಮ ಕ್ಲಿನಿಕ್ಕೆ ಭೇಟಿ ನೀಡುತ್ತಿದ್ದು ಫೆಬ್ರವರಿ 2024 ರಲ್ಲಿ ವಿಸ್ಮಯಗೌಡ, ಹಿಮಾನ್ವಿ ಮನೆಗೆ ಭೇಟಿ ನೀಡಿದಾಗ ತನಗೆ ಹಣಕಾಸಿನ ತೊಂದರೆ ಇದ್ದು ಹಣ ನೀಡುವಂತೆ ಕೇಳಿಕೊಂಡಿದ್ದರು. ಆಗ ಹಿಮಾನ್ವಿ ಆರೋಪಿತೆಗೆ ತಮ್ಮ ತಾಯಿಯ ಖಾತೆಯಿಂದ ಪಡೆದ 5,00,000 ರೂ ಹಣವನ್ನು ಮತ್ತು ತನ್ನ ಉಳಿತಾಯ ಖಾತೆಯಲ್ಲಿದ್ದ 1,50,000 ರೂಗಳನ್ನು ಸೇರಿ ಒಟ್ಟು 6,50,000 ರೂ ಗಳನ್ನು ನೀಡಿದ್ದರು. ಆ ನಂತರ ಆರೋಪಿತೆ ಶ್ರೀಮತಿ ವಿಸ್ಮಯಗೌಡ ರವರು ಪೋಸ್ಟ್ ಡೆಟೆಡ್ ಚೆಕ್ ನಂ-080118 ರ ಮೂಲಕ 6,50,000 ರೂ ಗಳನ್ನು ವಿಸ್ಮಯ ಗೌಡ, ಹಿಮಾನ್ವಿಗೆ ನೀಡಿದ್ದರು.

Vishwa News 24

Recent Posts

ಉಡುಪಿ : ಮೂವರು ಪೊಲೀಸ್ ಸಿಬ್ಬಂದಿಗೆ ಸಿಎಂ ಚಿನ್ನದ ಪದಕ – vishwanews24

ಉಡುಪಿ : ಮೂವರು ಪೊಲೀಸ್ ಸಿಬ್ಬಂದಿಗೆ ಸಿಎಂ ಚಿನ್ನದ ಪದಕ ಉಡುಪಿ: ಪೊಲೀಸ್ ಇಲಾಖೆಯಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ…

6 minutes ago

ಎ.2ರಂದು ದ.ಕ. ಜಿಲ್ಲಾ ಎಸ್ಪಿ ಡಾ.ಅರುಣ್ ಕೆ., ಎಸಿಪಿ ನಜ್ಮಾ ಫಾರೂಕಿಗೆ ಸಿಎಂ ಪದಕ ಪ್ರದಾನ- vishwanews24

ಎ.2ರಂದು ದ.ಕ. ಜಿಲ್ಲಾ ಎಸ್ಪಿ ಡಾ.ಅರುಣ್ ಕೆ., ಎಸಿಪಿ ನಜ್ಮಾ ಫಾರೂಕಿಗೆ ಸಿಎಂ ಪದಕ ಪ್ರದಾನ ಮಂಗಳೂರು: ದಕ್ಷಿಣ ಕನ್ನಡ…

11 minutes ago

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ – vishwanews24

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…

2 days ago

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ – vishwanews24

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ ಮಂಗಳೂರು: ಯಕ್ಷಗಾನ…

3 days ago

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ – vishwanews24

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…

3 days ago

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ – vishwanews24

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…

3 days ago