Featured

ವಂದೇ ಮಾತರಂ,ರಾಷ್ಟ್ರಗೀತೆ ಹಾಡಿದರಷ್ಟೇ ದೇಶಪ್ರೇಮಿಗಳಲ್ಲ: ಮಧ್ಯಪ್ರದೇಶ ಸಿಎಂ ಕಮಲ್​’ನಾಥ್

ಭೋಪಾಲ್​: ನಾವು ಹೃದಯದಿಂದ ರಾಷ್ಟ್ರವಾದಿಗಳು. ಒಂದು ದಿನ ವಂದೇ ಮಾತರಂ, ರಾಷ್ಟ್ರಗೀತೆ ಹಾಡಿದವರೆಲ್ಲ ದೇಶಪ್ರೇಮಿಗಳಾಗಲು ಸಾಧ್ಯವಿಲ್ಲ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್​ ನಾಥ್​ ಹೇಳಿದ್ದಾರೆ.

ಮಧ್ಯಪ್ರದೇಶದ ಸಚಿವಾಲದಲ್ಲಿ ತಿಂಗಳ ಆರಂಭದ ಮೊದಲ ದಿನ ರಾಷ್ಟ್ರಗೀತೆ ಮತ್ತು ವಂದೇ ಮಾತರಂ ಹಾಡುವ ಪದ್ಧತಿಯನ್ನು ಈ ಹಿಂದೆ ಬಿಜೆಪಿ ಜಾರಿಗೆ ತಂದಿತ್ತು. ಆದರೆ, ಈ ಸಂಪ್ರದಾಯಕ್ಕೆ ಕಾಂಗ್ರೆಸ್ ತಡೆ ನೀಡಿದೆ. “ರಾಷ್ಟ್ರಗೀತೆ ದೇಶಪ್ರೇಮದ ಸಂಕೇತ. ಸಚಿವಾಲಯಗಳಲ್ಲಿ ತಿಂಗಳ ಮೊದಲ ದಿನ ರಾಷ್ಟ್ರಗೀತೆ, ಒಂದೇ ಮಾತರಂ ಹಾಡುವುದನ್ನು ಮತ್ತೆ ಜಾರಿಗೆ ತರಬೇಕು. ನಾವು ಜಾರಿಗೆ ತಂದಿರುವ ಈ ಸತ್ಸಂಪ್ರದಾಯವನ್ನು ಕಾಂಗ್ರೆಸ್​ ಮುಂದುವರಿಸಿಕೊಂಡು ಹೋಗಬೇಕು ಎಂದು ನಾನು ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತೇನೆ. ವಂದೇ ಮಾತರಂ ಕೇವಲ ಗೀತೆಯಲ್ಲ. ಬದಲಿಗೆ ಅದು ಮಂತ್ರ. ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಆದರೆ, ರಾಷ್ಟ್ರ ಮೊದಲು ಎಂಬುದನ್ನು ಎಲ್ಲರೂ ಅರಿಯಬೇಕು,” ಎಂದು ಚೌಹಾಣ್​ ವಾಗ್ದಾಳಿ ನಡೆಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಕಮಲ್​ ನಾಥ್​,” ರಾಷ್ಟ್ರಗೀತೆಯ ವಿರುದ್ಧವಾಗಿ ನಡೆದುಕೊಳ್ಳುವ ಅಥವಾ ಅದನ್ನು ಪ್ರತಿಭಟಿಸುವ ಯಾವುದೇ ಉದ್ದೇಶ ಸರ್ಕಾರದ್ದಲ್ಲ. ಹೊಸ ಮಾದರಿಯ ಆದೇಶ ಜಾರಿಗೆ ತರುವ ಉದ್ದೇಶದಿಂದ ಸಚಿವಾಲಯದಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಸದ್ಯಕ್ಕೆ ತಡೆ ನೀಡಿದ್ದೇವೆ. ವಂದೇ ಮಾತರಂ ಹಾಡದವರು ದೇಶಪ್ರೇಮಿಗಳಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ, ನಾವು ಹೃದಯದಿಂದ ರಾಷ್ಟ್ರವಾದಿಗಳು ಎಂದು ನಂಬಿದ್ದೇವೆ. ವಂದೇ ಮಾತರಂ ಹಾಡಿದ್ದವರೆಲ್ಲ ದೇಶಭಕ್ತರಾಗಲು ಸಾಧ್ಯವಿಲ್ಲ. ದೇಶಪ್ರೇಮವನ್ನು ರಾಷ್ಟ್ರಗೀತೆ ಹಾಡುವ ಮೂಲಕ ಅಳೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Vishwa News 24

Recent Posts

ಭಟ್ಕಳ ಕಪ್ಪೆಚಿಪ್ಪು ದುರಂತ : ಮೃತ 11 ಮಂದಿಯ ಸಾಮೂಹಿಕ ಅಂತ್ಯಕ್ರಿಯೆ – vishwanews24

ಭಟ್ಕಳ ಕಪ್ಪೆಚಿಪ್ಪು ದುರಂತ : ಮೃತ 11 ಮಂದಿಯ ಸಾಮೂಹಿಕ ಅಂತ್ಯಕ್ರಿಯೆ ಕಾರವಾರ: ಕಪ್ಪೆಚಿಪ್ಪು ತೆಗೆಯಲು ಹೋಗಿ ಸಾವನ್ನಪ್ಪಿದ್ದ 11 ಮಂದಿಯ…

6 minutes ago

ಕಂದಕಕ್ಕೆ ಉರುಳಿದ ಕಾರು : ಎಂಟು ಮಂದಿ ಸಾವು – vishwanews24

ಕಂದಕಕ್ಕೆ ಉರುಳಿದ ಕಾರು : ಎಂಟು ಮಂದಿ ಸಾವು ಜೈಪುರ: ಸ್ಕಾರ್ಪಿಯೋ ಎಸ್‌ಯುವಿ  ಕಾರೊಂದು ಸುಮಾರು 700 ಅಡಿ ಕಂದಕಕ್ಕೆ…

13 minutes ago

ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ; ಆರೋಪಿ ಪತ್ತೆಗೆ ತೀವ್ರಗೊಂಡ ತನಿಖೆ – vishwanews24

ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ; ಆರೋಪಿ ಪತ್ತೆಗೆ ತೀವ್ರಗೊಂಡ ತನಿಖೆ ಕೊಲ್ಲೂರು: ಮೇ 17ರ…

27 minutes ago

ಮಂಗಳೂರು : ಎಬೋಲಾ ವೈರಸ್ ಪ್ರಕರಣ ; ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಣೆ – vishwanews24

ಮಂಗಳೂರು : ಹೆಚ್ಚುತ್ತಿರುವ ಎಬೋಲಾ ವೈರಸ್ ಪ್ರಕರಣ ; ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಣೆ ಮಂಗಳೂರು : ಆಫ್ರಿಕಾ…

1 hour ago

ಚುನಾವಣೆ ಗೆಲ್ಲಲು ಬಿಜೆಪಿಯಿಂದ ಚುನಾವಣಾ ಆಯೋಗದ ದುರುಪಯೋಗ : ದಿನೇಶ್ ಗುಂಡೂರಾವ್ -vishwanews24

ಇ.ಡಿ, ಐಟಿಯವರು ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ : ದಿನೇಶ್ ಗುಂಡೂರಾವ್ ಆರೋಪ  ಮಂಗಳೂರು: ಚುನಾವಣೆ ಗೆಲ್ಲಲು ಬಿಜೆಪಿಯಿಂದ ಚುನಾವಣಾ ಆಯೋಗದ…

3 days ago

ಕೇರಳ ವಿಧಾನಸಭೆಯ ನೂತನ ಸ್ಪೀಕರ್ ಆಗಿ ತಿರುವಾಂಚೂರ್ ರಾಧಾಕೃಷ್ಣನ್ ಆಯ್ಕೆ -vishwanews24

ಕೇರಳ ವಿಧಾನಸಭೆಯ ನೂತನ ಸ್ಪೀಕರ್ ಆಗಿ ತಿರುವಾಂಚೂರ್ ರಾಧಾಕೃಷ್ಣನ್ ಆಯ್ಕೆ ತಿರುವನಂತಪುರಂ : ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಎಂಟು…

3 days ago