ಶಿವಮೊಗ್ಗ: ಕೊರೊನಾ ಸೋಂಕಲ್ಲ, ಇದು ಪ್ರೀತಿಯ ಸೋಂಕು ಎಂದು ವರನೋರ್ವ ವಿಶೇಷವಾಗಿ ಲಗ್ನ ಪತ್ರಿಕೆಯೊಂದನ್ನು ಮುದ್ರಿಸಿದ್ದು, ಈ ಪತ್ರಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಯುವಕ ವಿನೋದ್ ಇದೇ ತಿಂಗಳ ಜೂ. 15ರಂದು ಚಂದನಾ ಅವರೊಂದಿಗೆ ವಿವಾಹವಾಗುತ್ತಿದ್ದಾರೆ. ಇವರ ವಿವಾಹಕ್ಕೆ ವರ ವಿನೋದ್ ವಿಭಿನ್ನವಾದ ಲಗ್ನ ಪತ್ರಿಕೆ ಮಾಡಿಸಿದ್ದು, ಇದರಲ್ಲಿ ನಿಶ್ಚಿತಾರ್ಥವನ್ನು ಲಾಕ್‍ಡೌನ್‍ಗೆ ಮತ್ತು ಮದುವೆಯನ್ನು ಸೀಲ್‍ಡೌನ್‍ಗೆ ಹೋಲಿಸಲಾಗಿದೆ.
ಈ ಪತ್ರಿಕೆಯ ಮುಂಭಾಗದಲ್ಲಿ ವಿನೋದ್ ಹಾಗೂ ಚಂದನಾ ಇವರಿಬ್ಬರಿಗೂ ಪರಸ್ಪರ ಪ್ರೀತಿ ಎಂಬ ಸೋಂಕು ಇರುವುದು ದೃಢಪಟ್ಟಿದ್ದು, ನಿಶ್ಚಿತಾರ್ಥದ ಮೂಲಕ ಲಾಕ್‍ಡೌನ್ ಮಾಡಿ, ಮದುವೆ ಎಂಬ ಸೀಲ್‍ಡೌನ್ ಮಾಡಿ, ನಂತರ ಜೀವನವಿಡಿ ಲವ್ ಕ್ವಾರಂಟೈನ್ ಮಾಡಲು ಗುರುಹಿರಿಯ ಬಂಧುಮಿತ್ರರು ತೀರ್ಮಾನಿಸಿದ್ದು, ತಾವುಗಳು ಮುಖಕ್ಕೆ ಮಾಸ್ಕ್ ಧರಿಸಿ, ಕೈಗಳಿಗೆ ಸ್ಯಾನಿಟೈಜರ್ ಹಚ್ಚಿಕೊಂಡು ಸಾಮಾಜಿಕ ಅಂತರದೊಂದಿಗೆ ಬಂದು ಆಶೀರ್ವಾದ ಮಾಡಬೇಕು ಎಂದು ಅಹ್ವಾನಿಸುತ್ತೇವೆ ಎಂದು ಬರೆಯಲಾಗಿದೆ.
ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…