ಒಡಿಶಾ:ವಾಣಿಜ್ಯ ವಿಮಾನದ ಪೈಲಟ್ ಆದ ಬುಡಕಟ್ಟು ಸಮುದಾಯದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಒಡಿಶಾದ ಅನುಪ್ರಿಯಾ ಮಧುಮಿತಾ ಲಾಕ್ರಾ ಪಾತ್ರರಾಗಿದ್ದಾರೆ.
ಮಲ್ಕಂಗಿರಿ ನಕ್ಸಲ್ ಪೀಡಿತ ಪ್ರದೇಶವಾಗಿದ್ದು, ಹಿಂದುಳಿದ ಜಿಲ್ಲೆ ಕೂಡ ಹೌದು. ಅಲ್ಲಿ ಉನ್ನತ ಶಿಕ್ಷಣ ಹಲವರಿಗೆ ಗಗನ ಕುಸುಮವಾಗಿಯೇ ಉಳಿದುಬಿಟ್ಟಿದೆ. ಆದರೆ ಅನುಪ್ರಿಯಾ ಈ ವಿಷಯದಲ್ಲಿ ಸ್ವಲ್ಪ ವಿಭಿನ್ನ. ಆಕೆಗೆ ತನ್ನ ಗುರಿ ತಲುಪಲು ಯಾವ ಸಮಸ್ಯೆಯೂ ಅಡ್ಡಿಯಾಗಲಿಲ್ಲ. ಚಿಕ್ಕವಯಸ್ಸಿನಲ್ಲೇ ಪೈಲಟ್ ಆಗಬೇಕೆಂಬ ಮಹತ್ವದ ಕನಸು ಹೊತ್ತಿದ್ದ ಬುಡಕಟ್ಟು ಜನಾಂಗದ ಅನುಪ್ರಿಯಾ 7 ವರ್ಷಗಳ ಸತತ ಪರಿಶ್ರಮದ ಬಳಿಕ ತನ್ನ ಗುರಿ ಮುಟ್ಟಿದ್ದಾಳೆ.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅನುಪ್ರಿಯಾ ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ. “ಬುಡಕಟ್ಟು ಜನಾಂಗದ ಅನುಪ್ರಿಯಾ ಮಾಡಿರುವ ಸಾಧನೆಯನ್ನು ಕೇಳಿ ತುಂಬಾ ಸಂತೋಷವಾಗುತ್ತಿದೆ. ಆಕೆಯ ಯಶಸ್ಸು, ಸಾಧನೆ ಹಲವರಿಗೆ ಮಾರ್ಗದರ್ಶನವಾಗಲಿದೆ. ಅನುಪ್ರಿಯಾಳ ಕಠಿಣ ಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಗುರಿ ಮುಟ್ಟಲು ಸಾಧ್ಯವಾಗಿದೆ,” ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪೈಲಟ್ ತರಬೇತಿಗೆ ಹಣ ಹೊಂದಿಸುವುದು ಕಷ್ಟವಾದರೂ, ಸಾಲ ಮಾಡಿ, ಸಂಬಂಧಿಕರ ಬಳಿ ಸಹಾಯ ಪಡೆದು ಮಗಳಿಗೆ ತರಬೇತಿ ಕೊಡಿಸಿದೆ. ಆಕೆ ಬಯಸಿದ ಕ್ಷೇತ್ರದಲ್ಲಿಯೇ ಶಿಕ್ಷಣ ಕೊಡಿಸಬೇಕು ಎನ್ನುವುದಷ್ಟೇ ನನ್ನ ಮನಸ್ಸಿನಲ್ಲಿತ್ತು. ಬಡತನವಿದ್ದರೂ ಮಗಳು ದೊಡ್ಡ ಕನಸು ಕಾಣುವುದಕ್ಕೆ ನಾವು ಎಂದೂ ಅಡ್ಡಿ ಮಾಡಲಿಲ್ಲ. ಆಕೆ ಏನು ಕನಸು ಕಂಡಿದ್ದಳೊ ಅದನ್ನೇ ಆಗಿದ್ದಾಳೆ ಎನ್ನುವ ಖುಷಿ ನಮಗಿದೆ. ಎಲ್ಲಾ ಹೆಣ್ಣುಮಕ್ಕಳಿಗೂ ನನ್ನ ಮಗಳು ಆದರ್ಶವಾಗಬೇಕು ಎನ್ನುವುದೇ ನನ್ನ ಆಸೆ. ಎಲ್ಲಾ ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ಒತ್ತಾಸೆಯಾಗಿ ನಿಲ್ಲಬೇಕು ಎಂದೇ ನಾನು ಕೋರುತ್ತೇನೆ’ ಎಂದು ಜಿಮ್ಜಾ ಅಭಿಪ್ರಾಯ ವ್ಯಕ್ತಪಡಿಸಿದರು.
ಉಡುಪಿ : ಮೂವರು ಪೊಲೀಸ್ ಸಿಬ್ಬಂದಿಗೆ ಸಿಎಂ ಚಿನ್ನದ ಪದಕ ಉಡುಪಿ: ಪೊಲೀಸ್ ಇಲಾಖೆಯಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ…
ಎ.2ರಂದು ದ.ಕ. ಜಿಲ್ಲಾ ಎಸ್ಪಿ ಡಾ.ಅರುಣ್ ಕೆ., ಎಸಿಪಿ ನಜ್ಮಾ ಫಾರೂಕಿಗೆ ಸಿಎಂ ಪದಕ ಪ್ರದಾನ ಮಂಗಳೂರು: ದಕ್ಷಿಣ ಕನ್ನಡ…
ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…