Featured

ವಾಣಿಜ್ಯ ವಿಮಾನದ ಪೈಲಟ್‌ ಆದ ಬುಡಕಟ್ಟು ಸಮುದಾಯದ ಮೊದಲ ಮಹಿಳೆ ಒಡಿಶಾದ ಅನುಪ್ರಿಯಾ -Vishwanews24

ಒಡಿಶಾ:ವಾಣಿಜ್ಯ ವಿಮಾನದ ಪೈಲಟ್‌ ಆದ ಬುಡಕಟ್ಟು ಸಮುದಾಯದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಒಡಿಶಾದ ಅನುಪ್ರಿಯಾ ಮಧುಮಿತಾ ಲಾಕ್ರಾ ಪಾತ್ರರಾಗಿದ್ದಾರೆ.

ಮಲ್ಕಂಗಿರಿ ನಕ್ಸಲ್​ ಪೀಡಿತ ಪ್ರದೇಶವಾಗಿದ್ದು, ಹಿಂದುಳಿದ ಜಿಲ್ಲೆ ಕೂಡ ಹೌದು. ಅಲ್ಲಿ ಉನ್ನತ ಶಿಕ್ಷಣ ಹಲವರಿಗೆ ಗಗನ ಕುಸುಮವಾಗಿಯೇ ಉಳಿದುಬಿಟ್ಟಿದೆ. ಆದರೆ ಅನುಪ್ರಿಯಾ ಈ ವಿಷಯದಲ್ಲಿ ಸ್ವಲ್ಪ ವಿಭಿನ್ನ. ಆಕೆಗೆ ತನ್ನ ಗುರಿ ತಲುಪಲು ಯಾವ ಸಮಸ್ಯೆಯೂ ಅಡ್ಡಿಯಾಗಲಿಲ್ಲ. ಚಿಕ್ಕವಯಸ್ಸಿನಲ್ಲೇ ಪೈಲಟ್​ ಆಗಬೇಕೆಂಬ ಮಹತ್ವದ ಕನಸು ಹೊತ್ತಿದ್ದ ಬುಡಕಟ್ಟು ಜನಾಂಗದ ಅನುಪ್ರಿಯಾ 7 ವರ್ಷಗಳ ಸತತ ಪರಿಶ್ರಮದ ಬಳಿಕ ತನ್ನ ಗುರಿ ಮುಟ್ಟಿದ್ದಾಳೆ.

ಒಡಿಶಾ ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ಅನುಪ್ರಿಯಾ ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ. “ಬುಡಕಟ್ಟು ಜನಾಂಗದ ಅನುಪ್ರಿಯಾ ಮಾಡಿರುವ ಸಾಧನೆಯನ್ನು ಕೇಳಿ ತುಂಬಾ ಸಂತೋಷವಾಗುತ್ತಿದೆ. ಆಕೆಯ ಯಶಸ್ಸು, ಸಾಧನೆ ಹಲವರಿಗೆ ಮಾರ್ಗದರ್ಶನವಾಗಲಿದೆ. ಅನುಪ್ರಿಯಾಳ ಕಠಿಣ ಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಗುರಿ ಮುಟ್ಟಲು ಸಾಧ್ಯವಾಗಿದೆ,” ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪೈಲಟ್‌ ತರಬೇತಿಗೆ ಹಣ ಹೊಂದಿಸುವುದು ಕಷ್ಟವಾದರೂ, ಸಾಲ ಮಾಡಿ, ಸಂಬಂಧಿಕರ ಬಳಿ ಸಹಾಯ ಪಡೆದು ಮಗಳಿಗೆ ತರಬೇತಿ ಕೊಡಿಸಿದೆ. ಆಕೆ ಬಯಸಿದ ಕ್ಷೇತ್ರದಲ್ಲಿಯೇ ಶಿಕ್ಷಣ ಕೊಡಿಸಬೇಕು ಎನ್ನುವುದಷ್ಟೇ ನನ್ನ ಮನಸ್ಸಿನಲ್ಲಿತ್ತು. ಬಡತನವಿದ್ದರೂ ಮಗಳು ದೊಡ್ಡ ಕನಸು ಕಾಣುವುದಕ್ಕೆ ನಾವು ಎಂದೂ ಅಡ್ಡಿ ಮಾಡಲಿಲ್ಲ. ಆಕೆ ಏನು ಕನಸು ಕಂಡಿದ್ದಳೊ ಅದನ್ನೇ ಆಗಿದ್ದಾಳೆ ಎನ್ನುವ ಖುಷಿ ನಮಗಿದೆ. ಎಲ್ಲಾ ಹೆಣ್ಣುಮಕ್ಕಳಿಗೂ ನನ್ನ ಮಗಳು ಆದರ್ಶವಾಗಬೇಕು ಎನ್ನುವುದೇ ನನ್ನ ಆಸೆ. ಎಲ್ಲಾ ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ಒತ್ತಾಸೆಯಾಗಿ ನಿಲ್ಲಬೇಕು ಎಂದೇ ನಾನು ಕೋರುತ್ತೇನೆ’ ಎಂದು ಜಿಮ್ಜಾ ಅಭಿಪ್ರಾಯ ವ್ಯಕ್ತಪಡಿಸಿದರು.

Vishwa News 24

Recent Posts

ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು – vishwanews24

ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು ಮೈಸೂರು: ಒಣಗಿದ ದಾಸವಾಳ ಹೂನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದ…

48 seconds ago

ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ – vishwanews24

ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉಡುಪಿ : ಜಿಲ್ಲಾಡಳಿತ, ಜಿಪಂ, ಕೌಶಲ್ಯಾಭಿವೃದ್ಧಿ, ಉದ್ಯಮ…

10 minutes ago

ಅಡುಗೆ ಅನಿಲದ ಅಭಾವ – ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ – vishwanews24

ಅಡುಗೆ ಅನಿಲದ ಅಭಾವ - ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಬೆಂಗಳೂರು : ಗಲ್ಫ್…

26 minutes ago

ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ – ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ : ಪೊಲೀಸ್ ಆಯುಕ್ತ – vishwanews24

ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ - ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ…

35 minutes ago

ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ – vishwanews24

ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಕಾಪು: ಉಳಿಯಾರಗೋಳಿ ಗ್ರಾಮದ ನೀಲಾಧರ ಬಂಗೇರ (58) ಇಲಿ ಪಾಷಾಣ…

1 hour ago

ಬೆಳ್ತಂಗಡಿ: ನವವಿವಾಹಿತ ಉದ್ಯಮಿ ಆತ್ಮಹತ್ಯೆಗೆ ಶರಣು – vishwanews24

ಬೆಳ್ತಂಗಡಿ: ನವವಿವಾಹಿತ ಉದ್ಯಮಿ ಆತ್ಮಹತ್ಯೆಗೆ ಶರಣು ಬೆಳ್ತಂಗಡಿ: ಕಳೆದ ತಿಂಗಳು ಮದುವೆಯಾಗಿದ್ದ ನವವಿವಾಹಿತ ಉದ್ಯಮಿಯೊಬ್ಬರು ಪತ್ನಿಯ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿ,…

1 hour ago