Featured

ವಾಯುಪಡೆಗೆ ದೇಶದ ಮೊದಲ ಮಹಿಳಾ ವೈಮಾನಿಕ ಇಂಜಿನಿಯರಾಗಿ ದಾಖಲೆ ನಿರ್ಮಿಸಿದ ಹಿನಾ ಜೈಸ್ವಾಲ್ – Vishwanews24

ಬೆಂಗಳೂರು: ದೇಶದ ಮೊದಲ ಮಹಿಳಾ ವೈಮಾನಿಕ ಇಂಜಿನಿಯರ್ ಆಗಿ ಚಂಡಿಗಡದ ಹಿನಾ ಜೈಸ್ವಾಲ್ ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದಾರೆ.ಚಂಡಿಗಡದವರಾದ ಹಿನಾ ಜೈಸ್ವಾಲ್, ಇಂದು ಯಲಹಂಕ ಹೊರ ವಲಯದ ವಾಯುಪಡೆ ನಿಲ್ದಾಣದ 112ನೇ ಹೆಲಿಕಾಪ್ಟರ್ ಘಟಕದಲ್ಲಿ ತಮ್ಮ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ದೇಶದ ಪ್ರಥಮ ಮಹಿಳಾ ಇಂಜಿನಿಯರ್ ಆಗಿ ಆಯ್ಕೆಗೊಂಡರು.

ಭಾರತೀಯ ವಾಯು ಸೇನೆಯು ತನ್ನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳಾ ವೈಮಾನಿಕ ಎಂಜಿನಿಯರ್​ ಅನ್ನು ನೇಮಕ ಮಾಡಿಕೊಂಡಿದೆ. ಈ ಮೂಲಕ ಇಲ್ಲಿಯ ವರೆಗೆ ಪುರುಷರಿಗೆ ಮಾತ್ರವೇ ಸೀಮಿತ ಎಂಬಂತಿದ್ದ ಸಂಪ್ರದಾಯವನ್ನು ಫ್ಲೈಟ್​ ಲೆಫ್ಟಿನೆಂಟ್​ ಹೀನಾ ಜೈಸ್ವಾಲ್​ ಅವರು ಮುರಿದಿದ್ದಾರೆ.

2015ರ ಜನವರಿ 5ರಂದು ಭಾರತೀಯ ವಾಯುಪಡೆಯ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರತಿಷ್ಠಿತ ಫ್ಲೈಟ್ ಇಂಜಿನಿಯರ್ ತರಬೇತಿಗೆ ಆಯ್ಕೆಯಾಗಿದ್ದ ಹಿನಾ, ಇದಕ್ಕೂ ಮುನ್ನ ವಿಮಾನ ಕ್ಷಿಪಣಿ ಪಡೆಯ ಅಗ್ನಿಶಾಮಕ ದಳ ಮತ್ತು ಬ್ಯಾಟರಿಯ ಕಮಾಂಡರ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.

ವಿಮಾನ ಅಥವಾ ಹೆಲಿಕಾಪ್ಟರ್​ಗಳಲ್ಲಿರುವ ಸಿಬ್ಬಂದಿಯಲ್ಲಿ ಫ್ಲೈಟ್​ ಎಂಜಿನಿಯರ್​ ಕೂಡ ಒಬ್ಬರಾಗಿರುತ್ತಾರೆ. ವಿಮಾನಗಳನ್ನು ನಿರ್ವಹಿಸಲು ಮತ್ತು ಅದರ ಸಂಕೀರ್ಣ ವ್ಯವಸ್ಥೆಯನ್ನು ನಿಭಾಯಿಸಲು ವಿಶೇಷ ಕೌಶಲ ಅಗತ್ಯ. ಇಷ್ಟು ದಿನ ಈ ಹುದ್ದೆ ಪುರುಷರಿಗಷ್ಟೇ ಮೀಸಲು ಎಂಬಂತಾಗಿತ್ತು. ಸದ್ಯ ಫ್ಲೈಟ್​ ಎಂಜಿನಿಯರ್ ಆಗಿ ನೇಮಕವಾಗಿರುವ ಹೀನಾ ಸಿಯಾಚಿನ್​ನ ಅತಿ ಎತ್ತರದ ಹಿಮ ಶ್ರೇಣಿಗಳಲ್ಲಿ ಮತ್ತು ಅಂಡಮಾನ್​ನಂಥ ಸಾಗರ ಪ್ರದೇಶಗಳಲ್ಲಿ ಸವಾಲಿನ ಕಾರ್ಯ ನಿರ್ವಹಿಸಲಿದ್ದಾರೆ.

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

3 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

3 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

3 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

3 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

3 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

3 days ago