ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ದರ್ಶನ್ ಅರೆಸ್ಟ್ ನಂತರ ಅವರ ಫ್ಯಾನ್ಸ್ ಅಂಧಾಭಿಮಾನ ಮಿತಿ ಮೀರಿದೆ. ವಾಹನಗಳ ಮೇಲೆ ದರ್ಶನ್ ಕೈದಿ ನಂಬರ್ ಸೇರಿದಂತೆ ತರಹೇವಾರಿ ಸ್ಟಿಕ್ಕರ್‌ಗಳನ್ನು ಅಂಟಿಸಿ ಅಭಿಮಾನ ಮೆರೆಯುತ್ತಿದ್ದಾರೆ. ಅಂತಹ ಅಭಿಮಾನಿಗಳಿಗೆ ಆರ್‌ಟಿಓ ಎಚ್ಚರಿಕೆ ಕೊಟ್ಟಿದೆ.
ಕೊಲೆ ಆರೋಪಿ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆದ್ಮೇಲೆ ಅವರ ಅಭಿಮಾನಿಗಳು ವಾಹನಗಳ ಮೇಲೆ ತರಹೇವಾರಿ ಬರಹ ಬರೆದು ಅಂಧಾಭಿಮಾನ ಮೆರೆಯುತ್ತಿದ್ದಾರೆ. ದರ್ಶನ್‌ಗೆ ನೀಡಿರುವ ಕೈದಿ ಸಂಖ್ಯೆ, ಸೇರಿದಂತೆ ವಾಹನಗಳ ಮೇಲೆ ಪ್ರಚೋದನಕಾರಿ, ಬೇರೆ ನಟರ ಫ್ಯಾನ್ಸ್‌ಗೆ ಟಾಂಗ್ ಕೊಡುವಂತ ಬರಹಗಳ ಸ್ಟಿಕರ್ ಅಳವಡಿಸಿಕೊಂಡಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ಈ ಬಗ್ಗೆ ನಿಗಾ ವಹಿಸಿರುವ ಪೊಲೀಸರು ಹಾಗೂ ಆರ್‌ಟಿಒ ಇಲಾಖೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದು, ʻಡಿಬಾಸ್ʼ ಅಭಿಮಾನಿಗಳಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಾಹನಗಳ ಮೇಲೆ ಬೇರೆ ಬೇರೆ ರೀತಿಯ ಬರಹಗಳನ್ನು ಅಳವಡಿಸಿಕೊಳ್ಳುವುದು ಹೆಚ್ಚಾಗಿ ಕಂಡುಬರುತ್ತಿದೆ. ಈ ಹಿಂದೆ ಈ ಮಟ್ಟಿಗೆ ಬರಹಗಳನ್ನ ವಾಹನಗಳ ಮೇಲೆ ಹಾಕಿರಲಿಲ್ಲ. ಈ ಬಗ್ಗೆ ಆರ್‌ಟಿಒ ಇಲಾಖೆ ಹಾಗೂ ಪೊಲೀಸ್ ಇಲಾಖೆ ಗಮನಕ್ಕೆ ಬಂದಿದ್ದು, ಅನವಶ್ಯಕ ಬರಹಗಳು ಕಂಡುಬಂದಲ್ಲಿ ಕ್ರಮ ತೆಗೆದುಕೊಳ್ಳೂತ್ತೇವೆ. ನೆಚ್ಚಿನ ನಟರ ಫೋಟೋಗಳನ್ನ ವಾಹನಗಳ ಮೇಲೆ ಹಾಕೋದು ಕಾನೂನು ಬಾಹಿರ ಎಂದು ಹೆಚ್ಚುವರಿ ಸಾರಿಗೆ ಆಯುಕ್ತ ಸಿ. ಮಲ್ಲಿಕಾರ್ಜುನ್ ಎಚ್ಚರಿಸಿದ್ದಾರೆ.
ನಂಬರ್ ಪ್ಲೇಟ್ ಯಾವ ರೀತಿ ಇರಬೇಕು ಎಂದು ಸುಪ್ರೀಂ ಕೋರ್ಟ್ ಆರ್‌ಟಿಒ ಇಲಾಖೆಗಳಿಗೆ ನಿರ್ದೇಶನ ಕೊಟ್ಟಿದೆ. ಅದರ ಅನ್ವಯವೇ ಅಧಿಕಾರಿಗಳು ಕೇಸು ದಾಖಲು ಮಾಡುತ್ತಾ ಬಂದಿದ್ದಾರೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಹಾಗೂ ಪ್ರಚಾರ ಮಾಡುವ ಕೆಲಸ ಆರ್‌ಟಿಒ ಇಲಾಖೆ ಮಾಡಿದೆ. ಕಳೆದ 3 ವರ್ಷಗಳಲ್ಲಿ ಈ ಸಂಬಂಧ ಹಲವು ಪ್ರಕರಣ ದಾಖಲು ಮಾಡಿದ್ದೇವೆ. ವಾಹನಗಳ ಮೇಲೆ ಬೇರೆ ಬೇರೆ ಬರಹಗಳನ್ನ ಬರೆಯುತ್ತಿದ್ದಾರೆ. ಯಾರೂ ಸಹ ಅನಾವಶ್ಯಕ ಬರಹಗಳನ್ನ ವಾಹನಗಳ ಮೇಲೆ ಹಾಕಬಾರದು. ಇನ್ಮೇಲೆ ಈ ರೀತಿ ಸ್ಟಾರ್ ವಾರ್ ರೀತಿ ಅನಾವಶ್ಯಕ ಬರಹ, ಟಾಂಗ್ ಕೊಡೋ ಬರಹಗಳನ್ನ ತೆಗೆದು ಹಾಕಿ, ಇಲ್ಲ ನಮ್ಮ ಕಠಿಣ ಕ್ರಮ ಗ್ಯಾರಂಟಿ ಅಂತಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಂಗಳೂರು : ಅ.2ರಂದು ಜಿಲ್ಲಾ ಯುವ ಕಾಂಗ್ರೆಸ್‌ನಿಂದ ‘ಸದ್ಭಾವನಾ ನಡಿಗೆ’ ಮಂಗಳೂರು: ಗಾಂಧಿ ಜಯಂತಿ ಪ್ರಯುಕ್ತ ದ.ಕ.ಜಿಲ್ಲಾ ಯುವ ಕಾಂಗ್ರೆಸ್…
ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ‘ಪಂಚಾಶತ್ ಜನ್ಮ ವೈಭವ’ ಅ.3ರಿಂದ ಧಾರ್ಮಿಕ ಕಾರ್ಯಕ್ರಮಗಳ ಚಾಲನೆ.. ವರ್ಷಪೂರ್ತಿ ಗೋಸೇವೆ, ಅನ್ನದಾನ, ಆರೋಗ್ಯ–ಶಿಕ್ಷಣ ಸೇವೆ…
ಸೌಜನ್ಯಾ ಪ್ರಕರಣದ ಮರುತನಿಖೆ: ಮಂಗಳೂರಿಗೆ ಆಗಮಿಸಿದ ನೂತನ ಎಸ್ಐಟಿ ತಂಡ ಮಂಗಳೂರು : ಸೌಜನ್ಯಾ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ…
ಪರಪ್ಪನ ಆಗ್ರಹಾರ ಕಾರಾಗೃಹದಲ್ಲಿ ಮತ್ತೆ ಮೊಬೈಲ್ ಫೋನ್, ಸಿಮ್ಕಾರ್ಡ್ ಗಳು ಪತ್ತೆ ಬೆಂಗಳೂರು: ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್…
ಎಂಆರ್‌ಪಿಎಲ್ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ನಿನ್ನೆ (ಸೆ.30ರ ಬುಧವಾರ) ನಡೆದ…
ಎಂಆರ್‌ಪಿಎಲ್ ಸ್ಫೋಟ ಪ್ರಕರಣ: ಮೃತರ ಕುಟುಂಬಕ್ಕೆ ಗರಿಷ್ಠ ಪರಿಹಾರ : ಭರತ್ ಶೆಟ್ಟಿ ಆಗ್ರಹ ಮಂಗಳೂರು: ಸ್ಫೋಟದ ನಿಖರ ಕಾರಣ…