“ಬ್ಯಾಂಕ್ಗಳ ತೊಟ್ಟಿಲು” ಎಂದೇ ಖ್ಯಾತಿ ಪಡೆದಿರುವ ಕರಾವಳಿಯಲ್ಲಿಯೇ ಕೆನರಾ ಬ್ಯಾಂಕ್, ವಿಜಯ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ಹಾಗೂ ಖಾಸಗಿ ಕರ್ನಾಟಕ ಬ್ಯಾಂಕ್‌ಗಳು ಸ್ಥಾಪನೆಯಾಗಿದ್ದು . ಈ ಪೈಕಿ ಕಾರ್ಪೊರೇಷನ್ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಪ್ರಧಾನ ಕಚೇರಿ ಮಂಗಳೂರಿನಲ್ಲಿದ್ದರೆ, ಸಿಂಡಿಕೇಟ್ ಬ್ಯಾಂಕ್ ಪ್ರಧಾನ ಕಚೇರಿ ಮಣಿಪಾಲದಲ್ಲಿದೆ. ಉಳಿದೆಲ್ಲ ಬ್ಯಾಂಕ್‌ಗಳು ಪ್ರಧಾನ ಕಚೇರಿಗಳು ಬೆಂಗಳೂರಿಗೆ ಸ್ಥಳಾಂತರಗೊಂಡಿವೆ.
ಅತ್ತಾವರ ಬಾಲಕೃಷ್ಣ ಶೆಟ್ಟಿ ಅವರಿಂದ ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನ ಸಣ್ಣ ಕೊಠಡಿಯೊಂದರಲ್ಲಿ ಪ್ರಗತಿಪರ ರೈತರ ಬೆಂಬಲದೊಂದಿಗೆ ವಿಜಯ ಬ್ಯಾಂಕ್ ಸ್ಥಾಪನೆಯಾಯಿತು. ವಿಜಯ ದಶಮಿಯಂದು ಬ್ಯಾಂಕ್ ಪ್ರಾರಂಭಗೊಂಡಿದ್ದರಿಂದ ವಿಜಯ ಬ್ಯಾಂಕ್ ಎನ್ನುವ ಹೆಸರನ್ನು ಇಡಲಾಯಿತು. ಆದರೆ ಇವೆಲ್ಲವೂ ಕರಾವಳಿಗರ ಪಾಲಿಗೆ ಇನ್ನುಮುಂದೆ ನೆನಪು ಮಾತ್ರ.
ದೇನಾ, ವಿಜಯ ಬ್ಯಾಂಕ್ ಗ್ರಾಹಕರು ಏನು ಮಾಡಬೇಕು?
1. ಗ್ರಾಹಕರಿಗೆ ಹೊಸ ಖಾತೆಯ ಸಂಖ್ಯೆ ಮತ್ತು ಕಸ್ಟಮರ್ ಐಡಿ ಸಿಗಲಿದೆ.
2. ದೇನಾ ಮತ್ತು ವಿಜಯಾ ಬ್ಯಾಂಕ್ ಗ್ರಾಹಕರೆಲ್ಲರಿಗೂ ಹೊಸ ಖಾತೆ ನಂಬರ್ ದೊರೆತ ಕೂಡಲೇ, ಆದಾಯ ತೆರಿಗೆ ಇಲಾಖೆ, ವಿಮೆ, ಪಿಂಚಣಿಗಳಿಗೆ ಮಾಹಿತಿಯನ್ನು ನೀಡಬೇಕು.
3. ಸಾಲಗಾರರು ಅಥವಾ ಇಎಂಐ ಗ್ರಾಹಕರು ಹೊಸ ಅರ್ಜಿಯನ್ನು ಭರ್ತಿ ಮಾಡಿ, ಸಂಬಂಧಪಟ್ಟ ದಾಖಲೆಗಳನ್ನು ಬ್ಯಾಂಕಿಗೆ ಸಲ್ಲಿಸಬೇಕು.
4. ಬ್ಯಾಂಕ್ ಆಫ್ ಬರೋಡಾಗೆ ಸೇರ್ಪಡೆಯಾಗುವ ಎಲ್ಲ ಗ್ರಾಹಕರಿಗೆ ಹೊಸ ಡೆಬಿಟ್ ಕಾರ್ಡ್, ಚೆಕ್‍ಬುಕ್ ಮತ್ತು ಕ್ರೆಡಿಟ್ ಕಾರ್ಟ್ ನೀಡಲಾಗುತ್ತದೆ.
6. ವಾಹನಗಳ ಮೇಲಿನ ಸಾಲ, ಗೃಹ ಸಾಲ, ವೈಯಕ್ತಿಕ ಸಾಲ ಪಡೆದ ಗ್ರಾಹಕರು ಪಾವತಿಸುತ್ತಿರುವ ಬಡ್ಡಿ ಮೊತ್ತದಲ್ಲಿ ಯಾವುದೇ ಬದಲಾವಣೆಗಳಿಲ್ಲ.
7. ಬ್ಯಾಂಕ್‍ಗಳ ವಿಲೀನದಿಂದಗ ಕೆಲ ಶಾಖೆಗಳು ಬಂದ್ ಆಗಲಿವೆ. ಹಾಗಾಗಿ ಗ್ರಾಹಕರು ಸಮೀಪದ ಬ್ಯಾಂಕ್ ಬರೋಡಾ ಬ್ಯಾಂಕ್ ಸಂಪರ್ಕಿಸಬೇಕು.
ಏನು ಬದಲಾಗಲಿದೆ? –
ವಿಲೀನದ ನಂತರ ದೇನಾ ಮತ್ತು ವಿಜಯಾ ಬ್ಯಾಂಕ್ ಗ್ರಾಹಕರೆಲ್ಲ ಬ್ಯಾಂಕ್ ಆಫ್ ಬರೋಡಾಗೆ ವರ್ಗಾವಣೆಯಾಗಲಿದ್ದಾರೆ.
– ಗ್ರಾಹಕರಿಗೆ ಹೊಸ ಖಾತೆಯ ಸಂಖ್ಯೆ ಮತ್ತು ಕಸ್ಟಮರ್ ಐಡಿ ನೀಡಲಾಗುತ್ತದೆ.
– ಸಾಲಗಾರರು, ಇಎಂಐ ಪಾವತಿಸುವವರು ಹೊಸ ಅರ್ಜಿ ದಾಖಲೆಗಳನ್ನು ಬ್ಯಾಂಕಿಗೆ ಸಲ್ಲಿಸಬೇಕು.
– ಹೊಸ ಡೆಬಿಟ್ ಕಾರ್ಡ್, ಚೆಕ್ ಬುಕ್ ಮತ್ತು ಕ್ರೆಡಿಟ್ ಕಾರ್ಡ್ ನೀಡಲಾಗುವುದು.
3ನೇ ದೊಡ್ಡ ಬ್ಯಾಂಕ್
ಪಸ್ತುತ 45.85 ಲಕ್ಷ ಕೋಟಿ ಮೌಲ್ಯದ ವ್ಯವಹಾರಗಳೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೊದಲ ಸ್ಥಾನದಲ್ಲಿದೆ. 15.8 ಲಕ್ಷ ಕೋಟಿ ವ್ಯವಹಾರಗಳೊಂದಿಗೆ ಎಚ್‍ಡಿಎಫ್‍ಸಿ ಎರಡನೇ ಸ್ಥಾನದಲ್ಲಿ, 11.02 ಲಕ್ಷ ಕೋಟಿ ವ್ಯವಹಾರಗಳೊಂದಿಗೆ ಐಸಿಐಸಿಐ ಮೂರನೇ ಸ್ಥಾನದಲ್ಲಿವೆ. ದೇನಾ ಮತ್ತು ವಿಜಯಾ ಬ್ಯಾಂಕ್‍ಗಳ ವಿಲೀನದಿಂದಾಗಿ ಬ್ಯಾಂಕ್ ಆಫ್ ಬರೋಡಾದ ವ್ಯವಹಾರದ ಮೌಲ್ಯ 15.4 ಲಕ್ಷ ಕೋಟಿ ಆಗಲಿದೆ. ಐಸಿಐಸಿಐ ಬ್ಯಾಂಕ್ ನ್ನು ಹಿಂದೆ ತಳ್ಳಿ ಬ್ಯಾಂಕ್ ಆಫ್ ಬರೋಡಾ ಮೂರನೇ ಸ್ಥಾನವನ್ನ ಅಲಂಕರಿಸಲಿದೆ.
‘2019 ಎ. 1ರಿಂದ ಬ್ಯಾಂಕ್ ಆಫ್ ಬರೋಡ, ವಿಜಯ ಬ್ಯಾಂಕ್. ದೇನಾ ಬ್ಯಾಂಕುಗಳು ಪರಸ್ಪರ ವಿಲೀನಗೊಳ್ಳಲಿವೆ. ಇನ್ನು ಮುಂದಿನ ದಿನಗಳಲ್ಲಿ ನೀವು ದೇಶದ 3ನೇ ಅತಿ ದೊಡ್ಡ ಬ್ಯಾಂಕ್ ನೆಟ್ವರ್ಕ್ ಜತೆ ವ್ಯವಹಾರ ನಡೆಸಲಿದ್ದೀರಿ. ನಿಮ್ಮ ಈಗಿರುವ ಖಾತೆ ಸಂಖ್ಯೆ, ಡೆಬಿಟ್/ ಕ್ರೆಡಿಟ್ ಕಾರ್ಡ್, ಮೊಬೈಲ್ ಮತ್ತು ನೆಟ್ ಬ್ಯಾಂಕಿಂಗ್ ಸೌಲಭ್ಯಗಳೊಂದಿಗೆ ಸೇವೆಗಳು ಯಥಾಸ್ಥಿತಿ ಮುಂದುವರಿಯಲಿವೆ. ವಿವರಗಳಿಗೆ ನಿಮ್ಮ ಈಗಿರುವ ವಿಜಯ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬಹುದು.’
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…