ಉಡುಪಿ

ವಿದ್ಯಾರ್ಥಿಗಳು ಮನಸ್ಸು ಮಾಡಿದಲ್ಲಿ ಭ್ರಷ್ಟಾಚಾರವನ್ನ ಬೇರು ಸಮೇತ ಕಿತ್ತೊಗೆಯಲು ಸಾಧ್ಯವಿದೆ: ಕಾಪುವಿನಲ್ಲಿ ಭ್ರಷ್ಟಾಚಾರ ನಿರ್ಮೂಲನ ಜಾಗೃತಿ ಸಪ್ತಾಹ ಉದ್ಘಾಟಿಸಿ ಎಸಿಬಿ ಮಂಗಳೂರು ಪಶ್ಚಿಮ ವಲಯದ ಪೋಲಿಸ್ ಅಧೀಕ್ಷಕಿ ಶುೃತಿ.ಎನ್.ಎಸ್

ವಿದ್ಯಾರ್ಥಿಗಳು ಮನಸ್ಸು ಮಾಡಿದಲ್ಲಿ ಭ್ರಷ್ಟಾಚಾರವನ್ನ ಬೇರು ಸಮೆತ ಕಿತ್ತೊಗೆಯಲು ಸಾಧ್ಯವಿದೆ: ಕಾಪುವಿನಲ್ಲಿ ಭ್ರಷ್ಟಾಚಾರ ನಿರ್ಮೂಲನ ಜಾಗೃತಿ ಸಪ್ತಾಹ ಉದ್ಘಾಟಿಸಿ ಎಸಿಬಿ ಮಂಗಳೂರು ಪಶ್ಚಿಮ ವಲಯದ ಪೋಲಿಸ್ ಅಧೀಕ್ಷಕಿ ಶುೃತಿ.ಎನ್.ಎಸ್

ಕಾಪು: ಭ್ರಷ್ಟಾಚಾರ ನಿಗ್ರಹದಳ ಪೋಲಿಸ್ ಠಾಣೆ ಉಡುಪಿ ಇದರ ವತಿಯಿಂದ ಭ್ರಷ್ಟಾಚಾರ ನಿರ್ಮೂಲನ ಜಾಗೃತಿ ಸಪ್ತಾಹ 2018 ರ ಕಾರ್ಯಕ್ರಮಕ್ಕೆ ಕಾಪುವಿನಲ್ಲಿ ಚಾಲನೆ ನೀಡಲಾಯಿತು. ಕಾಪು ಪೊಲಿಪು ಮಸೀದಿ ಬಳಿಯಿಂದ ಆರಂಭಗೊಂಡ ಜಾಗೃತಿ ರ್ಯಾಲಿಯು ಕಾಪು ಶ್ರೀ ಲಕ್ಷ್ಮೀ ಜನಾರ್ಧನ ಸಭಾಭವನದಲ್ಲಿ ಸಭಾ ಕಾರ್ಯಕ್ರಮದೊಂದಿಗೆ ಸಮರೋಪಗೊಂಡಿತು.

ಸಭಾಕಾರ್ಯಕ್ರಮವನ್ನ ಮಂಗಳೂರು ಪಶ್ಚಿಮ ವಲಯದ ಪೋಲಿಸ್ ಅಧೀಕ್ಷಕಿ ಶುೃತಿ ಎನ್ ಎಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ

“ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವ ಈ ಸಮಯದಲ್ಲಿ ವಿದ್ಯಾರ್ಥಿಗಳ ಜತೆ ಇಂತಹ ಕಾರ್ಯಕ್ರಮ ಯೋಜನೆ ಮಾಡಿರುವ ಉದ್ದೇಶವೆಂದರೆ ಯುವ ಜನತೆಯಿಂದ ಈ ದೇಶ ಮುಂದುವರಿಯಬೇಕಾಗಿದೆ ಹಾಗಾಗಿ ಯಾವುದೇ ವಿಚಾರವನ್ನ ಮೊಳಕೆಯಿಂದಲೆ ಸರಿಯಾದ ಜಾಗೃತ ಕಾರ್ಯಕ್ರಮವನ್ನ ಆಯೋಜಿಸಿದಲ್ಲಿ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗುತ್ತಾರೆ ಮತ್ತು ಭ್ರಷ್ಟಾಚಾರ ಎಂಬ ಪಿಡುಗನ್ನು ನಿರ್ಮೂಲನೆ ಮಾಡುವಲ್ಲಿ ಸಹಕಾರಿಯಾಗುತ್ತೆ. ಯಾವುದೇ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಮಾಹಿತಿ ಇದ್ದಲ್ಲಿ ಯಾವುದೇ ಅಂಜಿಕೆ ಹೆದರಿಕೆಯಿಲ್ಲದೆ ನಮ್ಮ ಅಧಿಕಾರಿಗಳನ್ನ ನೆರವಾಗಿ ಸಂಪರ್ಕಿಸಿದಲ್ಲಿ ಅವರಿಗೆ ತಕ್ಕ ಶಾಸ್ತಿ ಮಾಡುವಲ್ಲಿ ನಾವು ಸನ್ನಧರಾಗಿದ್ದೆವೆ, ಒಂದು ವೇಳೆ ಸರ್ಕಾರಿ ಕಚೇರಿಗಳಲ್ಲಿ ನಿಮ್ಮ ಕೆಲಸವನ್ನ ವಿಳಂಬ ಮಾಡಿದ್ದೆ ಎಂದಲ್ಲಿ ನಮ್ಮನ್ನು ಸಂಪರ್ಕಿಸಬಹುದಾಗಿದೆ ಮತ್ತು ವಿದ್ಯಾರ್ಥಿಗಳು ಮನಸ್ಸು ಮಾಡಿದಲ್ಲಿ ಭ್ರಷ್ಟಾಚಾರವನ್ನ ಬೇರು ಸಮೆತ ಕಿತ್ತೊಗೆಯಲು ಸಾಧ್ಯವಿದೆ” ಎಂದರು. ದೇಶದ ಭವಿಷ್ಯ ಕಟ್ಟುವ ಯುವ ಸಮುದಾಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಎದುರಿಸಿ ಉನ್ನತ ರಂಗವನ್ನೇರಬೇಕೆಂದು ಹಿತ ವಚನ ಮಾಡಿದರು.


ಉಡುಪಿ ಎಸಿಬಿ ಡಿವೈಎಸ್ಪಿ ದಿನಕರ್ ಶೆಟ್ಟಿ ಮಾತಾಡಿ” ಯುವಸಮುದಾಯ ಸಂಪತ್ತನ್ನು ಹೊಂದಿರುವ ಭಾರತ ದೇಶ ಭ್ರಷ್ಟಾಚಾರದಲ್ಲಿ 180 ದೇಶಗಳ ಸರ್ವೆಯಲ್ಲಿ 81 ನೇ ಸ್ಥಾನಕ್ಕೆ ಬಂದು ನಿಂತಿರುವುದು ವಿಪರ್ಯಾಸ ಮತ್ತು ಆಘಾತಕಾರಿಯಾದ ಅಂಶ, ನಾವುಗಳು ಸೇವಿಸುವ ಗಾಳಿ, ನೀರು,ಆಹಾರಗಳೆಲ್ಲವೂ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದೆ ಅದನ್ನ ಮಟ್ಟ ಹಾಕಬೇಕೆಂದೆ ಹುಟ್ಟಿ ಕೊಂಡಿರುವ ಎಸಿಬಿ ಇಲಾಖೆಯ ಜತೆ ಎಲ್ಲಾರೂ ಕೈಜೋಡಿಸಬೇಕೆಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಭ್ರಷ್ಟಾಚಾರ ಮುಕ್ತ ಸಮಾಜದ ಪ್ರಮಾಣ ವಚನ ಬೋಧಿಸಲಾಯಿತು.

ಉಡುಪಿ ಜಿಲ್ಲಾ ಗೃಹರಕ್ಷಕದಳದ ಮುಖ್ಯ ಕಮಾಡೆಂಟ್ ಡಾ|| ಪ್ರಶಾಂತ್ ಶೆಟ್ಟಿ , ದಂಡತೀರ್ಥ ಶಾಲೆಯ ಪ್ರಾಂಶುಪಾಲ ನೀಲಾನಂದ ನಾಯ್ಕ್, ಆಡಳಿತಾಧಿಕಾರಿ ಆಲ್ಬನ್ ರೋಡ್ರಿಗಸ್ ,ಮಧುಕರ್,ಸಮಾಜಸೇವಕ ಸೂರಿ ಶೆಟ್ಟಿ ಕಾಪು, ಡೆಪ್ಯೂಟಿ ಕಮಾಡೆಂಟ್ ರಮೇಶ್, ಕಾಪು ಪುರಸಭಾ ಮುಖ್ಯಾಧಿಕಾರಿ ರಾಯಪ್ಪ, ಎಸಿಬಿ ಇನ್ಸ್‍ಸ್ಪೆಕ್ಟರ್ಸ್ ಜಯರಾಮ್ ಡಿ. ಗೌಡ,ಸತೀಶ್,ಉಪಸ್ಥಿತರಿದ್ದರು.
ಶಿವಾನಂದ್ ಬಾಯರ್ ಕಾರ್ಯಕ್ರಮ ನಿರೂಪಸಿದರು.

ನಿಮಗೆ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಕಂಡುಬಂದಲ್ಲಿ ದೂರುಗಳಿದ್ದಲ್ಲಿ ಈ ನಂಬರ್ ಕರೆಮಾಡಿ

9480806263,

9480806295,

9480806296

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

3 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago