ವಿದ್ಯಾರ್ಥಿಗಳು ಮನಸ್ಸು ಮಾಡಿದಲ್ಲಿ ಭ್ರಷ್ಟಾಚಾರವನ್ನ ಬೇರು ಸಮೆತ ಕಿತ್ತೊಗೆಯಲು ಸಾಧ್ಯವಿದೆ: ಕಾಪುವಿನಲ್ಲಿ ಭ್ರಷ್ಟಾಚಾರ ನಿರ್ಮೂಲನ ಜಾಗೃತಿ ಸಪ್ತಾಹ ಉದ್ಘಾಟಿಸಿ ಎಸಿಬಿ ಮಂಗಳೂರು ಪಶ್ಚಿಮ ವಲಯದ ಪೋಲಿಸ್ ಅಧೀಕ್ಷಕಿ ಶುೃತಿ.ಎನ್.ಎಸ್
ಕಾಪು: ಭ್ರಷ್ಟಾಚಾರ ನಿಗ್ರಹದಳ ಪೋಲಿಸ್ ಠಾಣೆ ಉಡುಪಿ ಇದರ ವತಿಯಿಂದ ಭ್ರಷ್ಟಾಚಾರ ನಿರ್ಮೂಲನ ಜಾಗೃತಿ ಸಪ್ತಾಹ 2018 ರ ಕಾರ್ಯಕ್ರಮಕ್ಕೆ ಕಾಪುವಿನಲ್ಲಿ ಚಾಲನೆ ನೀಡಲಾಯಿತು. ಕಾಪು ಪೊಲಿಪು ಮಸೀದಿ ಬಳಿಯಿಂದ ಆರಂಭಗೊಂಡ ಜಾಗೃತಿ ರ್ಯಾಲಿಯು ಕಾಪು ಶ್ರೀ ಲಕ್ಷ್ಮೀ ಜನಾರ್ಧನ ಸಭಾಭವನದಲ್ಲಿ ಸಭಾ ಕಾರ್ಯಕ್ರಮದೊಂದಿಗೆ ಸಮರೋಪಗೊಂಡಿತು.
ಸಭಾಕಾರ್ಯಕ್ರಮವನ್ನ ಮಂಗಳೂರು ಪಶ್ಚಿಮ ವಲಯದ ಪೋಲಿಸ್ ಅಧೀಕ್ಷಕಿ ಶುೃತಿ ಎನ್ ಎಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ
“ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವ ಈ ಸಮಯದಲ್ಲಿ ವಿದ್ಯಾರ್ಥಿಗಳ ಜತೆ ಇಂತಹ ಕಾರ್ಯಕ್ರಮ ಯೋಜನೆ ಮಾಡಿರುವ ಉದ್ದೇಶವೆಂದರೆ ಯುವ ಜನತೆಯಿಂದ ಈ ದೇಶ ಮುಂದುವರಿಯಬೇಕಾಗಿದೆ ಹಾಗಾಗಿ ಯಾವುದೇ ವಿಚಾರವನ್ನ ಮೊಳಕೆಯಿಂದಲೆ ಸರಿಯಾದ ಜಾಗೃತ ಕಾರ್ಯಕ್ರಮವನ್ನ ಆಯೋಜಿಸಿದಲ್ಲಿ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗುತ್ತಾರೆ ಮತ್ತು ಭ್ರಷ್ಟಾಚಾರ ಎಂಬ ಪಿಡುಗನ್ನು ನಿರ್ಮೂಲನೆ ಮಾಡುವಲ್ಲಿ ಸಹಕಾರಿಯಾಗುತ್ತೆ. ಯಾವುದೇ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಮಾಹಿತಿ ಇದ್ದಲ್ಲಿ ಯಾವುದೇ ಅಂಜಿಕೆ ಹೆದರಿಕೆಯಿಲ್ಲದೆ ನಮ್ಮ ಅಧಿಕಾರಿಗಳನ್ನ ನೆರವಾಗಿ ಸಂಪರ್ಕಿಸಿದಲ್ಲಿ ಅವರಿಗೆ ತಕ್ಕ ಶಾಸ್ತಿ ಮಾಡುವಲ್ಲಿ ನಾವು ಸನ್ನಧರಾಗಿದ್ದೆವೆ, ಒಂದು ವೇಳೆ ಸರ್ಕಾರಿ ಕಚೇರಿಗಳಲ್ಲಿ ನಿಮ್ಮ ಕೆಲಸವನ್ನ ವಿಳಂಬ ಮಾಡಿದ್ದೆ ಎಂದಲ್ಲಿ ನಮ್ಮನ್ನು ಸಂಪರ್ಕಿಸಬಹುದಾಗಿದೆ ಮತ್ತು ವಿದ್ಯಾರ್ಥಿಗಳು ಮನಸ್ಸು ಮಾಡಿದಲ್ಲಿ ಭ್ರಷ್ಟಾಚಾರವನ್ನ ಬೇರು ಸಮೆತ ಕಿತ್ತೊಗೆಯಲು ಸಾಧ್ಯವಿದೆ” ಎಂದರು. ದೇಶದ ಭವಿಷ್ಯ ಕಟ್ಟುವ ಯುವ ಸಮುದಾಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಎದುರಿಸಿ ಉನ್ನತ ರಂಗವನ್ನೇರಬೇಕೆಂದು ಹಿತ ವಚನ ಮಾಡಿದರು.
ಉಡುಪಿ ಎಸಿಬಿ ಡಿವೈಎಸ್ಪಿ ದಿನಕರ್ ಶೆಟ್ಟಿ ಮಾತಾಡಿ” ಯುವಸಮುದಾಯ ಸಂಪತ್ತನ್ನು ಹೊಂದಿರುವ ಭಾರತ ದೇಶ ಭ್ರಷ್ಟಾಚಾರದಲ್ಲಿ 180 ದೇಶಗಳ ಸರ್ವೆಯಲ್ಲಿ 81 ನೇ ಸ್ಥಾನಕ್ಕೆ ಬಂದು ನಿಂತಿರುವುದು ವಿಪರ್ಯಾಸ ಮತ್ತು ಆಘಾತಕಾರಿಯಾದ ಅಂಶ, ನಾವುಗಳು ಸೇವಿಸುವ ಗಾಳಿ, ನೀರು,ಆಹಾರಗಳೆಲ್ಲವೂ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದೆ ಅದನ್ನ ಮಟ್ಟ ಹಾಕಬೇಕೆಂದೆ ಹುಟ್ಟಿ ಕೊಂಡಿರುವ ಎಸಿಬಿ ಇಲಾಖೆಯ ಜತೆ ಎಲ್ಲಾರೂ ಕೈಜೋಡಿಸಬೇಕೆಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಭ್ರಷ್ಟಾಚಾರ ಮುಕ್ತ ಸಮಾಜದ ಪ್ರಮಾಣ ವಚನ ಬೋಧಿಸಲಾಯಿತು.
ಉಡುಪಿ ಜಿಲ್ಲಾ ಗೃಹರಕ್ಷಕದಳದ ಮುಖ್ಯ ಕಮಾಡೆಂಟ್ ಡಾ|| ಪ್ರಶಾಂತ್ ಶೆಟ್ಟಿ , ದಂಡತೀರ್ಥ ಶಾಲೆಯ ಪ್ರಾಂಶುಪಾಲ ನೀಲಾನಂದ ನಾಯ್ಕ್, ಆಡಳಿತಾಧಿಕಾರಿ ಆಲ್ಬನ್ ರೋಡ್ರಿಗಸ್ ,ಮಧುಕರ್,ಸಮಾಜಸೇವಕ ಸೂರಿ ಶೆಟ್ಟಿ ಕಾಪು, ಡೆಪ್ಯೂಟಿ ಕಮಾಡೆಂಟ್ ರಮೇಶ್, ಕಾಪು ಪುರಸಭಾ ಮುಖ್ಯಾಧಿಕಾರಿ ರಾಯಪ್ಪ, ಎಸಿಬಿ ಇನ್ಸ್‍ಸ್ಪೆಕ್ಟರ್ಸ್ ಜಯರಾಮ್ ಡಿ. ಗೌಡ,ಸತೀಶ್,ಉಪಸ್ಥಿತರಿದ್ದರು.
ಶಿವಾನಂದ್ ಬಾಯರ್ ಕಾರ್ಯಕ್ರಮ ನಿರೂಪಸಿದರು.
ನಿಮಗೆ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಕಂಡುಬಂದಲ್ಲಿ ದೂರುಗಳಿದ್ದಲ್ಲಿ ಈ ನಂಬರ್ ಕರೆಮಾಡಿ
9480806263,
9480806295,
9480806296
ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು…
ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ ಬೆಂಗಳೂರು:…
ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್ ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ,…
ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ…
ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ ದಾವಣಗೆರೆ: ಹರಿಹರದ ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣ ಆದೇಶವನ್ನು…
ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ - ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು ವಿಟ್ಲ:…