ಉತ್ತರಪ್ರದೇಶ: ಉತ್ತರ ಪ್ರದೇಶದ 23 ವರ್ಷದ ಕಾನೂನು ವಿದ್ಯಾರ್ಥಿನಿಯ ಮೇಲೆ ತತ ಒಂದು ವರ್ಷಗಳ ಕಾಲ ಅತ್ಯಾಚಾರ ನಡೆಸಿರುವ ಆರೋಪ ಹೊತ್ತಿರುವ ಕೆಂದ್ರದ ಮಾಜಿ ಸಚಿವ, ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯಾನಂದ ಅವರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿನ್ಮಯಾನಂದ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾಳೆ. ಎಸ್‌ಐಟಿ ಅಧಿಕಾರಿಗಳು ಸ್ವಾಮಿ ಚಿನ್ಮಯಾನಂದ ನಿವಾಸದಿಂದಲೇ ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ ಎಂದು ಮಾಹಿತಿ ನೀಡಿರುವ ಚಿನ್ಮಯಾನಂದ ಪರ ವಕೀಲ ಪೂಜಾ ಸಿಂಗ್, ಎಸ್‌ಐಟಿ ಅಧಿಕಾರಿಗಳು ಎಫ್‌ಐಆರ್ ಅಥವಾ ಯಾವುದೇ ಅಧಿಕೃತ ಮಾಹಿತಿ ಪ್ರತಿ ನೀಡದೇ ಅವರನ್ನು ಬಂಧಿಸಿದ್ದಾರೆಂದು ಆರೋಪಿಸಿದ್ದಾರೆ..
ಸ್ವಾಮಿ ಚಿನ್ಮಯಾನಂದ ಅವರನ್ನು ತಕ್ಷಣವೇ ಬಂಧಿಸದೇ ಇದ್ದರೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ವಿದ್ಯಾರ್ಥಿನಿ ಬುಧವಾರ ಬೆದರಿಕೆ ಹಾಕಿದ್ದರು
” ಕಳೆದ ವರ್ಷ ಕಾಲೇಜಿನಲ್ಲಿ ಅಡ್ಮಿಷನ್ ಪಡೆಯಲು ಅಂತ ಚಿನ್ಮಯಾನಂದರನ್ನ ಭೇಟಿಯಾಗಿದ್ದೆ. ನನಗೆ ಅಡ್ಮಿಷನ್ ನೀಡಿದ ಚಿನ್ಮಯಾನಂದ ಗ್ರಂಥಾಲಯದಲ್ಲಿ ಕೆಲಸ ನೀಡಿ, ಹಾಸ್ಟೆಲ್ನಲ್ಲಿ ಇರುವಂತೆ ಸೂಚಿಸಿದ್ದರು. ನಾನು ಹಾಸ್ಟೆಲ್ಗೆ ಶಿಫ್ಟ್ ಆದ ಬಳಿಕ ನಾನು ಸ್ನಾನ ಮಾಡುತ್ತಿರುವ ವಿಡಿಯೋವೊಂದನ್ನ ತೋರಿಸಿ, ಬೆದರಿಸಿ ನನ್ನ ಮೇಲೆ ಒಂದು ವರ್ಷದಿಂದ ಅತ್ಯಾಚಾರ ನಡೆಸಿದ್ದಾರೆ” ಎಂದು ದೂರಿನಲ್ಲಿ ತಿಳಿಸಿದ್ದಳು.
ರೈಲು ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ ಇಂದಿನಿಂದ IRCTC ಹೊಸ ವೆಬ್‌ಸೈಟ್ ಆರಂಭ: ಇನ್ಮುಂದೆ ಕ್ಷಣಾರ್ಧದಲ್ಲಿ ತತ್ಕಾಲ್ ಟಿಕೆಟ್ ಬುಕಿಂಗ್…
ಭಟ್ಕಳ: ಬೈಕಿಗೆ ಲಾರಿ ಢಿಕ್ಕಿ ; ಸವಾರ ಮೃತ್ಯು ಭಟ್ಕಳ: ಲಾರಿಯೊಂದು ಬೈಕಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಬೈಕ್…
ರಾಮಮಂದಿರ ಪ್ರಕರಣವನ್ನು ಪ್ರಧಾನಿಯವರು ಮನ್ ಕಿ ಬಾತ್ ನಲ್ಲಿಯೂ ಉಲ್ಲೇಖಿಸುತ್ತಿಲ್ಲ : ವಿನಯ ಕುಮಾರ್ ಸೊರಕೆ ಮಂಗಳೂರು: ರಾಮಮಂದಿರದ ಹುಂಡಿ…
ಉಡುಪಿ : ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ಆಗ್ರಹಿಸಿ ಜುಲೈ 27 ರಂದು ಜಿಲ್ಲಾಧಿಕಾರಿಗೆ ಮನವಿ ಉಡುಪಿ : ಗೋಮಾತೆ…
ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಬಂದು ಬಸ್ ನಿರ್ವಾಹಕರ ಬ್ಯಾಗನ್ನೇ ಎಗಿರಿಸಿದ ಮಹಿಳೆ ಬೆಂಗಳೂರು: ಬಸ್ ಪ್ರಯಾಣಿಕರ ಸೋಗಿನಲ್ಲಿ ಬಂದು ಅತ್ಯಂತ…
ನವಿ ಮುಂಬೈ ವಿಮಾನ ನಿಲ್ದಾಣದ ಹೊಸ ಅಧ್ಯಾಯ : ಮೊದಲ ಅಂತಾರಾಷ್ಟ್ರೀಯ ಸೇವೆಗೆ ಚಾಲನೆ ಮುಂಬೈ: ನವಿ ಮುಂಬೈ ಅಂತರರಾಷ್ಟ್ರೀಯ…