Featured

ವಿಶ್ವದ ಅತೀ ಉದ್ದದ ನದಿ ವಿಹಾರ ನೌಕೆ `ಎಂವಿ ಗಂಗಾ ವಿಲಾಸ್’ ಕ್ರೂಸ್‌ಗೆ ಪ್ರಧಾನಿ ಅದ್ಧೂರಿ ಚಾಲನೆ – Vishwanews24

ವಿಶ್ವದ ಅತೀ ಉದ್ದದ ನದಿ ವಿಹಾರ ನೌಕೆ `ಎಂವಿ ಗಂಗಾ ವಿಲಾಸ್’ ಕ್ರೂಸ್‌ಗೆ ಪ್ರಧಾನಿ ಅದ್ಧೂರಿ ಚಾಲನೆ

ಲಕ್ನೋ: ವಿಶ್ವದ ಅತೀ ಉದ್ದದ ನದಿ ವಿಹಾರದ `ಎಂವಿ ಗಂಗಾ ವಿಲಾಸ್’ ಕ್ರೂಸ್ ಹಡಗಿಗೆ ಪ್ರಧಾನಿ ನರೇಂದ್ರ ಮೋದಿ  ಅವರು ವರ್ಚುವಲ್‌ನಲ್ಲಿ ಹಸಿರು ನಿಶಾನೆ ತೋರಿದ್ದಾರೆ.

ಇದಕ್ಕೂ ಮುನ್ನ ವಾರಾಣಸಿಯಲ್ಲಿ  ಗಂಗಾ ನದಿ ತೀರದಲ್ಲಿ ನಿರ್ಮಿಸಲಾಗಿರುವ `ಟೆಂಟ್ ಸಿಟಿ’ಯನ್ನೂ ಉದ್ಘಾಟಿಸಿದ್ದಾರೆ. 1,000 ಕೋಟಿಗೂ ಅಧಿಕ ವೆಚ್ಚದ ವಿವಿಧ ಜಲಸಾರಿಗೆ ಯೋಜನೆಗಳಿಗೆ ಶಿಲಾನ್ಯಾಸವನ್ನೂ ನೆರವೇರಿಸಿದ್ದಾರೆ.

ಇಂದು ಗಂಗಾ ವಿಲಾಸ್ ನದಿ ಪ್ರವಾಸಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮೋದಿ, ಗಂಗಾ ನದಿಯಲ್ಲಿ ಕ್ರೂಸ್ ಸೇವೆ ಆರಂಭವಾಗುತ್ತಿರುವುದು ಐತಿಹಾಸಿಕ ಕ್ಷಣ. ಇದು ಭಾರತದಲ್ಲಿ ಪ್ರವಾಸೋದ್ಯಮದ ಹೊಸ ಯುಗಕ್ಕೆ ನಾಂದಿ ಹಾಡಲಿದೆ. ವಿದೇಶಿ ಪ್ರವಾಸಿಗರು ಈ ಸೇವೆ ಪಡೆಯುವ ಮೂಲಕ ಭಾರತದ ವೈಭವವನ್ನು ಆಸ್ವಾದಿಸಬೇಕು. ಇದರಿಂದ ನದಿ ವಿಹಾರ ಪ್ರವಾಸೋದ್ಯಮ ಉತ್ತೇಜನಗೊಳ್ಳಲಿದೆ. ಜೊತೆಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ. ದೇಶದ ವಿವಿಧ ಭಾಗಗಳಲ್ಲೂ ಹೆಚ್ಚಿನ ನದಿ ವಿಹಾರ ಯೋಜನೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

ನದಿ ಮಾರ್ಗದ ಪ್ರವಾಸೋದ್ಯಮಕ್ಕೆ ಹೊಸ ದಿಸೆ ನೀಡಲು ಭಾರತ ಸಜ್ಜಾಗಿದೆ. ದೇಶದ ಮೊದಲ ಪ್ರವಾಸಿ ನೌಕೆ ಇದಾಗಿದ್ದು, ನದಿ ಮಾರ್ಗದ ಪ್ರವಾಸವನ್ನು ಆಸ್ವಾದಿಸಲು ವಿದೇಶಿ ಪ್ರವಾಸಗರು ಹೊರಟಿದ್ದಾರೆ. 36 ಸೀಟುಗಳ ಸಾಮರ್ಥ್ಯ ಹೊಂದಿರುವ ಈ ಕ್ರೂಸ್‌ನಲ್ಲಿ ಸ್ವಿಡ್ಜರ್ ಲ್ಯಾಂಡ್‌ನ 32 ಪ್ರವಾಸಿಗರು ಪ್ರವಾಸ ಬೆಳೆಸಿದ್ದಾರೆ. ಉತ್ತರ ಪ್ರದೇಶದ ವಾರಣಾಸಿಯಿಂದ ಆರಂಭಗೊಂಡಿರುವ ಯಾತ್ರೆ 51 ದಿನಗಳ ಬಳಿಕ ಪೂರ್ವ ಅಸ್ಸಾಂನ ದಿಬ್ರೂಗಢಕ್ಕೆ ತಲುಪಲಿದೆ. ಹಾದಿಯುದ್ದಕ್ಕೂ 50 ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದೆ. ಎಂವಿ ಗಂಗಾದ ಮೊದಲ ಯಾತ್ರೆಯಲ್ಲಿ ಸ್ವಿಟ್ಜರ್‌ಲ್ಯಾಂಡ್‌ನ 32 ಪ್ರವಾಸಿಗರು ಭಾಗವಹಿಸಲಿದ್ದಾರೆ. ಯಾತ್ರೆಯು ಮೇ 1ರಂದು ಪೂರ್ಣಗೊಳ್ಳಲಿದೆ.

ಸ್ಪಾ, ಸಲೋನ್, ಜಿಮ್ ಸೌಲಭ್ಯಗಳನ್ನು ಹೊಂದಿರುವ ಈ ಕ್ರೂಸ್‌ನಲ್ಲಿ ಪ್ರತಿದಿನಕ್ಕೆ ಒಬ್ಬ ವ್ಯಕ್ತಿಗೆ 25 ರಿಂದ 50 ಸಾವಿರ ರೂ. ವೆಚ್ಚ ತಗುಲಲಿದೆ. ಒಟ್ಟಾರೆ 51 ದಿನಗಳ ಪ್ರವಾಸಕ್ಕೆ ಪ್ರತಿ ಪ್ರಯಾಣಿಕರಿಗೆ ಒಟ್ಟು 20 ಲಕ್ಷ ರೂ.ಗಳ ವೆಚ್ಚ ಭರಿಸಬೇಕಾಗುತ್ತದೆ. ಅಲ್ಲದೇ ಇದು ಮಾಲಿನ್ಯ ರಹಿತ ಪ್ರವಾಸವಾಗಿದ್ದು, ಶಬ್ಧ ನಿಯಂತ್ರಣ ತಂತ್ರಜ್ಞಾನವನ್ನೂ ಒಳಗೊಂಡಿದೆ ಎಂದು ಉತ್ತಪ್ರದೇಶದ ಪ್ರವಾಸೋದ್ಯಮ ಸಚಿವ ಜೈವೀರ್ ಸಿಂಗ್ ತಿಳಿಸಿದ್ದಾರೆ.

ಏನಿದು ಎಂವಿ ಗಂಗಾ ವಿಲಾಸ್ (MV Ganga Vilas)?
ಇದೊಂದು ಐಷರಾಮಿ ಪ್ರವಾಸಿ ನೌಕೆ. ಪಂಚತಾರಾ ಹೋಟೆಲ್ ಮಾದರಿ ವ್ಯವಸ್ಥೆಯನ್ನು ನೌಕೆ ಹೊಂದಿದೆ. ನೌಕೆಯಲ್ಲಿ 3 ಅಂತಸ್ತುಗಳಿವೆ. ಪ್ರವಾಸಿಗರು ಆರಾಮಾಗಿ, ಎಂಜಾಯ್ ಮಾಡುತ್ತಾ ನದಿ ಮಾರ್ಗವಾಗಿ ಪ್ರವಾಸ ಕೈಗೊಳ್ಳಬಹುದು.

ಏನಿದರ ವೈಶಿಷ್ಟ್ಯ?
ಈ ನೌಕೆಯು 62.5 ಮೀಟರ್ ಉದ್ದ ಮತ್ತು 12.8 ಮೀಟರ್ ಅಗಲ ಇದೆ. ಪ್ರವಾಸಿಗರು ಕೊಠಡಿಯಿಂದಲೂ ಹೊರಗಿನ ದೃಶ್ಯಗಳನ್ನು ನೋಡಬಹುದು. ಇದರಲ್ಲಿ 40 ಆಸನಗಳ ರೆಸ್ಟೋರೆಂಟ್, ಸ್ಪಾ ಕೊಠಡಿ ಕೂಡ ಇದೆ. ಪ್ರವಾಸಿಗರಿಗೆ ಉಳಿದುಕೊಳ್ಳಲು ಒಟ್ಟು 18 ಸೂಟ್ ರೂಮ್‌ಗಳನ್ನು ನೌಕೆ ಹೊಂದಿದೆ. ಅಷ್ಟೇ ಅಲ್ಲದೇ ಇದರಲ್ಲಿ ಓಪನ್ ಬಾಲ್ಕನಿ ಕೂಡ ಇದೆ. ಐಷರಾಮಿ ಸೌಲಭ್ಯಗಳನ್ನು ಹೊಂದಿರುವ ಈ ನೌಕೆಯಲ್ಲಿ ಜಿಮ್ ಹಾಗೂ ಇತ್ಯಾದಿ ವ್ಯವಸ್ಥೆ ಇದೆ. ಒಮ್ಮೆಗೆ 32 ಪ್ರವಾಸಿಗರಿಗೆ ಅವಕಾಶ ಸಿಗಲಿದೆ.

ಭಾರತ-ಬಾಂಗ್ಲಾದೇಶದ 27 ನದಿಗಳಲ್ಲಿ ಯಾನ
ಎಂವಿ ಗಂಗಾ ವಿಲಾಸ್ 3,200 ಕಿಮೀ ಯಾನ ಮಾಡಲಿದೆ. ನೌಕೆಯು ಭಾರತ ಮತ್ತು ಬಾಂಗ್ಲಾದೇಶದ 27 ನದಿ ವ್ಯವಸ್ಥೆ ಮಾರ್ಗವಾಗಿ ಸಾಗಲಿದೆ. ಆ ಮೂಲಕ ವಿಶ್ವ ಪಾರಂಪರಿಕ ತಾಣಗಳು, ರಾಷ್ಟ್ರೀಯ ಉದ್ಯಾನಗಳು, ಘಾಟ್‌ಗಳು ಸೇರಿದಂತೆ 50 ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಪ್ರಯಾಣವನ್ನು ಸ್ಮರಣೀಯ ಆಗಲಿಸಲಿದೆ. ಬಿಹಾರದ ಪಟ್ನಾ, ಜಾರ್ಖಂಡ್‌ನ ಶಿವಗಂಜ್, ಪಶ್ಚಿಮ ಬಂಗಾಳದ ಕೋಲ್ಕತ್ತ, ಬಾಂಗ್ಲಾದೇಶದ ಢಾಕಾ, ಅಸ್ಸಾಂನ ಗುವಾಹಟಿಯಂತಹ ನಗರಗಳೂ ಈ ವಿಹಾರದ ಹಾದಿಯಲ್ಲಿವೆ. ಬಿಹಾರದ ಬೌದ್ಧ ಯಾತ್ರಾ ಸ್ಥಳ ಸಾರನಾಥ, ಪ.ಬಂಗಳಾದ ಸುಂದರಬನ್ (Sundarbans), ಅಸ್ಸಾಂನ ಮಯೊಂಗ್ ಮತ್ತು ಮಜೌಲಿ, ಹುಲಿಗಳ ಆವಾಸಸ್ಥಾನವಾಗಿರುವ ಸುಂದರ್‌ಬನ್‌ನಲ್ಲಿಯೂ ನೌಕೆ ನಿಲುಗಡೆ ಇರುತ್ತದೆ.

ಟಿಕೆಟ್ ದರ ಎಷ್ಟು, ಬುಕ್ ಮಾಡೋದು ಎಲ್ಲಿ?
ಈ ಐಷರಾಮಿ ಪ್ರವಾಸಿ ನೌಕೆಯಲ್ಲಿ ಪ್ರಯಾಣ ಮಾಡಲು ಪ್ರತಿ ವ್ಯಕ್ತಿಗೆ ದಿನಕ್ಕೆ ಸುಮಾರು 24,692.25 ರೂ. (300 ಡಾಲರ್) ವೆಚ್ಚ ಆಗಲಿದೆ. ಟಿಕೆಟ್‌ಗಳನ್ನು ಅಂತರಾ ಐಷಾರಾಮಿ ರಿವರ್ ಕ್ರೂಸಸ್‌ನ ವೆಬ್‌ಸೈಟ್‌ನಲ್ಲಿ ಬುಕ್ ಮಾಡಬಹುದು. ಪ್ರವಾಸಿಗರು ಎಂವಿ ಗಂಗಾ ವಿಲಾಸ್‌ನಲ್ಲಿ ಸಂಪೂರ್ಣ 51 ದಿನಗಳವರೆಗೆ ಪ್ರವಾಸ ಕೈಗೊಳ್ಳುವುದಾದರೆ, ಒಬ್ಬರಿಗೆ ಸುಮಾರು 12.59 ಲಕ್ಷ (15,3000 ಡಾಲರ್) ಟಿಕೆಟ್ ದರ ಭರಿಸಬೇಕು. ಭಾರತೀಯ ಮತ್ತು ವಿದೇಶಿಯರಿಗೆ ಟಿಕೆಟ್ ದರ ಒಂದೇ ಆಗಿರುತ್ತದೆ.

Join our Whatsapp group by clicking the below link 👇👇

https://chat.whatsapp.com/KfUmhXQKZb114i4QHNvqEK 

Vishwa News 24

Recent Posts

ಸುರತ್ಕಲ್ ಎನ್‌ಐಟಿಕೆಯಲ್ಲಿ ನಿವೃತ್ತ ಮಿಗ್-21 ಯುದ್ಧ ವಿಮಾನ ಅನಾವರಣ – vishwanews24

ಸುರತ್ಕಲ್ ಎನ್‌ಐಟಿಕೆಯಲ್ಲಿ ನಿವೃತ್ತ ಮಿಗ್-21 ಯುದ್ಧ ವಿಮಾನ ಅನಾವರಣ  ಮಂಗಳೂರು: ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (ಎನ್‌ಐಟಿಕೆ)ಯ ಮುಂಭಾಗದಲ್ಲಿ…

1 hour ago

ತುಳು ಲಿಪಿಗೆ ಡಿಜಿಟಲ್ ಸ್ಪರ್ಶ: ಸ್ಮಾರ್ಟ್‌ಫೋನ್‌ಗಳಲ್ಲಿ ‘ಕುರಲ್ ತುಳು ಟಚ್’ ಕೀಬೋರ್ಡ್ ಬಿಡುಗಡೆ – vishwanews24

ಡಿಜಿಟಲ್ ಜಗತ್ತಿಗೆ ತುಳು ಲಿಪಿಯ ಹೊಸ ಹೆಜ್ಜೆ: ‘ಕುರಲ್ ತುಳು ಟಚ್’ ಕೀಬೋರ್ಡ್ ಬಿಡುಗಡೆ ಮಂಗಳೂರು: ಕರಾವಳಿ ಕರ್ನಾಟಕದ ಹೆಮ್ಮೆಯ…

2 hours ago

ಶಿರ್ವ : ಸೂಡ ಪರಿಸರದಲ್ಲಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರು, ಶಾಲಾ ಮಕ್ಕಳಲ್ಲಿ ಆತಂಕ – vishwanews24

ಶಿರ್ವ : ಸೂಡ ಪರಿಸರದಲ್ಲಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರು, ಶಾಲಾ ಮಕ್ಕಳಲ್ಲಿ ಆತಂಕ ಶಿರ್ವ: ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ…

2 hours ago

ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ನೇಮಕ – vishwanews24

ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ನೇಮಕ ನವದೆಹಲಿ: ಭಾರತೀಯ ವಾಯುಪಡೆಯ ಮುಂದಿನ ಮುಖ್ಯಸ್ಥರಾಗಿ ಏರ್…

2 hours ago

ಕಾರ್ಕಳ : ಮನೆಯ ಗೋಡೌನ್‌ನಿಂದ 95 ಸಾವಿರ ರೂ. ಮೌಲ್ಯದ ಅಡಿಕೆ ಕಳವು – vishwanews24

ಕಾರ್ಕಳ : ಮನೆಯ ಗೋಡೌನ್‌ನಿಂದ 95 ಸಾವಿರ ರೂ. ಮೌಲ್ಯದ ಅಡಿಕೆ ಕಳವು ಕಾರ್ಕಳ: ತಾಲೂಕಿನ ಮಿಯ್ಯಾರು ಗ್ರಾಮದ ಮನೆಯೊಂದರ…

2 hours ago

ಮೋದಿ ಸರ್ಕಾರದಿಂದ ಸರ್ವಾಂಗೀಣ ಅಭಿವೃದ್ಧಿಗೆ ಹೊಸ ದಿಕ್ಕು: ಬಿ.ವೈ .ವಿಜಯೇಂದ್ರ – vishwanews24

ಮೋದಿ ಸರ್ಕಾರದಿಂದ ಸರ್ವಾಂಗೀಣ ಅಭಿವೃದ್ಧಿಗೆ ಹೊಸ ದಿಕ್ಕು: ಬಿ.ವೈ .ವಿಜಯೇಂದ್ರ ಗದಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ…

2 hours ago