Featured

ವಿಶ್ವದ ಅಮೂಲ್ಯ ಸಂಸ್ಥೆಗಳ ಲೀಗ್‌ನ ಅಗ್ರ 40 ಸ್ಥಾನವನ್ನು ಪ್ರವೇಶಿಸಿದ ರಿಲಾಯನ್ಸ್ -Vishwanews24

ವಿಶ್ವದ ಅಮೂಲ್ಯ ಸಂಸ್ಥೆಗಳ ಲೀಗ್‌ನ ಅಗ್ರ 40 ಸ್ಥಾನವನ್ನು ಪ್ರವೇಶಿಸಿದ ರಿಲಾಯನ್ಸ್‌: ಮುಕೇಶ್ ಅಂಬಾನಿ ಈಗ ವಿಶ್ವದ 5ನೇ ಶ್ರೀಮಂತ -Vishwanews24

ಮುಂಬೈ; ಮುಖೇಶ್ ಅಂಬಾನಿ ನೇತೃತ್ವದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್‌) ವಿಶ್ವದ ಅಮೂಲ್ಯ ಸಂಸ್ಥೆಗಳ ಲೀಗ್‌ನ ಅಗ್ರ 40 ಸ್ಥಾನವನ್ನು ಪ್ರವೇಶಿಸಿದೆ. ಅಲ್ಲದೆ 210 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಮೊದಲ ಭಾರತೀಯ ಕಂಪೆನಿ ಎಂಬ ಹಿರಿಮೆಗೂ ರಿಲಾಯನ್ಸ್ ಪಾತ್ರವಾಗಿದೆ.

ಗುರುವಾರದ ಷೇರು ಮಾರುಕಟ್ಟೆಯಲ್ಲಿ ಆರ್‌ಐಎಲ್‌ ಸ್ಕ್ರಿಪ್ಟ್ ರೋಸ್ ಸಾರ್ವಕಾಲಿಕ ದಾಖಲೆಯ ಗರಿಷ್ಠ 2,344.95 ಮಟ್ಟವನ್ನು ತಲುಪಿತ್ತು. ಇನ್ನೂ ಎನ್‌ಎಸ್‌ಇ ಇಂಟ್ರಾ ಸಹ ದಾಖಲೆಯ ಏರಿಕೆ ಕಂಡಿದ್ದು, 2,319 ರೂ ಗೆ ತನ್ನ ದಿನದ ವಹಿವಾಟನ್ನು ಮುಗಿಸಿದ್ದು ಶೇ. 7.29 ರಷ್ಟು ಲಾಭವನ್ನು ದಾಖಲಿಸಿತ್ತು.

ರಿಲಾಯನ್ಸ್ ಪಿಪಿ ಸ್ಕ್ರಿಪ್ಟ್ ಎನ್‌ಎಸ್‌ಇಯಲ್ಲಿ ಶೇ.10 ರಷ್ಟು ಹೆಚ್ಚುವರಿ ಗಳಿಕೆ ಸಾಧಿಸುವ ಮೂಲಕ ಮಾರುಕಟ್ಟೆ ವಹಿವಾಟು ಅಂತ್ಯದ ವೇಳೆಗೆ ಸಾರ್ವಕಾಲಿಕ 1,393.7 ಕ್ಕೆ ತಲುಪಿದೆ. ಪರಿಣಾಮ ರಿಲಾಯನ್ಸ್ ಕಂಪನಿಯ ಮಾರುಕಟ್ಟೆಯ ಒಟ್ಟು ಬಂಡವಾಳೀಕರಣ 15.45 ಲಕ್ಷ ಕೋಟಿ ರೂ.ಗೆ ಅಥವಾ 210 ಬಿಲಿಯನ್ ಯುಎಸ್ ಡಾಲರ್‌ಗೆ ಏರಿದಂತಾಗಿದೆ ಎಂದು ಮಾರುಕಟ್ಟೆ ತಜ್ಞರು ಮಾಹಿತಿ ನೀಡಿದ್ದಾರೆ.

ಮಾರುಕಟ್ಟೆ ಮುಕ್ತಾಯದ ಸಮಯದಲ್ಲಿ, ಆರ್‌ಐಎಲ್‌ಎಂ-ಕ್ಯಾಪ್ 208.3 ಬಿಲಿಯನ್ ಯುಎಸ್ ಡಾಲರ್ ಆಗಿದೆ. ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಯಾವುದೇ ಭಾರತೀಯ ಕಂಪನಿಯು 200 ಬಿಲಿಯನ್ ಯುಎಸ್ ಮಾರುಕಟ್ಟೆ ಬಂಡವಾಳೀಕರಣದ ಮೈಲಿಗಲ್ಲು ದಾಟಿರುವುದು ಇದೇ ಮೊದಲು ಎನ್ನಲಾಗುತ್ತಿದೆ.

ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ರಿಲಯನ್ಸ್ ಇಂಡಸ್ಟ್ರೀಸ್ ಪ್ರಸ್ತುತ ವಿಶ್ವದ 40 ನೇ ಅಮೂಲ್ಯ ಸಂಸ್ಥೆಯಾಗಿದ್ದು, ಎಕ್ಸಾನ್ ಮೊಬಿಲ್, ಪೆಪ್ಸಿಕೋ, ಎಸ್‌ಎಪಿ, ಒರಾಕಲ್, ಫಿಜರ್ ಮತ್ತು ನೊವಾರ್ಟಿಸ್ ಸೇರಿದಂತೆ ಹಲವು ಕಂಪನಿಗಳನ್ನು ಹಿಂದಿಕ್ಕಿ ಮುಂದಕ್ಕೆ ಚಲಿಸಿದೆ. ಅಲ್ಲದೆ, ಆರ್‌ಐಎಲ್‌ ಏಷ್ಯಾದ ಟಾಪ್ 10 ಅತ್ಯಮೂಲ್ಯ ಕಂಪನಿಗಳಲ್ಲಿ ಒಂದಾಗಿಯೂ ಗುರುತಿಸಿಕೊಂಡಿದೆ.

ಇದೀಗ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ರಿಟೇಲ್ ಉದ್ಯಮದ ಸುಮಾರು 1.47 ಲಕ್ಷ ಕೋಟಿ ರೂಪಾಯಿಗಳ ಪಾಲನ್ನು ಇ-ಕಾಮರ್ಸ್ ದಿಗ್ಗಜ ಕಂಪನಿ ಅಮೆಜಾನ್ ಗೆ ನೀಡಲು ಮುಂದಾಗಿದೆ ಎನ್ನಲಾಗಿದ್ದು, ಇದರಿಂದ ರಿಲಯನ್ಸ್ ಶೇರುಗಳಲ್ಲಿ ಶೇಕಡಾ 7ರಷ್ಟು ಏರಿಕೆ ಕಂಡುಬಂದಿದೆ. ಜೊತೆಗೆ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ವಿಶ್ವದ ಅತಿ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ 200 ಬಿಲಿಯನ್ ಡಾಲರ್ ಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳ ಹೊಂದಿರುವ ಭಾರತದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago