ಮಂಗಳೂರು : ಕರಾವಳಿಯ ಜಾನಪದ ಕ್ರೀಡೆ ಕಂಬಳದಲ್ಲಿ ಈ ಬಾರಿ ಹೊಸ ದಾಖಲೆ ಸೃಷ್ಟಿಯಾಗಿದೆ. ಕಂಬಳ ಓಟಗಾರ ಬಜಗೋಳಿ ಜೋಗಿಬೆಟ್ಟು ನಿವಾಸಿ ನಿಶಾಂತ್ ಶೆಟ್ಟಿ ಎಂಬುವರು ಹೊಸ ದಾಖಲೆ ಬರೆದಿದ್ದಾರೆ. ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದ ವೇಣೂರು ಪೆರ್ಮುಡ ಸೂರ್ಯಚಂದ್ರ ಜೋಡುಕೆರೆ ಕಂಬಳದಲ್ಲಿ ನಿಶಾಂತ್ ಶೆಟ್ಟಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಜಗತ್‌ಪ್ರಸಿದ್ಧ ಕ್ರೀಡಾಪಟು ಉಸೇನ್ ಬೋಲ್ಟ್ 100 ಮೀಟರ್ ಓಟವನ್ನು 9.58 ಸೆಕೆಂಡ್‌ಗೆ ಪೂರ್ಣಗೊಳಿಸಿರುವ ದಾಖಲೆ ಇದೆ. ಕಳೆದ ವರ್ಷ 8.78 ಸೆಕೆಂಡ್‌ಗೆ ಕಂಬಳದಲ್ಲಿ 100 ಮೀಟರ್ ಓಡುವ ಮೂಲಕ ಹಾಲಿ ಚಾಂಪಿಯನ್ ಶ್ರೀನಿವಾಸ ಗೌಡ ಅವರು ಉಸೇನ್ ಬೋಲ್ಟ್ ದಾಖಲೆ ಮುರಿದಿದ್ದಾರೆ ಎಂದು ಖ್ಯಾತಿ ಗಳಿಸಿದ್ದರು. ಈಗ ನಿಶಾಂತ್ ಶೆಟ್ಟಿ ಶ್ರೀನಿವಾಸಗೌಡ ಅವರ ದಾಖಲೆಯನ್ನೂ ಮುರಿದಿದ್ದಾರೆ.
ಈವೆಂಟ್ 125 ಮೀಟರ್ ಸ್ಪರ್ಧೆಯಾಗಿತ್ತು. ನಿಶಾಂತ್ ಶೆಟ್ಟಿ ಅವರು ಇದನ್ನು ಎಲ್ಲರಿಗಿಂತ ಕಡಿಮೆ ಸಮಯದಲ್ಲಿ ಅಂದರೆ 10.44 ಸೆಕೆಂಡುಗಳಲ್ಲಿ ತಲುಪಿದ್ದಾರೆ
ಕಳೆದ ವರ್ಷ ಕಕ್ಕೆಪದವಿನ ಸತ್ಯ ಧರ್ಮ ಜೋಡುಕೆರೆ ಕಂಬಳದಲ್ಲಿ 100 ಮೀಟರ್ ಅನ್ನು ಕಂಬಳ ಓಟಗಾರ ಶ್ರೀನಿವಾಸ ಗೌಡ ಎಂಬುವರು 8.78 ಸೆಕೆಂಡ್‌ಗಳಲ್ಲಿ ತಲುಪಿ ದಾಖಲೆ ಸೃಷ್ಟಿಸಿದ್ದರು. ಇದೀಗ ಈ ದಾಖಲೆಯನ್ನು ಕಂಬಳ ಓಟಗಾರ ನಿಶಾಂತ್ ಶೆಟ್ಟಿ ಮುರಿದಿದ್ದಾರೆ.
ಈ ಕಂಬಳದ ಹಿರಿಯರ ವಿಭಾಗದಲ್ಲಿ ನಡೆದ ಕಂಬಳ ಓಟದಲ್ಲಿ ಅವರು 125 ಮೀಟರ್ ಅನ್ನು ಕೇವಲ 10.44 ಸೆಕೆಂಡ್‌ನಲ್ಲಿ ಗುರಿಮುಟ್ಟಿದ್ದಾರೆ. ಇದನ್ನು 100 ಮೀಟರ್‌ಗೆ ಲೆಕ್ಕ ಹಾಕುವಾಗ 8.36 ಸೆಕೆಂಡ್ ಆಗುತ್ತದೆ. ಈ ದಾಖಲೆಯನ್ನು ಈವರೆಗೂ ಯಾರೂ ಮಾಡಿಲ್ಲ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…