Featured

ಶಂಕರಪುರ ಮಲ್ಲಿಗೆಯಂತೆ ಗುರೂಜಿಯ ಸಮಾಜಮುಖಿ‌ ಚಿಂತನೆ ಅಂತರಾಷ್ಟ್ರೀಯವಾಗಿ ಪಸರಿಸಲಿ: ಶಾಸಕ ಲಾಲಾಜಿ‌ ಆರ್ ಮೆಂಡನ್

ಕಾಪು: ಸಿದ್ಧಿ ಸಾಧನೆಯಿಂದ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಆಧ್ಯಾತ್ಮಿಕದತ್ತ ತಪೆನಿಷ್ಠೆ ಫಲಿಸಿದ ಘಳಿಗೆಯ ದ್ಯೋತಕವಾಗಿ ಗುರೂಜಿಗೆ ಕರ್ನಾಟಕ ಸಾಯಿ ಬಾಬಾ ಬಿರುದಾಂಕಿತಗೊಂಡಿದೆ ಎಂದು ಸಮಾಜ ಸೇವಕ, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಗುರುವಾರ ಶಂಕರಪುರ ಶ್ರೀ ಸಾಯಿ ಸಾಂತ್ವಾನ ಮಂದಿರ, ಶ್ರೀ ದ್ವಾರಕಾಮಯಿ ಸಾಯಿ ಸಾಂತ್ವಾನ ಮಂದಿರದಲ್ಲಿ ಜರಗಿದ ಹೈದರಾಬಾದ್‍ನ ರೀಚ್ ದ. ಗಾಡ್ ಇವರಿಂದ ಕರ್ನಾಟಕ ಸಾಯಿ ಬಾಬಾ ಬಿರುದಾಂಕಿತ ಗುರೂಜಿ ಸಾಯಿ ಈಶ್ವರ್‍ರವರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕ್ಲಿಷ್ಟಕರ-ಕಷ್ಟಕರ ಸಮಸ್ಯೆಗಳನ್ನು ಶಮನಗೊಳಿಸಿ ಸಂಕಷ್ಟಕ್ಕೊಳಗಾದವರಿಗೆ ಆತ್ಮವಿಶ್ವಾಸ ತುಂಬುವ ಯೋಗ್ಯ ಗುರೂಜಿಗಳ ಮೂಲಕ ಒಳ್ಳೆಯ ಸಮಾಜ ನಿರ್ಮಾಣದ ಕೈಂಕರ್ಯ ಸಾಕಾರಗೊಳ್ಳಲಿ ಎಂದರು.
ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿ, ಧಾರ್ಮಿಕ ಕ್ಷೇತ್ರದಲ್ಲಿ ಸಾಯಿ ಸಾಂತ್ವಾನದ ಮೂಲಕ ದೂರದೃಷ್ಟಿತ್ವದ ಸಮಾಜಮುಖಿ ಚಿಂತನೆಯು ಶಂಕರಪುರದ ಮಲ್ಲಿಗೆಯ ಕಂಪಿನಂತೆ ಅಂತಾರಾಷ್ಟ್ರಿ ಯ ಮಟ್ಟದಲ್ಲಿ ಪಸರಿಸಲಿ ಎಂದರು.
ಕೊಡವೂರು ಶ್ರೀ ಶಿರಡಿ ಸಾಯಿಬಾಬ ಮಂದಿರದ ಧರ್ಮದರ್ಶಿ ದಿವಾಕರ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಶಶಿಧರ್ ಕುಂದರ್ ಸಾಯಿವಿದ್ಯಾ ಯೋಜನೆಗೆ ಚಾಲನೆ ನೀಡಿದರು. ವಿದ್ಯಾರ್ಥಿಗಳಿಗೆ ಸಾಯಿವಿದ್ಯಾ ಯೋಜನೆಯನ್ನು ವಿತರಿಸಲಾಯಿತು. ದಾನಿಗಳಿಗೆ ಸಮ್ಮಾನ ನೆರವೇರಿಸಲಾಯಿತು.
ಈ ಸಂದರ್ಭ ಶ್ರೀ ಸಾಯಿ ಸಾಂತ್ವಾನ ಮಂದಿರ ಟ್ರಸ್ಟೀ ವಿಶ್ವನಾಥ್ ಸುವರ್ಣ, ಸಾಯಿತುತ್ತು ವಾಹನದ ದಾನಿ ದಯಾನಂದ ಹೆಜ್ಮಾಡಿ, ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಎಂ.ಸುವರ್ಣ, ಪಾರಾವಾಸ್ತು ಪೆಂಡೂಲಮ್ ಶಾಸ್ತ್ರಜ್ಞ ಕೆ. ಎನಾರ್ದನ ನಾಯಕ್, ಜೋಗಿ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಜೋಗಿ, ವಿಶ್ವಕರ್ಮ ಒಕ್ಕೂಟದ ಗೌರವಾಧ್ಯಕ್ಷ ಅಲೆವೂರು ಯೋಗೀಶ ಆಚಾರ್ಯ, ಮನೋಹರ್ ಶಂಕರಪುರ, ಸಮಾಜ ಸೇವಕ ತಾರಾನಾಥ ಮೇಸ್ತ, ಮಂದಿರದ ಕೋಶಾ„ಕಾರಿ ಜಗದೀಶ್ ಕಾಮತ್, ಉದ್ಯಮಿಗಳಾದ ಆನಂದ ಶೆಟ್ಟಿ, ಎಸ್.ಕೆ.ಜತ್ತನ್ನ, ಈಶ್ವರ ಚಿಟ್ಪಾಡಿ, ಕಲ್ಮಂಜೆ ರಾಘವ ಪೂಜಾರಿ, ಸುಧಾಕರ ಕರ್ಕೇರ ಹೆಜಮಾಡಿ, ಪ್ರಕಾಶ್ ಆಚಾರ್ಯ, ದಿವಾಕರ ಸನಿಲ್, ದಿವಾಕರ ಭಟ್, ಬನ್ನಂಜೆ ದಯಾನಂದ ಭಟ್ ಮೊದಲಾದವರು ವೇದಿಕೆಯಲ್ಲಿದ್ದರು.
ಶ್ರೀ ಸಾಯಿ ಸಾಂತ್ವಾನ ಮಂದಿರ ಟ್ರಸ್ಟ್ ಅಧ್ಯಕ್ಷ ಸುಧಾಕರ ಶೆಟ್ಟಿ ಸ್ವಾಗತಿಸಿದರು. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

ಜಾಹಿರಾತು: vyshali Bar& Family Restaurant kaup: 

prop: NAYESH P SHETTY: 9620427036

Vishwa News 24

Recent Posts

ಈದ್ ಮಿಲಾದ್: ದ.ಕ/ಉಡುಪಿ ಜಿಲ್ಲೆಗೆ ಆ.25ರಂದು ಸಾರ್ವತ್ರಿಕ ರಜೆ ಘೋಷಣೆ – vishwanews24

ಈದ್ ಮಿಲಾದ್: ದ.ಕ/ಉಡುಪಿ ಜಿಲ್ಲೆಗೆ ಆ.25ರಂದು ಸಾರ್ವತ್ರಿಕ ರಜೆ ಘೋಷಣೆ ಮಂಗಳೂರು: ದ.ಕ.ಮತ್ತು ಉಡುಪಿ ಜಿಲ್ಲೆಯಲ್ಲಿ ಆ. 25ರ ಮಂಗಳವಾರ…

8 hours ago

ಬದುಕಿದ್ದಾಗ ಭಿಕ್ಷುಕಿಯಾಗಿದ್ದ ವೃದ್ಧೆ ಸತ್ತ ಮೇಲೆ ಲಕ್ಷಾಧಿಪತಿ ..- vishwanews24

ಮೃತಪಟ್ಟ ಭಿಕ್ಷುಕಿಯ ಮನೆಯಲ್ಲಿ 30 ಲಕ್ಷ ರೂ. ನಗದು ಪತ್ತೆ ಮಂಡ್ಯ: ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟಿದ್ದು,…

11 hours ago

ಬ್ರಹ್ಮಾವರ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ; ಆರೋಪಿ ಮಗನ ಬಂಧನ – vishwanews24

ಬ್ರಹ್ಮಾವರ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ; ಆರೋಪಿ ಮಗನ ಬಂಧನ ಉಡುಪಿ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ…

11 hours ago

ಕಾರ್ಕಳ ಪುರಸಭೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್‌ ಭೇಟಿ.. ಕಡತಗಳ ಪರಿಶೀಲನೆ – vishwanews24

ಕಾರ್ಕಳ ಪುರಸಭೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್‌ ಭೇಟಿ.. ಕಡತಗಳ ಪರಿಶೀಲನೆ ಕಾರ್ಕಳ: ಸಾರ್ವಜನಿಕರ ಅರ್ಜಿ ಹಾಗೂ ಕಡತಗಳ ವಿಲೇವಾರಿ ಬಗ್ಗೆ…

12 hours ago

ಉಡುಪಿ : 25 ಗಂಟೆಗಳ ಕಾಲ ಗಾಯನ ; ವಿದುಷಿ ಸಂಗೀತಾ ಬಾಲಚಂದ್ರ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ದಾಖಲೆ – vishwanews24

25 ಗಂಟೆಗಳ ಗಾಯನದಿಂದ ವಿದುಷಿ ಸಂಗೀತಾ ಬಾಲಚಂದ್ರ ಗೋಲ್ಡನ್‌ ಬುಕ್‌ಆಫ್‌ ವರ್ಲ್ಡ್ ರೆಕಾರ್ಡ್‌ ದಾಖಲೆ 'ಗೀತ ಗಂಗೋತ್ರಿʼ ಬಿರುದು ನೀಡಿ…

12 hours ago

ಕಾಪು ಪುರಸಭೆಗೆ ಲೋಕಾಯುಕ್ತ ದಾಳಿ – vishwanews24

ಕಾಪು ಪುರಸಭೆಗೆ ಲೋಕಾಯುಕ್ತ ದಾಳಿ [gallery columns="1" size="large" ids="117027,117028,117029,117030,117031"]

12 hours ago