Featured

ಶಬರಿಮಲೆಗೆ ಮಹಿಳೆಯರ ಪ್ರವೇಶ : ಮಹಿಳೆಯರನ್ನು ನೋಡದ ಅಯ್ಯಪ್ಪ ದೇವರೇ ಅಲ್ಲ: ಪ್ರಕಾಶ್ ರೈ

ಶಾರ್ಜಾ:ಮಹಿಳೆಯರಿಗೆ ದೇವರನ್ನು ನೋಡಲು, ಪೂಜೆ ಮಾಡುವ ಅವಕಾಶ ನೀಡದ ಎಲ್ಲಾ ಧರ್ಮವನ್ನು ತಾನು ಗೌರವಿಸುವುದಿಲ್ಲ. ಮಹಿಳೆಯರನ್ನು ನೋಡದ ದೇವರು ತನಗೆ ದೇವರೇ ಅಲ್ಲ ಎಂದು ನಟ ಪ್ರಕಾಶ್ ರೈ ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿಷಯ ಕುರಿತಂತೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಮಹಿಳೆಯರನ್ನು ನೋಡದ ದೇವರು ದೇವರೇ ಅಲ್ಲ ಎಂದು ಹೇಳುವ ಮೂಲಕ ನಟ ಪ್ರಕಾಶ್ ರೈ ವಿವಾದದ ಸುಳಿಯಲ್ಲಿ ಸಿಲುಕೊಂಡಿದ್ದಾರೆ

ಮಹಿಳೆಯರಿಗೆ ಪೂಜೆ ಮಾಡಲು ಅವಕಾಶ ನೀಡದ ದೇವರು ಮತ್ತು ಭಕ್ತರನ್ನು ತಾನು ನಂಬುವುದಿಲ್ಲ. ಎಲ್ಲರೂ ಜನಿಸುವುದು ಹೆಣ್ಣಿನಿಂದಲೇ. ಹೀಗಾಗಿ ಮಹಿಳೆಗೆ ಪ್ರವೇಶಿಸುವ ಅವಕಾಶವನ್ನು ನಿರ್ಬಂಧಿಸಿದರೆ ಅದು ದೇವರು ಆಕೆಯ ಹಕ್ಕನ್ನು ಉಲ್ಲಂಘಿಸಿದಂತೆ ಎಂದು ಹೇಳಿದರು.

ಯಾವ ಭಕ್ತರು ಸ್ತ್ರೀಯರಿಗೆ ದೇವರ ದರ್ಶನಕ್ಕೆ ಅವಕಾಶ ಕೊಡುವುದಿಲ್ಲವೋ ಅವರು ಭಕ್ತರೇ ಅಲ್ಲ. ಯಾವ ದೇವರು ಮಹಿಳೆಯನ್ನು ನೋಡೋದಿಲ್ಲವೋ ಅದು ದೇವರೇ ಅಲ್ಲ. ಮಹಿಳೆಯರಿಗೆ ಶಬರಿಮಲೆ ದೇಗುಲ ಪ್ರವೇಶಕ್ಕೆ, ದೇವರ ದರ್ಶನಕ್ಕೆ ಅವಕಾಶ ಕೊಡಲೇಬೇಕು. ಮಹಿಳೆಯರನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ ಅಂತಾ ಹೇಳಿದ್ದಾರೆ.

ಶಾರ್ಜಾದ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಮಾತನಾಡಿದ ಅವರು, ಭೂಮಿಯನ್ನು ಹೆಣ್ಣಿಗೆ ಹೋಲಿಸುತ್ತೇವೆ, ಹೆಣ್ಣು ಅಂದ್ರೆ ತಾಯಿ, ಹೆಣ್ಣಿಗೆ ಅಪಾರವಾದ ಗೌರವ ಕೊಡುವ ಸಂಸ್ಕೃತಿಯಲ್ಲಿ ದೇವರನ್ನು ನೋಡುವುದು ಮತ್ತು ಪೂಜಿಸುವ ಹಕ್ಕನ್ನು ನಿರ್ಬಂಧಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

Vishwa News 24

Recent Posts

ಉಡುಪಿ : ಯುವತಿ ನಾಪತ್ತೆ -vishwanews24

ಉಡುಪಿ : ಯುವತಿ ನಾಪತ್ತೆ ಉಡುಪಿ : ಉಡುಪಿ ಸವೀಸ್ ಬಸ್ ನಿಲ್ದಾಣದ ಬಳಿ ಇರುವ ಹೊಲಿಗೆ ತರಬೇತಿ ಕೇಂದ್ರದಲ್ಲಿ…

11 hours ago

ಪಡುಬಿದ್ರಿ : ವ್ಯಕ್ತಿ ನಾಪತ್ತೆ -vishwanews24

ಪಡುಬಿದ್ರಿ : ವ್ಯಕ್ತಿ ನಾಪತ್ತೆ ಉಡುಪಿ: ಎಲ್ಲೂರು ಗ್ರಾಮ ಅದಮಾರು ಅಂಚೆ ಅಂಬೇಡ್ಕರ್ ರೋಡ್ ಆಶಿರ್ವಾದ ಹೌಸ್ ನಿವಾಸಿ ಹರ್ಷಲ್…

11 hours ago

ತುಳು ಭಾಷೆಯ ಮಾನ್ಯತೆ ಕೇವಲ ಉಡುಪಿ-ದ.ಕ. ಜಿಲ್ಲೆಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ : ಪ್ರಮೋದ್ ಮಧ್ವರಾಜ್ -vishwanews24

ತುಳು ಭಾಷೆಯ ಮಾನ್ಯತೆ ಕೇವಲ ಉಡುಪಿ-ದ.ಕ. ಜಿಲ್ಲೆಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ : ಪ್ರಮೋದ್ ಮಧ್ವರಾಜ್ ಉಡುಪಿ: ತುಳು ಭಾಷೆಗೆ ಅಧಿಕೃತ…

12 hours ago

ಉಡುಪಿ ಜಿಲ್ಲಾಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಖಾದರ್ ಗೆ ಉಡುಪಿ ಶಾಸಕರ ಮನವಿ -vishwanews24

ಉಡುಪಿ ಜಿಲ್ಲಾಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಖಾದರ್ ಗೆ ಉಡುಪಿ ಶಾಸಕರ ಮನವಿ ಉಡುಪಿ: ನೂತನ ಜಿಲ್ಲಾಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಶೀಘ್ರ…

12 hours ago

ದುಬೈಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಕೊಲೆ : ಪತ್ನಿ  , ಪುತ್ರ ನಾಪತ್ತೆ ;  ಪ್ರಕರಣ ದಾಖಲು -vishwanews24

ದುಬೈಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಕೊಲೆ : ಪತ್ನಿ  , ಪುತ್ರ ನಾಪತ್ತೆ ;  ಪ್ರಕರಣ ದಾಖಲು…

15 hours ago

ಮಂಗಳೂರು : ಅಕ್ರಮವಾಗಿ ಜಾನುವಾರು ಸಾಗಾಟ: ಓರ್ವ ಬಂಧನ, ಮತ್ತೋರ್ವ ಪರಾರಿ -vishwanews24

ಮಂಗಳೂರು : ಅಕ್ರಮವಾಗಿ ಜಾನುವಾರು ಸಾಗಾಟ: ಓರ್ವ ಬಂಧನ, ಮತ್ತೋರ್ವ ಪರಾರಿ ಮಂಗಳೂರು: ಅಕ್ರಮವಾಗಿ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು…

15 hours ago