Featured

ಶಬರಿಮಲೆಗೆ ಹೋಗುವವರು ಕಾಣಿಕೆಯನ್ನು ಹಾಕದಿರಿ ; ನಾವು ಹಾಕಿದ ಕಾಣಿಕೆ ಹಣವನ್ನು ಅಲ್ಲಿನ ಸರ್ಕಾರ ಶಬರಿಮಲೆ ದೇವಸ್ಥಾನಕ್ಕೆ ಬಳಸುವುದಿಲ್ಲ : ಶಾಸಕ ಭರತ್ ಶೆಟ್ಟಿ

ಮಂಗಳೂರು: ಶಬರಿಮಲೆ ದೇವಸ್ಥಾನಕ್ಕೆ ಹೋಗುವವರು ಒಂದು ರೂಪಾಯಿ ಕಾಣಿಕೆಯನ್ನು ಹಾಕದಿರಿ. ಯಾಕೆಂದರೆ ನಾವು ಹಾಕಿದ ಆ ಕಾಣಿಕೆ ಹಣವನ್ನು ಯಾವುದೇ ಕಾರಣಕ್ಕೂ ಅಲ್ಲಿನ ಸರ್ಕಾರ ಶಬರಿಮಲೆ ದೇವಸ್ಥಾನಕ್ಕೆ ಬಳಸುವುದಿಲ್ಲ ಎಂದು ಶಬರಿಮಲೆ ಸಂರಕ್ಷಣಾ ಕ್ರಿಯಾ ಸಮಿತಿಯಿಂದ ನಡೆದ ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತರ ಮೇಲಿನ ದೌರ್ಜನ್ಯದ ವಿರುದ್ಧ ಇಂದು ಬೆಳಗ್ಗೆ ದ.ಕ. ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ನಡೆದ ಪ್ರತಿಭಟನಾ ಸಭೆಯಲ್ಲಿ ಶಾಸಕ ವೈ.ಭರತ್ ಶೆಟ್ಟಿ ಹೇಳಿದರು.

ಕಮ್ಯುನಿಸ್ಟರಿಗೆ ಅನ್ಯ ಧರ್ಮಿಯರ ನಂಬಿಕೆಗಳಿಗೆ ಘಾಸಿಗೊಳಿಸುವ ಧೈರ್ಯ ಇಲ್ಲ. ಹಿಂದೂಗಳು ಮಾತ್ರ ಟಾರ್ಗೆಟ್ ಆಗುತ್ತಿದ್ದಾರೆ. ಇಡೀ ಕೇರಳದ ಹಿಂದೂಗಳು ಇದರ ವಿರುದ್ಧ ನಿಂತಿದ್ದಾರೆ. ನಾವುಗಳು ಎಲ್ಲಾ ರಾಜ್ಯಗಳಿಂದ ಲಕ್ಷಗಟ್ಟಲೆ ಜನ ನಮ್ಮ ಕಾರ್ಯಕರ್ತರು ಶಬರಿಮಲೆಗೆ ಹೋಗುತ್ತೇವೆ. ಅವರು ಎಷ್ಟು ಪೊಲೀಸರನ್ನು ಹಾಕುತ್ತಾರೆ ನೋಡೋಣ. ಈಗ 15 ರಿಂದ 20 ಸಾವಿರ ಪೊಲೀಸರನ್ನು ಹಾಕಿದ್ದಾರೆ. ನಾವೂ ಲಕ್ಷಾಂತರ ಜನ ಅಲ್ಲಿಗೆ ಮಾಲೆ ಹಾಕಿಕೊಂಡು ಹೋಗುತ್ತೇವೆ. ಇವರ 15 ಸಾವಿರ ಪೊಲೀಸರಿಗೆ ನಮ್ಮನ್ನು ಏನು ಮಾಡಲು ಸಾಧ್ಯ ಅನ್ನೋದನ್ನು ನೋಡುತ್ತೇವೆ ಎಂದು ಬಿಜೆಪಿ ಶಾಸಕ ಸವಾಲು ಹಾಕಿದರು.

ಹಿಂದೆ ಶಬರಿಮಲೆಯಲ್ಲಿ ಪೊಲೀಸ್ ಸೆಕ್ಯುರಿಟಿಗಳಿಗೆ ಅಲ್ಲೊಂದು ನಿಯಮ ಇತ್ತು. ಚರ್ಮದ ಶೂ ಹಾಗೂ  ಬೆಲ್ಟ್ ಹಾಕುವಂತಿಲ್ಲ, ಔಟ್ ಶರ್ಟ್ ಮಾಡಲಾಗುತಿತ್ತು. ಕಪ್ಪು ಬಟ್ಟೆಯನ್ನು ಕತ್ತಿನ ಸುತ್ತ ಧರಿಸಲಾಗುತ್ತಿತ್ತು. ಆದರೆ  ಈಗ ಬಂದ ಐಪಿಎಸ್ ಅಧಿಕಾರಿಗೆ ಈ ಬಗ್ಗೆ ಜ್ಞಾನವಿಲ್ಲ. ಶಬರಿಮಲೆಯ ಈಗಿನ ಐಪಿಎಸ್ ಅಧಿಕಾರಿ ಪೊಲೀಸರಿಗೆ ಶೂ ಹಾಕಬೇಕು, ಬೆಲ್ಟ್ ಹಾಕಬೇಕು, ಇನ್ ಶರ್ಟ್ ಮಾಡಬೇಕು ಕಪ್ಪು ಬಟ್ಟೆಗಳನ್ನು ತೊಡಬಾರದು ಎಂದು ಆಜ್ಞೆ ಮಾಡಿದ್ದಾರೆ ಎಂದು ಆರೋಪಿಸಿದರು.

ಅಲ್ಲದೆ ಶಬರಿಮಲೆಗೆ ತೆರಳಿದ ಭಕ್ತರನ್ನು ಅದೇ ಬೂಟ್ ಗಾಲಿನಿಂದ ತುಳಿಯಲಾಗುತ್ತಿದೆ. ಅದರಲ್ಲಿಯೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಂದ್ರನ್ ಅವರ ಇರುಮುಡಿಯನ್ನು ನೆಲಕ್ಕೆ ಕೆಡವಿ, ಅವರನ್ನು ದರದರನೆ ಎಳೆದುಕೊಂಡು ಹೋಗುವ ದೃಶ್ಯ ಜಾಲತಾಣಗಳಲ್ಲಿ ವೈರಲ್ ಆಗಿದೆ‌. ಅಂದರೆ ಹಿಂದೂ ಭಾವನೆಗಳಿಗೆ, ಹಿಂದೂ ಪೂಜಾ ವಿಧಾನಗಳಿಗೆ ಅಲ್ಲಿ ಬೆಲೆಯೇ ಇಲ್ಲವೆಂದು ಶಾಸಕ ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಗಣೇಶ್ ಪೊದುವಾಲ್, ರಾಧಾಕೃಷ್ಣ ಅಡ್ಯಂತಾಯ ಸೇರಿದಂತೆ ಮತ್ತಿತರರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಶರಣ್ ಪಂಪ್ವೆಲ್, ಬ್ರಿಜೇಶ್ ಚೌಟ, ಜಗದೀಶ್ ಶೇಣವ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Vishwa News 24

Recent Posts

ಎಸ್‌ಟಿಪಿಯನ್ನು ಮೂಳೂರಿನಿಂದ ಬೆಳಪು ಪ್ರದೇಶಕ್ಕೆ ಸ್ಥಳಾಂತರ ಮಾಡಿದರೆ ಕಾಪು ಪುರಸಭೆಗೆ ಸಂಪೂರ್ಣ ಸ್ವಾಗತ : ದೇವಿಪ್ರಸಾದ್ ಶೆಟ್ಟಿ – vishwanews24

ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…

1 day ago

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ – vishwanews24

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…

2 days ago

ಬಿಜೆಪಿ ನಡೆಸಿರುವ ಅಪವಿತ್ರ ಮೈತ್ರಿ ಇತಿಹಾಸವನ್ನು ದೇಶ ಮರೆತಿಲ್ಲ : ಬಿ.ಕೆ.ಹರಿಪ್ರಸಾದ್ – vishwanews24

ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…

2 days ago

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ – vishwanews24

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್‌ನ ಅಧ್ಯಕ್ಷ,…

2 days ago

ವಿವಾಹಿತ ಮಹಿಳೆ  ಜತೆ ಲಿವ್ ಇನ್ ರಿಲೇಶನ್‌ ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  – vishwanews24

ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ನೇಣುಬಿಗಿದ…

2 days ago

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ – vishwanews24

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…

2 days ago