ತಿರುವನಂತಪುರಂ: ಸುಪ್ರೀಮ್ ಕೋರ್ಟ್ ತೀರ್ಮಾನದಂತೆ ಹಲವು ವಿಧದ ವಿರೋಧಗಳ ನಡುವೆಯೂ ಶಬರಿಮಲೆ ಅಯ್ಯಪ್ಪ ದೇವಾಲಯವನ್ನು ಪ್ರವೇಶಿಸಿದ್ದಕ್ಕೆ ತನ್ನ ಅತ್ತೆಯಿಂದಲೇ ಹಲ್ಲೆಗೀಡಾಗಿ ಸುದ್ದಿಯಾಗಿದ್ದ ಕೇರಳದ ಕನಕದುರ್ಗ ಎಂಬ ಮಹಿಳೆಗೆ ಇದೀಗ ಕುಟುಂಬ ಸದಸ್ಯರು ಬಹಿಷ್ಕಾರ ಹಾಕಿದ್ದಾರೆ.
ಅತ್ತೆಯಿಂದ ಹಲ್ಲೆಗೆ ಒಳಗಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಕುಟುಂಬ ಸದಸ್ಯರು ಮನೆ ಪ್ರವೇಶಕ್ಕೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಈಗ ಕನಕದುರ್ಗ ಸರ್ಕಾರದ ವಸತಿ ನಿಲಯದಲ್ಲಿ ಆಶ್ರಯ ಪಡೆದಿದ್ದಾರೆ.
ಡಿಸೆಂಬರ್ 22 ರಂದು ತಿರುವನಂತಪುರಂನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳುತ್ತೇನೆ ಎಂದು ಕನಕದುರ್ಗ ಸುಳ್ಳು ಹೇಳಿ ದೇವಾಲಯವನ್ನು ಪ್ರವೇಶಿಸಿದ್ದರು. ಭಕ್ತರ ವಿರೋಧದ ಮಧ್ಯೆ ದೇವಾಲಯವನ್ನು ಪ್ರವೇಶಿಸಿದ್ದಕ್ಕೆ ಕೋಪಗೊಂಡಿರುವ ಅತ್ತೆ ಮತ್ತು ಮಾವ ಕನಕ ದುರ್ಗ ಅವರಿಗೆ ಮನೆಯ ಪ್ರವೇಶವನ್ನು ನಿರಾಕರಿಸಿ ಹೊರದಬ್ಬಿದ್ದಾರೆ.
ಕನಕದುರ್ಗಾ ಅಯ್ಯಪ್ಪ ದೇವಸ್ಥಾನಕ್ಕೆ ಪ್ರವೇಶಿಸಿದ್ದನ್ನು ವಿರೋಧಿಸಿ ಆಕೆಯ ಅತ್ತೆ ಹಲ್ಲೆ ಮಾಡಿದ್ದರು. ಆಕೆಯ ಸೋದರ ಭರತ್ ಭೂಷಣ್ ಕೂಡ ವಿರೋಧಿಸಿದ್ದರು. ಪತಿಯ ಮನೆಯಿಂದ ಹೊರಹಾಕಲ್ಪಟ್ಟ ಕನಕದುರ್ಗಗೆ ತನ್ನ ಅಣ್ಣ ಭರತ್ ಕೂಡ ಆಶ್ರಯ ನೀಡಲಿಲ್ಲ. ತನ್ನ ಮನೆಗೆ ಕಾಲಿಡದಂತೆ ಅಣ್ಣ ಕೂಡ ತಾಕೀತು ಮಾಡಿದ್ದಾರೆ.
ಅಯ್ಯಪ್ಪ ದೇವಾಲಯದ ಸಂಪ್ರದಾಯವನ್ನು ಮುರಿದಿದ್ದಕ್ಕೆ ಕನಕದುರ್ಗ ಸಾರ್ವಜನಿಕವಾಗಿ ಹಿಂದೂ ಸಮುದಾಯ ಮತ್ತು ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಕ್ಷಮೆ ಕೇಳದ ಹೊರತು ಆಕೆಯನ್ನು ಮನೆಗೆ ಸೇರಿಸಿಕೊಳ್ಳುವುದಿಲ್ಲ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…