ತಿರುವನಂತಪುರ: ಶಬರಿಮಲೆಗೆ ಹೋಗುತ್ತಿದ್ದ ಮಹಿಳೆಯರ ಮೇಲೆ ವ್ಯಕ್ತಿಯೊಬ್ಬ ಪೆಪ್ಪರ್ ಸ್ಪ್ರೇ ಸಿಂಪಡಿಸಿದ ಘಟನೆ ಕೇರಳದ ಕೊಚ್ಚಿ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ನಡೆದಿದೆ
ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಇದರಲ್ಲಿ ಬಿಂದು ಅಮ್ಮಣ್ಣಿ ವ್ಯಕ್ತಿಯೋರ್ವ ಪೆಪ್ಪರ್ ಸ್ಪ್ರೇ ದಾಳಿ ನಡೆಸಿದಾಗ, ಆಕೆ ಮುಖವನ್ನು ಮುಚ್ಚುತ್ತಾ ಆತನಿಂದ ರಕ್ಷಣೆ ಪಡೆಯಲು ದೂರ ಓಡಿಹೋಗುವ ದೃಶ್ಯ ದಾಖಲಾಗಿದೆ. ಮತ್ತೊಂದೆಡೆ ಆಕೆ “ಶಬರಿಮಲೆಗೆ ಮಹಿಳೆಯರ ಭೇಟಿಯನ್ನು ತಡೆಯುವಂತಿಲ್ಲ ನ್ಯಾಯಾಂಗ ನಿಂದನೆಯಾಗುತ್ತದೆ” ಎಂದು ಮಾಧ್ಯಮದೊಂದಿಗೆ ಮಾತನಾಡುತ್ತಿರುವಾಗ ಆಕೆಯ ಹೇಳಿಕೆಯನ್ನು ವಿರೋಧಿಸಿ ಮದ್ಯವಯಸ್ಕ ವ್ಯಕ್ತಿಗೆ ಬಿಂದು ಅಮ್ಮಣ್ಣಿ ಕೋಪಗೊಂಡು ತನ್ನ ಕೈ- ಮುಖಕ್ಕೆ ಅಂಟಿದ್ದ ಪೆಪ್ಪರ್ ಸ್ಪ್ರೇಯನ್ನು ಆತನ ಮುಖಕ್ಕೆ ಹಚ್ಚುವ ದೃಶ್ಯವೂ ಕಂಡುಬಂದಿದೆ. ಸದ್ಯ ಬಿಂದು ಅಮ್ಮಣ್ಣಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇನ್ನೊಂದೆಡೆ ಮಹಿಳಾ ಹಕ್ಕುಗಳ ಕಾರ್ಯಕರ್ತೆ ತೃಪ್ತಿ ದೇಸಾಯಿ ಕೊಚ್ಚಿಗೆ ಬಂದಿಳಿದಿದ್ದು, ಇಂದು ಶಬರಿ ಮಲೆಗೆ ಏರುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಸರಕಾರ ಅಥವಾ ಸ್ಥಳೀಯ ಪೊಲೀಸರು ನನ್ನನ್ನು ತಡೆದರೆ ಅದು ಕಾನೂನು ಉಲ್ಲಂಘನೆಯಾಗುತ್ತದೆ. ದೇವಸ್ಥಾನಕ್ಕೆ ಭೇಟಿ ನೀಡುವುದು ನನ್ನ ಹಕ್ಕು, ಸರ್ಕಾರ ರಕ್ಷಣೆ ನೀಡಿದರೂ ನೀಡದಿದ್ದರೂ ನಾನು ಶಬರಿಮಲೆ ಏರಿಯೇ ಸಿದ್ದ ಎಂದು ಹೇಳಿದ್ದಾರೆ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…