Featured

ಶಬರಿಮಲೆ ಭಕ್ತರ ಪರ ಆರ್‌.ಎಸ್‌.ಎಸ್ ಮತ್ತು ಬಿಜೆಪಿ ಬಂಡೆಕಲ್ಲಿನಂತೆ ನಿಲ್ಲುತ್ತೇವೆ.! ಬಿಜೆಪಿ ಚಾಣಕ್ಯ ಅಮಿತ್ ಶಾ

ಕೇರಳ: ಹಿಂದುತ್ವಕ್ಕೆ ಧಕ್ಕೆ ಉಂಟಾದಾಗ ಅದರ ಪರವಾಗಿ ಧ್ವನಿ ಎತ್ತುವುದು ಬಿಜೆಪಿ ಮತ್ತು ಆರ್‌ಎಸ್ಎಸ್ ಮಾತ್ರ ಎಂಬುದು ಕೇವಲ ಬಾಯಿ ಮಾತಿಗೆ ಹೇಳಿಕೊಂಡಿಲ್ಲ ಬದಲಾಗಿ ಯಾವ ರೀತಿ ಸವಾಲುಗಳನ್ನು ಎದುರಿಸಬೇಕು ಎಂಬುದನ್ನು ಇದೀಗ ಕೇರಳದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜಕೀಯ ಚಾಣಕ್ಯ ಅಮಿತ್ ಶಾ ಕಮ್ಯುನಿಸ್ಟರಿಗೆ ಎಚ್ಚರಿಕೆ ನೀಡಿದ್ದಾರೆ. ಕಮ್ಯೂನಿಸ್ಟರು ಪದೇ ಪದೇ ಕೇರಳದಲ್ಲಿ ಹಿಂದೂ ಕಾರ್ಯಕರ್ತರ ಮತ್ತು ಬಿಜೆಪಿ ಕಾರ್ಯಕರ್ತರಿಗೆ ತೊಂದರೆ ನೀಡಿ ತನ್ನ ರಾಜಕೀಯ ಆಟ ಆಡುತ್ತಿದೆ, ಆದರೆ ಇದಕ್ಕೆಲ್ಲ ಕೊನೆ ಹಾಡುವ ಕಾಲ ಬಂದಿದೆ. ಶಬರಿಮಲೆ ವಿಚಾರವಾಗಿ ಮೂಗುತೂರಿಸುತ್ತಿರುವ ಕೇರಳ ಸರಕಾರ ಅಯ್ಯಪ್ಪ ಭಕ್ತರ ಮೇಲೆ ಯಾವುದೇ ದಬ್ಬಾಳಿಕೆ ನಡೆಸಿದರು ಅದರ ಪರಿಣಾಮ ಬಹಳ ಘೋರವಾಗಿರುತ್ತದೆ ಎಂದು ಕಮ್ಯುನಿಸ್ಟರ ಕೋಟೆ ಕಣ್ಣೂರಿನಲ್ಲಿ ನಿಂತು ಗುಡುಗಿದ ಚಾಣಕ್ಯ, ಅಯ್ಯಪ್ಪ ಭಕ್ತರ ರಕ್ಷಣೆಗೆ ಬಿಜೆಪಿ ಮತ್ತು ಆರ್‌ಎಸ್ಎಸ್ ಕಾರ್ಯಕರ್ತರು ಬಂಡಕಲ್ಲಿನಂತೆ ಕಾವಲಾಗಿರುತ್ತೇವೆ ಎನ್ನುವ ಮೂಲಕ ಕೇರಳ ಕಮ್ಯುನಿಸ್ಟ್ ಸರಕಾರಕ್ಕೆ ಸವಾಲೆಸೆದಿದ್ದಾರೆ.!

ಬಿಜೆಪಿ ಕಛೇರಿ ಉದ್ಘಾಟನೆ ಮಾಡಿ ರಣಕಹಳೆ ಮೊಳಗಿಸಿದ ಶಾ.!

ಈಗಾಗಲೇ ಕೇರಳದಲ್ಲಿ ಕಮ್ಯುನಿಸ್ಟರ ಅಟ್ಟಹಾಸಕ್ಕೆ ಅಂತ್ಯವಾಡುವ ಸಮಯ ಬಂದಿದೆ, ಕಮ್ಯುನಿಸ್ಟ್ ಕಾರ್ಯಕರ್ಯರಿಂದ ನಿರಂತರ ತೊಂದರೆ ಅನುಭವಿಸಿ ಕಂಗಾಲಾಗಿರುವ ಕೇರಳದ ಜನತೆ ಬದಲಾವಣೆ ಬಯಸುತ್ತಿದ್ದಾರೆ ಎಂದರೆ ತಪ್ಪಾಗದು. ಅದೇ ರೀತಿ ಕೇರಳದಲ್ಲಿ ಆರ್‌ಎಸ್ಎಸ್ ಪ್ರಾಬಲ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೇರಳದ ಜನ ಕೂಡ ಬಿಜೆಪಿ ಕಡೆ ಹೆಚ್ಚು ಒಲವು ತೋರಿಸುತ್ತಿದ್ದು ಬಿಜೆಪಿ ಬಲಿಷ್ಠವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದೆ. ಅದೇ ರೀತಿ ಇದೀಗ ಕೇರಳದ ಕಣ್ಣೂರಿನಲ್ಲಿ ಭಾರತೀಯ ಜನತಾ ಪಕ್ಷದ ಕಛೇರಿ ಉದ್ಘಾಟನೆಗೆ ಆಗಮಿಸಿದ ಅಮಿತ್ ಶಾ, ಶಬರಿಮಲೆ ವಿಚಾರವಾಗಿ ಯಾವುದೇ ಕಾರಣಕ್ಕೂ ಅಯ್ಯಪ್ಪ ಭಕ್ತರು ಭಯಪಡಬೇಕಾದ ಅವಶ್ಯಕತೆ ಇಲ್ಲ, ಅಯ್ಯಪ್ಪ ಭಕ್ತರ ಜೊತೆ ಬಿಜೆಪಿ ಆರ್‌ಎಸ್ಎಸ್ ಸದಾ ಇದೆ ಎಂದು ಭರವಸೆ ನೀಡಿದ್ಧಾರೆ.!

ದೇವರ ನಾಡು ಎಂದು ಕರೆಯುತ್ತಿದ್ದ ಕೇರಳದಲ್ಲಿ ಇಂದು ನರಹಂತಕರು ಅಟ್ಟಹಾಸ ಮೆರೆಯುತ್ತಿದ್ದಾರೆ, ಆದರೆ ಇವೆಲ್ಲದಕ್ಕೂ ಕೊನೆಹಾಡಲು ಬಿಜೆಪಿ ತಯಾರಾಗಿದೆ ಎಂದಿರು ಶಾ, ಕಮ್ಯುನಿಸ್ಟರು ಹಿಂದೂಗಳ ಧಾರ್ಮಿಕ ವಿಚಾರವಾಗಿ ಕೈಹಾಕದೇ ಇದ್ದಷ್ಟು ಅವರಿಗೇ ಒಳ್ಳೆಯದು ಎಂದು ಹೇಳಿದ್ದಾರೆ. ಅಯ್ಯಪ್ಪ ಭಕ್ತರ ತಾಳ್ಮೆ ಪರೀಕ್ಷಿಸಿದ ಕೇರಳ ಸರಕಾರಕ್ಕೆ ಈಗಾಗಲೇ ಒಂದು ಬಾರಿ ಸೋಲಾಗಿದೆ, ಇದನ್ನು ಇಲ್ಲಿಗೆ ಕೈಬಿಟ್ಟರೆ ಒಳ್ಳೆಯದು, ಇಲ್ಲವಾದರೆ ಪರಿಣಾಮವನ್ನು ಎದುರಿಸಲು ತಯಾರಾಗಿ ಎಂದು ಸವಾಲು ಹಾಕಿದ್ದಾರೆ.!

Vishwa News 24

Recent Posts

ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ಪ್ರಕರಣ : ಆರೋಪಿ ಬಂಧನ – vishwanews24

ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ಪ್ರಕರಣ : ಆರೋಪಿ ಬಂಧನ ಉಡುಪಿ: ಬೈಂದೂರು ತಾಲೂಕು ಕೊಲ್ಲೂರು…

3 minutes ago

ಭಟ್ಕಳ ಕಪ್ಪೆಚಿಪ್ಪು ದುರಂತ : ಮೃತ 11 ಮಂದಿಯ ಸಾಮೂಹಿಕ ಅಂತ್ಯಕ್ರಿಯೆ – vishwanews24

ಭಟ್ಕಳ ಕಪ್ಪೆಚಿಪ್ಪು ದುರಂತ : ಮೃತ 11 ಮಂದಿಯ ಸಾಮೂಹಿಕ ಅಂತ್ಯಕ್ರಿಯೆ ಕಾರವಾರ: ಕಪ್ಪೆಚಿಪ್ಪು ತೆಗೆಯಲು ಹೋಗಿ ಸಾವನ್ನಪ್ಪಿದ್ದ 11 ಮಂದಿಯ…

13 minutes ago

ಕಂದಕಕ್ಕೆ ಉರುಳಿದ ಕಾರು : ಎಂಟು ಮಂದಿ ಸಾವು – vishwanews24

ಕಂದಕಕ್ಕೆ ಉರುಳಿದ ಕಾರು : ಎಂಟು ಮಂದಿ ಸಾವು ಜೈಪುರ: ಸ್ಕಾರ್ಪಿಯೋ ಎಸ್‌ಯುವಿ  ಕಾರೊಂದು ಸುಮಾರು 700 ಅಡಿ ಕಂದಕಕ್ಕೆ…

19 minutes ago

ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ; ಆರೋಪಿ ಪತ್ತೆಗೆ ತೀವ್ರಗೊಂಡ ತನಿಖೆ – vishwanews24

ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ; ಆರೋಪಿ ಪತ್ತೆಗೆ ತೀವ್ರಗೊಂಡ ತನಿಖೆ ಕೊಲ್ಲೂರು: ಮೇ 17ರ…

34 minutes ago

ಮಂಗಳೂರು : ಎಬೋಲಾ ವೈರಸ್ ಪ್ರಕರಣ ; ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಣೆ – vishwanews24

ಮಂಗಳೂರು : ಹೆಚ್ಚುತ್ತಿರುವ ಎಬೋಲಾ ವೈರಸ್ ಪ್ರಕರಣ ; ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಣೆ ಮಂಗಳೂರು : ಆಫ್ರಿಕಾ…

1 hour ago

ಚುನಾವಣೆ ಗೆಲ್ಲಲು ಬಿಜೆಪಿಯಿಂದ ಚುನಾವಣಾ ಆಯೋಗದ ದುರುಪಯೋಗ : ದಿನೇಶ್ ಗುಂಡೂರಾವ್ -vishwanews24

ಇ.ಡಿ, ಐಟಿಯವರು ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ : ದಿನೇಶ್ ಗುಂಡೂರಾವ್ ಆರೋಪ  ಮಂಗಳೂರು: ಚುನಾವಣೆ ಗೆಲ್ಲಲು ಬಿಜೆಪಿಯಿಂದ ಚುನಾವಣಾ ಆಯೋಗದ…

3 days ago