ಮಂಗಳೂರು, :ಶಬರಿಮಲೆಯ ಶ್ರೀ ಅಯ್ಯಪ್ಪ ಸನ್ನಿಧಿಗೆ ಮಹಿಳೆಯ ಪ್ರವೇಶ ವಿರೋಧಿಸಿ ಮಂಗಳೂರು ಅಯ್ಯಪ್ಪ ಸೇವಾ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಶಬರಿಮಲೆ ಉಳಿಸಿ ಜಾಗೃತಿ ಸಮಾವೇಶ ನಗರದಲ್ಲಿ ಮಂಗಳವಾರ ಆಯೋಜಿಸಲಾಗಿತ್ತು. ಮಂಗಳೂರಿನ ಕದ್ರಿ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿವಿಧ ಹಿಂದೂ ಪರ ಸಂಘಟನೆಗಳು ಭಾಗವಹಿಸಿದ್ದವು.
ಶಬರಿಮಲೆ ತೀರ್ಪಿನ ವಿರುದ್ಧ ಅ.9 ರಂದು ಮಂಗಳೂರಲ್ಲಿ ಬೃಹತ್ ಪ್ರತಿಭಟನೆ ಸಭೆಯಲ್ಲಿ ನೂರಾರು ಮಂದಿ ಮಹಿಳೆಯರು, ಅಯ್ಯಪ್ಪ ಸ್ವಾಮಿ ಭಕ್ತರು ಭಾಗವಹಿಸಿ ಸುಪ್ರೀಂ ಆದೇಶದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೈಯಲ್ಲಿ ಪ್ಲೆಕ್ ಕಾರ್ಡ್ ಗಳನ್ನು ಹಿಡಿದು ಸೇವ್ ಶಬರಿಮಲೆ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಸಭೆ ಆರಂಭಕ್ಕೂ ಮುನ್ನ ಅಯ್ಯಪ್ಪ ಸ್ವಾಮಿಯ ಶರಣು ಘೋಷ, ಭಕ್ತಿಗೀತೆಗಳನ್ನು ಹಾಡಲಾಯಿತು.
ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಹಿಂದೂ ಸಂಘಟನೆ ಗಳ ಮುಖಂಡರು ಶಬರಿ ಮಲೆ ಅತ್ಯಂತ ಪರಿಶುದ್ಧ ಕ್ಷೇತ್ರವಾಗಿದೆ. ಮಹಿಳೆಯರ ಪ್ರವೇಶ ವಿಚಾರವನ್ನಿಟ್ಟುಕೊಂಡು ಹಿಂದೂ ಧರ್ಮ ಒಡೆಯುವ ಕೆಲಸವಾಗುತ್ತಿದೆ. ಕೇರಳ ಜನ ಈಗಾಗಲೇ ಆಂದೋಲನ ನಡೆಸುತ್ತಿದ್ದು, ಕೇರಳದ ಜನರ ಜೊತೆ ಮಂಗಳೂರಿಗರು ಕೈಜೋಡಿಸುವುದಾಗಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಕುರಿತು ರಾಷ್ಟ್ರಪತಿಗಳು ಹಾಗು ಪ್ರಧಾನಮಂತ್ರಿ ಮಧ್ಯಪ್ರವೇಶಿಸಿ ಜನರ ನಂಬಿಕೆಯನ್ನು ಉಳಿಸಬೇಕಾಗಿ ಮನವಿ ಮಾಡಿದರು.
ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ : ಪೃಥ್ವಿರಾಜ್…
ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…
ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…
ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…
ಸಕ್ಕರೆ ರಫ್ತಿಗೆ ಸೆ.30 ರವರೆಗೆ ಸಂಪೂರ್ಣ ನಿಷೇಧ ಹೇರಿದ ಸರ್ಕಾರ ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯನ್ನು ನಿಯಂತ್ರಿಸಲು ಮತ್ತು…
ಹಿಜಬ್ ಬಗ್ಗೆ ಮಾತಾಡುವ ಬಿಜೆಪಿಯವರು ನೀಟ್ ಬಗ್ಗೆ ಮಾತಾಡಲಿ : ಮಧು ಬಂಗಾರಪ್ಪ ಆಕ್ರೋಶ ಬೆಂಗಳೂರು: ಹಿಜಬ್ ಬಗ್ಗೆ ಮಾತಾಡುವ…