ಬೆಂಗಳೂರು: ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ಮಂದಿ ನಕ್ಸಲರಿಗೆ ಜ.30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಎನ್‌ಐಎ ಕೋರ್ಟ್ ಆದೇಶ ಹೊರಡಿಸಿದೆ.
ಶರಣಾದ 6 ನಕ್ಸಲರನ್ನು ಪೊಲೀಸರು ಕೋರ್ಟ್ಗೆ ಹಾಜರುಪಡಿಸಿದ್ದರು. ಸಿಟಿ ಸಿವಿಲ್ ಕೋರ್ಟ್ ಸಂಕೀರ್ಣದ NIA ಕೋರ್ಟ್ಗೆ ಹಾಜರು ಪಡಿಸಲಾಗಿತ್ತು. ನಕ್ಸಲರನ್ನು ಕೋರ್ಟ್ಗೆ ಹಾಜರು ಪಡಿಸಿರುವ ಹಿನ್ನೆಲೆಯಲ್ಲಿ ಖುದ್ದು ಡಿಸಿಪಿ ಹೆಚ್.ಟಿ. ಶೇಖರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ವಹಿಸಲಾಗಿತ್ತು. ನಕ್ಸಲರನ್ನು ಕೋರ್ಟ್ಗೆ ಹಾಜರುಪಡಿಸುವ ಮುನ್ನ 6 ನಕ್ಸಲರಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಡೆಸಲಾಗಿತ್ತು. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಖಚಿತಪಡಿಸಿಕೊಳ್ಳಲಾಗಿತ್ತು.
ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎದುರು ಶರಣಾದ ನಕ್ಸಲರಲ್ಲಿ ನಾಲ್ವರು ಮಹಿಳೆಯರು, ಇಬ್ಬರು ಪುರುಷರಿದ್ದಾರೆ. ಅವರಲ್ಲಿ ತಮಿಳುನಾಡು ಮೂಲದ ವಸಂತ್ ಎಂಬಾತ ಬಿಟೆಕ್ ಪದವೀಧರನಾಗಿದ್ದಾನೆ. ಶರಣಾದವರಲ್ಲಿ ಶೃಂಗೇರಿಯ ಮುಂಡಗಾರು ಲತಾ, ರಾಯಚೂರಿನ ಮಾರೆಪ್ಪ ಅರೋಲಿ, ದಕ್ಷಿಣ ಕನ್ನಡದ ಸುಂದರಿ ಕೊತ್ಲೂರು, ಚಿಕ್ಕಮಗಳೂರಿನ ವನಜಾಕ್ಷಿ ಬಾಳೆಹೊಳೆ, ಕೇರಳ ಮೂಲದ ಜಿಶಾ ಸೇರಿದ್ದಾರೆ.
ಎನ್‌ಸಿಇಆರ್‌ಟಿ ಬಿಡುಗಡೆ ಮಾಡಿದ ಕನ್ನಡ ಪಠ್ಯಪುಸ್ತಕಕ್ಕೆ ಮಧು ಬಂಗಾರಪ್ಪ ವಿರೋಧ ಬೆಂಗಳೂರು: 6ನೇ ತರಗತಿಗಾಗಿ ಎನ್‌ಸಿಇಆರ್‌ಟಿ (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ…
ಉಡುಪಿ: ಎಸ್.ಟಿ ಮೋರ್ಚಾದ ನೂತನ ಪದಾಧಿಕಾರಿಗಳಿಗೆ ನಿಯುಕ್ತಿ ಪತ್ರ ವಿತರಣೆ ಉಡುಪಿ: ಭಾರತೀಯ ಜನತಾ ಪಾರ್ಟಿಯ ಎಸ್.ಟಿ ಮೋರ್ಚಾ ಜಿಲ್ಲಾ…
ದೇಶದ ಶೈಕ್ಷಣಿಕ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪಠ್ಯ ಪರಿಷ್ಕರಣೆ.. ಮೊದಲ ಬಾರಿಗೆ NCERT 9ನೇ ಕ್ಲಾಸ್‌ನಲ್ಲಿ ತುರ್ತು ಪರಿಸ್ಥಿತಿ ಪಠ್ಯ…
ಮಂಗಳೂರು: ಜೂ.29ರಿಂದ ಜು.6ರವರೆಗೆ ದೇಶದಾದ್ಯಂತ ವಿಶೇಷ ಸಹಕಾರ ಸಪ್ತಾಹ ಆಚರಣೆ ಮಂಗಳೂರು: ಸುಮಾರು 122 ವರ್ಷಗಳ ಇತಿಹಾಸವಿರುವ ರಾಷ್ಟ್ರದ ಸಹಕಾರ…
ಉಡುಪಿ: ಬಡಗುಬೆಟ್ಟು ಸೊಸೈಟಿಯಿಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ; 15 ಲಕ್ಷ ಮೌಲ್ಯದ ಪರಿಕರ ವಿತರಣೆ ಉಡುಪಿ: ಸಹಕಾರ…
ಇಂದು ಮಂಗಳೂರಿಗೆ ಶಾರುಕ್ ಖಾನ್ ಆಗಮನ : ಸಾರ್ವಜನಿಕರಿಗೆ ಪೋಲಿಸರ ಮಾರ್ಗಸೂಚಿ ಪ್ರಕಟ ಮಂಗಳೂರು: ನಗರದಲ್ಲಿ ಗುರುವಾರ ಆಯೋಜಿಸಲಾಗಿರುವ ಬಹುನಿರೀಕ್ಷಿತ…