Featured

ಶಾಸಕ ಗೂಳಿಹಟ್ಟಿ ಶೇಖರ್ ತಾಯಿ ಸೇರಿ 8 ಜನರು ಕ್ರೈಸ್ತ ಧರ್ಮದಿಂದ ಸ್ವಧರ್ಮಕ್ಕೆ ವಾಪಸ್.. Vishwanews24

ಶಾಸಕ ಗೂಳಿಹಟ್ಟಿ ಶೇಖರ್ ತಾಯಿ ಸೇರಿ 8 ಜನರು ಕ್ರೈಸ್ತ ಧರ್ಮದಿಂದ ಸ್ವಧರ್ಮಕ್ಕೆ ವಾಪಸ್..

ನನ್ನ ತಾಯಿಯಿಂದಲೇ ಮರಳಿ ಹಿಂದೂ ಧರ್ಮಕ್ಕೆ ಸೇರುವ ಅಭಿಯಾನ ಆರಂಭ: ಶಾಸಕ ಗೂಳಿಹಟ್ಟಿ ಶೇಖರ್ – Vishwanews24

ಹೊಸದುರ್ಗ,: ಮತಾಂತರವಾಗಿದ್ದ ಹಿಂದೂ ಧರ್ಮದ ಎಂಟು ಜನರನ್ನು ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಮನವೊಲಿಸಿ ತಾಲೂಕಿನ ಪುಣ್ಯಕ್ಷೇತ್ರ ಶ್ರೀ  ಹಾಲುರಾಮೇಶ್ವರ ದೇವಸ್ಥಾನದಲ್ಲಿ ಭಾನುವಾರ ಸ್ವಧರ್ಮಕ್ಕೆ ವಾಪಸ್‌ ಕರೆತಂದಿದ್ದಾರೆ.

ಕೆಲ ದಿನಗಳ ಹಿಂದೆ ನಡೆದ ವಿಧಾನ ಸಭಾ ಅಧಿವೇಶನದಲ್ಲಿ ಮತಾಂತರದ ಬಗ್ಗೆ ಪ್ರಸ್ತಾಪ ಮಾಡಿದ್ದ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ಸ್ವತಃ ತನ್ನ ತಾಯಿಯೇ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿರುವ ಬಗ್ಗೆ ನೋವು ತೋಡಿಕೊಂಡಿದ್ದರು. ಶಾಸಕನಾಗಿರುವ ನನ್ನ ತಾಯಿಯೇ ಮತಾಂತರ ಆದರೆ ಇನ್ನು ಸಾಮಾನ್ಯ ಜನರನ್ನು ಹೇಗೆ ಮೈಂಡ್ ವಾಷ್ ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿ ಮತಾಂತರ ಮಾಡುವ ಕ್ರೈಸ್ತ ಮಿಷನರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದರು.

ಮದುವೆಯ ನೆಪದಲ್ಲಿ ಯುವ ಹಿಂದೂ ಯುವಕ ಮತ್ತು ಯುವತಿಯರನ್ನು ಮತಾಂತರ ಮಾಡುವುದು ತಪ್ಪು : ಮೋಹನ್ ಭಾಗವತ್ – Vishwanews24

ಈ ಸಮಯದಲ್ಲಿಯೇ ಕೇರಳದಲ್ಲಿ ಮತಾಂತರಗೊಂಡಿದ್ದ ತಾಲೂಕಿನ ಬಲ್ಲಾಳ ಸಮುದ್ರದ ಎಂಟು ಮಂದಿಯನ್ನು ಶಾಸಕರು, ಮನವೊಲಿಸಿ ಹಿಂದೂ ಧರ್ಮಕ್ಕೆ ತರುವ ಮೂಲಕ ಮತಾಂತರ ಕಾರ‍್ಯಕ್ಕೆ ಮನವೊಲಿಸುವ ಮಾರ್ಗದ ಮೂಲಕ ಸ್ವಧರ್ಮಕ್ಕೆ ತರುತ್ತಿದ್ದಾರೆ. ತಾಲೂಕಿನವರಾದ ನಾರಾಯಣಪ್ಪ, ಮಂಜಮ್ಮ, ಪ್ರದೀಪ, ಗೀತಾ, ಗೌರಮ್ಮ, ಅಣ್ಣಪ್ಪ, ಕುಸುಮಮ್ಮ ಮತ್ತು ಕುಮಾರ ಎಂಟು ಜನ ಕೇರಳದಲ್ಲಿ ಕಳೆದ ನಾಲ್ಕು ವರ್ಷದ ಹಿಂದೆ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು.

ಸದನದಲ್ಲಿ ಶಾಸಕ ಗೂಳಿಹಟ್ಟಿ ಶೇಖರ್‌ ಮತಾಂತರದ ಬಗ್ಗೆ ಚರ್ಚೆಯಾದ ನಂತರ ನಾರಾಯಣಪ್ಪ ಸೇರಿ ಎಂಟು ಮಂದಿ ಹಾಲು ರಾಮೇಶ್ವರ ಕ್ಷೇತ್ರದಲ್ಲಿ ಹಿಂದೂ ಧರ್ಮ ಪಾಲಿಸುವ ಮೂಲಕ ದೇವರು ಪೂಜಿಸಿ ಜೀವನ ಸಾಗಿಸುವುದಾಗಿ ತಿಳಿಸಿದರು. ಹಾಲು ರಾಮೇಶ್ವರ ಶ್ರೀ ಕ್ಷೇತ್ರದಲ್ಲಿ ಹಿಂದೂ ಧರ್ಮಕ್ಕೆ ವಾಪಸಾದ ಎಂಟು ಜನರನ್ನು ಸ್ವಾಗತಿಸಿ, ಹೆಣ್ಣು ಮಕ್ಕಳಿಗೆ ಸೀರೆ ಕುಪ್ಪಸ ನೀಡಿ ಹಿರಿಯ ತಾಯಂದಿರಿಂದ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಆಶೀರ್ವಾದ ಪಡೆದರು.

ಕ್ರೈಸ್ತ ಧರ್ಮದ ಮೇಲೆ ನನಗೆ ಅಪಾರ ಗೌರವವಿದೆ. ಮತಾಂತರ ಮಾಡುವ ಕ್ರೈಸ್ತ ಮಿಷನರಿಗಳ ಮತಾಂತರ ಮಾಡುವ ಬಗ್ಗೆ ಈಗಲೂ ನನ್ನ ವಿರೋಧವಿದೆ. ಹಿಂದೂ ಧರ್ಮದ ಮುಗ್ಧ ಹಳ್ಳಿ ಜನರನ್ನು ಮತಾಂತರಗೊಳಿಸುವ ಪ್ರಕ್ರಿಯೆಗೆ ನನ್ನ ವಿರೋಧವಿದೆ ಅದು ನಿಲ್ಲಬೇಕು ಎಂದು ಗೂಳಿಹಟ್ಟಿ ಡಿ.ಶೇಖರ್‌ ಹೇಳಿದ್ದಾರೆ.

ಅಕ್ಟೋಬರ್ 21ರಿಂದ ಬಿಸಿಯೂಟ ಪುನರಾರಂಭ : ಬಿ.ಸಿ.ನಾಗೇಶ್ – Vishwanews24

Vishwa News 24

Recent Posts

ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನ ನಮ್ಮ ಸರಕಾರ ಪ್ರಾಮಾಣಿಕವಾಗಿ ಮಾಡುತ್ತಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ – vishwanews24

ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಗಳೂರು: ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರಕಾರ ಪ್ರಾಮಾಣಿಕವಾಗಿ…

15 hours ago

ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು – vishwanews24

ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು ಮೈಸೂರು: ಒಣಗಿದ ದಾಸವಾಳ ಹೂನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದ…

16 hours ago

ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ – vishwanews24

ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉಡುಪಿ : ಜಿಲ್ಲಾಡಳಿತ, ಜಿಪಂ, ಕೌಶಲ್ಯಾಭಿವೃದ್ಧಿ, ಉದ್ಯಮ…

16 hours ago

ಅಡುಗೆ ಅನಿಲದ ಅಭಾವ – ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ – vishwanews24

ಅಡುಗೆ ಅನಿಲದ ಅಭಾವ - ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಬೆಂಗಳೂರು : ಗಲ್ಫ್…

16 hours ago

ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ – ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ : ಪೊಲೀಸ್ ಆಯುಕ್ತ – vishwanews24

ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ - ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ…

16 hours ago

ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ – vishwanews24

ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಕಾಪು: ಉಳಿಯಾರಗೋಳಿ ಗ್ರಾಮದ ನೀಲಾಧರ ಬಂಗೇರ (58) ಇಲಿ ಪಾಷಾಣ…

17 hours ago