ಹೊಸದುರ್ಗ,: ಮತಾಂತರವಾಗಿದ್ದ ಹಿಂದೂ ಧರ್ಮದ ಎಂಟು ಜನರನ್ನು ಶಾಸಕ ಗೂಳಿಹಟ್ಟಿ ಡಿ.ಶೇಖರ್ ಮನವೊಲಿಸಿ ತಾಲೂಕಿನ ಪುಣ್ಯಕ್ಷೇತ್ರ ಶ್ರೀ ಹಾಲುರಾಮೇಶ್ವರ ದೇವಸ್ಥಾನದಲ್ಲಿ ಭಾನುವಾರ ಸ್ವಧರ್ಮಕ್ಕೆ ವಾಪಸ್ ಕರೆತಂದಿದ್ದಾರೆ.
ಕೆಲ ದಿನಗಳ ಹಿಂದೆ ನಡೆದ ವಿಧಾನ ಸಭಾ ಅಧಿವೇಶನದಲ್ಲಿ ಮತಾಂತರದ ಬಗ್ಗೆ ಪ್ರಸ್ತಾಪ ಮಾಡಿದ್ದ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ಸ್ವತಃ ತನ್ನ ತಾಯಿಯೇ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿರುವ ಬಗ್ಗೆ ನೋವು ತೋಡಿಕೊಂಡಿದ್ದರು. ಶಾಸಕನಾಗಿರುವ ನನ್ನ ತಾಯಿಯೇ ಮತಾಂತರ ಆದರೆ ಇನ್ನು ಸಾಮಾನ್ಯ ಜನರನ್ನು ಹೇಗೆ ಮೈಂಡ್ ವಾಷ್ ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿ ಮತಾಂತರ ಮಾಡುವ ಕ್ರೈಸ್ತ ಮಿಷನರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದರು.
ಮದುವೆಯ ನೆಪದಲ್ಲಿ ಯುವ ಹಿಂದೂ ಯುವಕ ಮತ್ತು ಯುವತಿಯರನ್ನು ಮತಾಂತರ ಮಾಡುವುದು ತಪ್ಪು : ಮೋಹನ್ ಭಾಗವತ್ – Vishwanews24
ಈ ಸಮಯದಲ್ಲಿಯೇ ಕೇರಳದಲ್ಲಿ ಮತಾಂತರಗೊಂಡಿದ್ದ ತಾಲೂಕಿನ ಬಲ್ಲಾಳ ಸಮುದ್ರದ ಎಂಟು ಮಂದಿಯನ್ನು ಶಾಸಕರು, ಮನವೊಲಿಸಿ ಹಿಂದೂ ಧರ್ಮಕ್ಕೆ ತರುವ ಮೂಲಕ ಮತಾಂತರ ಕಾರ‍್ಯಕ್ಕೆ ಮನವೊಲಿಸುವ ಮಾರ್ಗದ ಮೂಲಕ ಸ್ವಧರ್ಮಕ್ಕೆ ತರುತ್ತಿದ್ದಾರೆ. ತಾಲೂಕಿನವರಾದ ನಾರಾಯಣಪ್ಪ, ಮಂಜಮ್ಮ, ಪ್ರದೀಪ, ಗೀತಾ, ಗೌರಮ್ಮ, ಅಣ್ಣಪ್ಪ, ಕುಸುಮಮ್ಮ ಮತ್ತು ಕುಮಾರ ಎಂಟು ಜನ ಕೇರಳದಲ್ಲಿ ಕಳೆದ ನಾಲ್ಕು ವರ್ಷದ ಹಿಂದೆ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು.
ಸದನದಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಮತಾಂತರದ ಬಗ್ಗೆ ಚರ್ಚೆಯಾದ ನಂತರ ನಾರಾಯಣಪ್ಪ ಸೇರಿ ಎಂಟು ಮಂದಿ ಹಾಲು ರಾಮೇಶ್ವರ ಕ್ಷೇತ್ರದಲ್ಲಿ ಹಿಂದೂ ಧರ್ಮ ಪಾಲಿಸುವ ಮೂಲಕ ದೇವರು ಪೂಜಿಸಿ ಜೀವನ ಸಾಗಿಸುವುದಾಗಿ ತಿಳಿಸಿದರು. ಹಾಲು ರಾಮೇಶ್ವರ ಶ್ರೀ ಕ್ಷೇತ್ರದಲ್ಲಿ ಹಿಂದೂ ಧರ್ಮಕ್ಕೆ ವಾಪಸಾದ ಎಂಟು ಜನರನ್ನು ಸ್ವಾಗತಿಸಿ, ಹೆಣ್ಣು ಮಕ್ಕಳಿಗೆ ಸೀರೆ ಕುಪ್ಪಸ ನೀಡಿ ಹಿರಿಯ ತಾಯಂದಿರಿಂದ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಆಶೀರ್ವಾದ ಪಡೆದರು.
ಕ್ರೈಸ್ತ ಧರ್ಮದ ಮೇಲೆ ನನಗೆ ಅಪಾರ ಗೌರವವಿದೆ. ಮತಾಂತರ ಮಾಡುವ ಕ್ರೈಸ್ತ ಮಿಷನರಿಗಳ ಮತಾಂತರ ಮಾಡುವ ಬಗ್ಗೆ ಈಗಲೂ ನನ್ನ ವಿರೋಧವಿದೆ. ಹಿಂದೂ ಧರ್ಮದ ಮುಗ್ಧ ಹಳ್ಳಿ ಜನರನ್ನು ಮತಾಂತರಗೊಳಿಸುವ ಪ್ರಕ್ರಿಯೆಗೆ ನನ್ನ ವಿರೋಧವಿದೆ ಅದು ನಿಲ್ಲಬೇಕು ಎಂದು ಗೂಳಿಹಟ್ಟಿ ಡಿ.ಶೇಖರ್ ಹೇಳಿದ್ದಾರೆ.
ಅಕ್ಟೋಬರ್ 21ರಿಂದ ಬಿಸಿಯೂಟ ಪುನರಾರಂಭ : ಬಿ.ಸಿ.ನಾಗೇಶ್ – Vishwanews24
ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…
ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…
ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…
ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…
ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…
ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…