ಹಾಸನ : ರಾಜಧಾನಿ ಬೆಂಗಳೂರು ಹಾಗೂ ಬಂದರು ನಗರಿ ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75 ಶಿರಾಢಿಘಾಟ್‌ನಲ್ಲಿ ಇಂದು ಮತ್ತೆ ಭೂಕುಸಿತ ಉಂಟಾಗಿದೆ.
ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಸಮೀಪ ವಾರದ ಹಿಂದೆ ಅಲ್ಪ ಪ್ರಮಾಣದಲ್ಲಿ ರಸ್ತೆ ಕುಸಿದಿತ್ತು, ಅದರೆ ಇಂದು ಮಧ್ಯಾಹ್ನದ ವೇಳೆಗೆ ಮತ್ತೆ ಭೂಕುಸಿತ ಉಂಟಾಗಿದೆ, ಈ ಹಿನ್ನೆಲೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧಿಸಲಾಗಿದೆ.
ವಾರದ ಹಿಂದೆ ರಸ್ತೆ ಕುಸಿದ ಸ್ಥಳಕ್ಕೆ ಲೋಕೋಪಯೋಗಿ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು, ಸಚಿವರು ಭೇಟಿ ನೀಡಿದ ನಾಲ್ಕನೇ ದಿನಕ್ಕೆ ಮತ್ತೆ ಭೂಕುಸಿತ ಸಂಭವಿಸಿದೆ. ಕಳೆದ ವರ್ಷ ಕೂಡ ಇದೇ ಸ್ಥಳದಲ್ಲಿ ರಸ್ತೆ ಕುಸಿದಿತ್ತು, ಲಘು ವಾಹನಗಳಿಗೆ ಏಕ ಮುಖ ಸಂಚಾರದಂತೆ ಚಲಿಸಲು ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮತ್ತೆ ಕುಸಿಯುತ್ತಿರುವ ರಸ್ತೆಯಿಂದ ಆತಂಕ ಹೆಚ್ಚಾಗಿದೆ.
ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ನಾಳೆ ಶಿಕ್ಷೆ ಪ್ರಕಟ ಬೆಂಗಳೂರು: ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ…
ಕಾಂಗ್ರೆಸ್‌ನಲ್ಲಿ ಸಂಪುಟ ಸಚಿವ ಸ್ಥಾನಕ್ಕಾಗಿ ಕಸರತ್ತು: 12 ಶಾಸಕರಿಂದ ದೆಹಲಿಯಲ್ಲಿ ಸುರ್ಜೇವಾಲ ಭೇಟಿ ನವದೆಹಲಿ: ಸಚಿವ ಸಂಪುಟ ಪುನಾರಚನೆ ಮಾಡುವಂತೆ…
ಐಎಎಸ್ ಅಧಿಕಾರಿ ಎಂದು ನಂಬಿಸಿ ಕೋಟ್ಯಾಂತರ ರೂ. ವಂಚನೆ : ಆರೋಪಿ ಬಂಧನ ಬೆಂಗಳೂರು :ತಾನು 2023ನೇ ಬ್ಯಾಚ್‌ನ ಐಎಎಸ್…
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಸೇರಿ 3 ಮಸೂದೆಗಳ ಮಂಡನೆ ನವದೆಹಲಿ : ಲೋಕಸಭೆಯಲ್ಲಿ ಗದ್ದಲದ ನಡುವೆಯೇ ಮಹಿಳಾ ಮೀಸಲಾತಿ ಹಾಗೂ…
ಮೇ 1 ರಿಂದ ಶಿವಮೊಗ್ಗ - ಬೆಂಗಳೂರು ವಿಮಾನ ಹಾರಾಟ ಮುಂದುವರೆಸುವಂತೆ ರಾಜ್ಯ ಸರ್ಕಾರಕ್ಕೆ ಸಂಸದ ರಾಘವೇಂದ್ರ ಒತ್ತಾಯ ಶಿವಮೊಗ್ಗ:…
ಬೆಳ್ತಂಗಡಿ: ನಾಯಿ ಅಡ್ಡ ಬಂದು ಆಟೋ ಪಲ್ಟಿ ; ಚಾಲಕ ಸಾವು ಬೆಳ್ತಂಗಡಿ: ನಾಯಿ ಅಡ್ಡ ಬಂದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ…