ಶಿರ್ವ: ಕಾಪು ತಾಲೂಕಿನ ಶಿರ್ವ ಗ್ರಾಮದ ಕಲ್ಲೊಟ್ಟು ಸೇತುವೆ ಕೆಳಭಾಗದ ಪಾಪನಾಶಿನಿ ಹೊಳೆಯಲ್ಲಿ ಹಸುವಿನ ಅವಶೇಷಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ತನಿಖೆ ಆರಂಭಿಸಲಾಗಿದೆ.
ಜೂನ್ 1ರಂದು ಬೆಳಿಗ್ಗೆ ಸುಮಾರು 9 ಗಂಟೆಗೆ ಕಲ್ಲೊಟ್ಟು ಸೇತುವೆಯ ಕೆಳಭಾಗದಲ್ಲಿರುವ ಪಾಪನಾಶಿನಿ ಹೊಳೆಯ ನೀರಿನಲ್ಲಿ ಜಾನುವಾರಿನ ತಲೆಬುರುಡೆ ಹಾಗೂ ಕಾಲಿನ ಗೆರಸುಗಳು ಕಂಡುಬಂದಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಮಾಹಿತಿ ಮೇರೆಗೆ ಶಿರ್ವ ಪೊಲೀಸ್ ಠಾಣೆಯ ಎಎಸ್‌ಐ ಸುರೇಶ್ ಕುಮಾರ್ ಹಾಗೂ ಪಿಸಿ ಅರುಣ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಹೊಳೆಯ ನೀರಿನಲ್ಲಿ ಜಾನುವಾರಿನ ಅವಶೇಷಗಳು ಇರುವುದನ್ನು ದೃಢಪಡಿಸಿಕೊಂಡರು.
ಬಳಿಕ ಕಾಪು ಪಶು ಆಸ್ಪತ್ರೆಯ ಉಪ ನಿರ್ದೇಶಕರು, ಉಡುಪಿ ಜಿಲ್ಲಾ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿಗಳು ಹಾಗೂ ಪಂಚ ಸಾಕ್ಷಿದಾರರನ್ನು ಸ್ಥಳಕ್ಕೆ ಕರೆಸಿ ಮಹಜರು ನಡೆಸಲಾಯಿತು. ಪಶು ಸಹಾಯಕ ನಿರ್ದೇಶಕರು ಪರಿಶೀಲಿಸಿದ ವೇಳೆ ಹೊಳೆಯ ದಕ್ಷಿಣ ಭಾಗದ ನೀರಿನಲ್ಲಿ ಜಾನುವಾರಿನ ತಲೆಯ ಮೇಲ್ದವಡೆಯ ಸಂಪೂರ್ಣ ಭಾಗ, ಹಲ್ಲುಗಳು ಹಾಗೂ ಮೂಗಿನ ಭಾಗ ಕಂಡುಬಂದಿದ್ದು, ಅದು ಹಸುವಿನದ್ದಾಗಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಇದಲ್ಲದೆ, ಸ್ವಲ್ಪ ದೂರದಲ್ಲಿ ಜಾನುವಾರಿನ ಕಾಲಿನ ಎರಡು ಗೆರಸುಗಳು, ಮಾಂಸದ ತುಣುಕುಗಳು ಹಾಗೂ ಹೊಟ್ಟೆಯ ಒಳಭಾಗದ ಅವಶೇಷಗಳು ಪತ್ತೆಯಾಗಿದ್ದು, ಇವುಗಳೂ ಹಸುವಿನದ್ದಾಗಿರಬಹುದೆಂದು ತಿಳಿದುಬಂದಿದೆ.
ಪ್ರಾಥಮಿಕ ತನಿಖೆಯಲ್ಲಿ ಯಾರೋ ದುಷ್ಕರ್ಮಿಗಳು ಹಸುವನ್ನು ವಧೆ ಮಾಡಿ ಮಾಂಸ ಮಾಡಿಕೊಂಡು ಅದರ ಅವಶೇಷಗಳನ್ನು ಹೊಳೆಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ ಮರಬದ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮುಂದಿನ ತನಿಖೆ ನಡೆಸಲಾಗುತ್ತಿದೆ.
ಹಿಂದೂ ಜಾಗರಣ ವೇದಿಕೆ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸೇರಿದಂತೆ ಹಿಂದೂ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ, ಅಧಿಕಾರಿಗಳನ್ನು ಸಮಗ್ರ ತನಿಖೆ ನಡೆಸಿ ಕೃತ್ಯಕ್ಕೆ ಕಾರಣರಾದವರನ್ನು ಗುರುತಿಸುವಂತೆ ಒತ್ತಾಯಿಸಿದರು.
ಬೈಂದೂರು: ಶಿರೂರು ನದಿಯಲ್ಲಿ ಈಜಲು ತೆರಳಿದ್ದ ಹಾವೇರಿ ಮೂಲದ ವಿದ್ಯಾರ್ಥಿ ನೀರುಪಾಲು ಬೈಂದೂರು : ಕುಟುಂಬದವರೊಂದಿಗೆ ಪ್ರವಾಸಕ್ಕೆ ಬಂದಿದ್ದ ಹಾವೇರಿ…
ಉಡುಪಿ: ಡಿಕೆಶಿ ಸಂಪುಟದಲ್ಲಿ ಜಾರ್ಜ್ ಗೆ ಉಪ ಮುಖ್ಯಮಂತ್ರಿ, ಐವನ್ ಗೆ ಸಚಿವ ಸ್ಥಾನ ನೀಡಲು ಕಥೊಲಿಕ್ ಸಭಾ ಆಗ್ರಹ…
ಮಲೇಷ್ಯಾದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬಳಕೆ ನಿಷೇಧ.. ನಿಯಮ ಉಲ್ಲಂಘಸಿದ್ರೆ 23.95 ಕೋಟಿ ರೂ. ದಂಡ ಕೌಲಾಲಂಪುರ್: 16…
ಸುವೇಂಧು ಸಂಪುಟ ವಿಸ್ತರಣೆ: ಬಂಗಾಳದ ನೂತನ ಸಚಿವರಾಗಿ 35 ಶಾಸಕರಿಂದ ಪ್ರಮಾಣ ಸ್ವೀಕಾರ ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು…
ಬೆಂಗಳೂರು – ಮಂಗಳೂರು ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ರದ್ದು ಮಂಗಳೂರು : ಜೂನ್ 3ರಂದು ನಿಗದಿಯಾಗಿದ್ದ ಬಹು…
ಕಾಪು: ರಸ್ತೆ ಬದಿಯ ಮೈಲುಗಲ್ಲು ಹಾಗೂ ಸ್ಕೂಟರ್‌ಗೆ ಕಾರು ಢಿಕ್ಕಿ: ಚಾಲಕನಿಗೆ ಗಾಯ ಕಾಪು : ಕಾರೊಂದು ರಸ್ತೆ ಬದಿಯ…