Featured

ಶಿರ್ವ: ಮಡಿಕೆಯಲ್ಲಿರುವ ದೇವರ ತೀರ್ಥಕ್ಕಾಗಿ ಬರುತ್ತಿದೆ ನಾಗರ – ಬಬ್ಬುಸ್ವಾಮಿಯ ನಾಗಬನದಲ್ಲಿ ಅಚ್ಚರಿಯ ಘಟನೆ

ಶಿರ್ವ: ನಾಗನಿಗೆಂದೇ ಮಣ್ಣಿನ ಮಡಿಕೆಯಲ್ಲಿ ಇರಿಸಲಾಗುವ ಶುದ್ಧ ತೀರ್ಥ ನೀರನ್ನು ನಾಗರ ಹಾವು ದಿನಂಪ್ರತಿ ಕುಡಿದು ಹೋಗುವ ಅಚ್ಚರಿಯ ಘಟನೆ ಕಟಪಾಡಿಯ ಕೋಟೆ ಗ್ರಾಮದ ಕಿನ್ನಿಗುಡ್ಡೆ ಬಬ್ಬು ಸ್ವಾಮಿಯ ನಾಗಬನದ ಸನ್ನಿದಿಯಲ್ಲಿ ನಡೆಯುತ್ತಿದೆ.

ಅಚ್ಚರಿಯಾದರೂ ಸತ್ಯ. ಕಿನ್ನಿಗುಡ್ಡೆಯಲ್ಲಿರುವ ಬಬ್ಬು ಸ್ವಾಮಿಯ ನಾಗಬನದಲ್ಲಿ ಎರಡು ಜತೆ ಮಡಿಕೆಗಳಿದ್ದು, ಇದನ್ನು ಪುರಾತನ ಕಾಲದಲ್ಲಿ ಪ್ರತಿಷ್ಠಾಪಿಸಲಾದ ನಾಗದೇವರ ಮೂರ್ತಿಯ ಮುಂದೆ ಇರಿಸುವುದು ಹಿಂದಿನಿಂದಲೂ ಬಂದ ವಾಡಿಕೆ. ಈ ಮಡಿಕೆಯನ್ನು ಪ್ರತಿದಿನ ಶುದ್ದಿಗೊಳಿಸಿ ಹತ್ತಿರದಲ್ಲೇ ಇರುವ ವೆಂಕಟರಮಣ ದೇವಸ್ಥಾನದ ದೇವರ ತೀರ್ಥ ಮತ್ತು ತುಳಸಿದಳವನ್ನು ಹಾಕಿ ಇಡಲಾಗುತ್ತದೆ. ದಿನನಿತ್ಯದ ಪೂಜೆ ಮುಗಿದು ಹೆಚ್ಚಿನ ಜನರೆಲ್ಲಾ ಅಲ್ಲಿಂದ ತೆರಳುತ್ತಿದ್ದಂತೆ ಇಲ್ಲಿ ನಾಗರ ಹಾವು ಪ್ರತ್ಯಕ್ಷವಾಗುತ್ತದೆ.

ಭಾನುವಾರ ಅಲ್ಲೇ ಇರುವ ದೈವಸ್ಥಾನದ ಸುತ್ತ ಇಂಟರ್‌ಲಾಕ್ ಹಾಕುವ ಉದ್ದೇಶದಿಂದ ಮಣ್ಣು ಅಗೆಯುವ ವೇಳೆ ಪೂಜೆ ನಡೆಯುತ್ತಿದ್ದಂತೆ, ಇದೆಲ್ಲದಕ್ಕೂ ಪೂರಕ ಎಂಬಂತೆ ಅಲ್ಲಿ ನಾಗರ ಹಾವೊಂದು ಪ್ರತ್ಯಕ್ಷವಾಗಿ ಅಲ್ಲಿಂದ ಹಾದು ಹೋಗಿದೆ. ಇಲ್ಲಿ ದಿನಂಪ್ರತಿ ಪೂಜೆ ಸಲ್ಲಿಸುವವರ ಪ್ರಕಾರ ಪುರಾತನ ಕಾಲದಿಂದಲೂ ನಾಗರಹಾವು ಇಲ್ಲಿಗೆ ಬಂದು ನೀರು ಕುಡಿದು ಹೋಗುತ್ತದೆ ಎಂಬ ವಿಚಾರವನ್ನು ಹಿರಿಯರು ಹೇಳುತ್ತಿದ್ದರಂತೆ. ಆದರೆ ಇದೀಗ ನಾಗದೇವರ ಪ್ರತ್ಯಕ್ಷ ದರ್ಶನವಾಗುತ್ತಿರುವುದು ರೋಮಾಂಚಕಾರಿ ವಿಚಾರವಾಗಿದೆ ಅನ್ನುತ್ತಾರೆ.

Vishwa News 24

Recent Posts

ಉಡುಪಿ : ಯುವತಿ ನಾಪತ್ತೆ -vishwanews24

ಉಡುಪಿ : ಯುವತಿ ನಾಪತ್ತೆ ಉಡುಪಿ : ಉಡುಪಿ ಸವೀಸ್ ಬಸ್ ನಿಲ್ದಾಣದ ಬಳಿ ಇರುವ ಹೊಲಿಗೆ ತರಬೇತಿ ಕೇಂದ್ರದಲ್ಲಿ…

13 hours ago

ಪಡುಬಿದ್ರಿ : ವ್ಯಕ್ತಿ ನಾಪತ್ತೆ -vishwanews24

ಪಡುಬಿದ್ರಿ : ವ್ಯಕ್ತಿ ನಾಪತ್ತೆ ಉಡುಪಿ: ಎಲ್ಲೂರು ಗ್ರಾಮ ಅದಮಾರು ಅಂಚೆ ಅಂಬೇಡ್ಕರ್ ರೋಡ್ ಆಶಿರ್ವಾದ ಹೌಸ್ ನಿವಾಸಿ ಹರ್ಷಲ್…

13 hours ago

ತುಳು ಭಾಷೆಯ ಮಾನ್ಯತೆ ಕೇವಲ ಉಡುಪಿ-ದ.ಕ. ಜಿಲ್ಲೆಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ : ಪ್ರಮೋದ್ ಮಧ್ವರಾಜ್ -vishwanews24

ತುಳು ಭಾಷೆಯ ಮಾನ್ಯತೆ ಕೇವಲ ಉಡುಪಿ-ದ.ಕ. ಜಿಲ್ಲೆಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ : ಪ್ರಮೋದ್ ಮಧ್ವರಾಜ್ ಉಡುಪಿ: ತುಳು ಭಾಷೆಗೆ ಅಧಿಕೃತ…

14 hours ago

ಉಡುಪಿ ಜಿಲ್ಲಾಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಖಾದರ್ ಗೆ ಉಡುಪಿ ಶಾಸಕರ ಮನವಿ -vishwanews24

ಉಡುಪಿ ಜಿಲ್ಲಾಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಖಾದರ್ ಗೆ ಉಡುಪಿ ಶಾಸಕರ ಮನವಿ ಉಡುಪಿ: ನೂತನ ಜಿಲ್ಲಾಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಶೀಘ್ರ…

15 hours ago

ದುಬೈಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಕೊಲೆ : ಪತ್ನಿ  , ಪುತ್ರ ನಾಪತ್ತೆ ;  ಪ್ರಕರಣ ದಾಖಲು -vishwanews24

ದುಬೈಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಕೊಲೆ : ಪತ್ನಿ  , ಪುತ್ರ ನಾಪತ್ತೆ ;  ಪ್ರಕರಣ ದಾಖಲು…

18 hours ago

ಮಂಗಳೂರು : ಅಕ್ರಮವಾಗಿ ಜಾನುವಾರು ಸಾಗಾಟ: ಓರ್ವ ಬಂಧನ, ಮತ್ತೋರ್ವ ಪರಾರಿ -vishwanews24

ಮಂಗಳೂರು : ಅಕ್ರಮವಾಗಿ ಜಾನುವಾರು ಸಾಗಾಟ: ಓರ್ವ ಬಂಧನ, ಮತ್ತೋರ್ವ ಪರಾರಿ ಮಂಗಳೂರು: ಅಕ್ರಮವಾಗಿ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು…

18 hours ago