Featured

ಶಿರ್ವ : ಮಹಿಳೆಯ ಸಂಶಯಾಸ್ಪದ  ಸಾವಿನ ಪ್ರಕರಣ ದಾಖಲು ; ಮೃತದೇಹದ ಚಿನ್ನಾಭರಣ ನಾಪತ್ತೆ – vishwanews24

ಶಿರ್ವ : ಮಹಿಳೆಯ ಸಂಶಯಾಸ್ಪದ  ಸಾವಿನ ಪ್ರಕರಣ ದಾಖಲು ; ಮೃತದೇಹದ ಚಿನ್ನಾಭರಣ ನಾಪತ್ತೆ

ಶಿರ್ವ :  ಮಹಿಳೆಯೊಬ್ಬರ ಸಂಶಯಾಸ್ಪದ ಸಾವಿನ ಕುರಿತು ಪ್ರಕರಣ ದಾಖಲಾಗಿದೆ. ಮೃತಪಟ್ಟ ಮಹಿಳೆ ಮಗಳು ದೂರು ದಾಖಲಿಸಿದ್ದು, ತಾಯಿ ಸುಮತಿ (66) ಅವರು ಸಂಶಯಾಸ್ಪದವಾಗಿ ಮೃತಪಟ್ಟಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ‌

ಮೃತರಿಗೆ 5 ಜನ ಮಕ್ಕಳಿದ್ದು ಅವರ ಗಂಡ 03 ವರ್ಷದ ಹಿಂದೆ ಮರಣ ಹೊಂದಿದ ಬಳಿಕ ಒಬ್ಬರೇ ವಾಸಿಸುತ್ತಿದ್ದರು. ಮಕ್ಕಳು ಆಗಾಗ್ಗೆ ಬಂದು ಹೋಗುತಿದ್ದರು.

ಆ 26 ರಂದು ಮಗಳು ವಿಜಯ್ ಅವರು ಸುಮತಿ ರವರನ್ನು ಮನೆಗೆ ಬಂದು ಮಾತನಾಡಿಸಿಕೊಂಡು ಹೋಗಿದ್ದು ಪ್ರತಿ ನಿತ್ಯದಂತೆ ಆಗಸ್ಟ್ 27 ರಂದು ರಾತ್ರಿ 10:30 ಗಂಟೆಗೆ ತಾಯಿಗೆ ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸದೇ ಇದ್ದಾಗ ತನ್ನ ಇಬ್ಬರು ಮಕ್ಕಳಾದ ರೋಶನ್‌ ಮತ್ತು ಮೋಹಿತ್‌ ರನ್ನು ತಾಯಿ ಮನೆಗೆ ಕಳುಹಿಸಿಕೊಟ್ಟಿದ್ದು ಅವರಿಬ್ಬರು ಅಲ್ಲಿಗೆ ಹೋಗಿ ನೋಡಿ ಸುಮತಿ ರವರು ಮಲಗಿದ್ದಾಗಿ, ಕರೆದರೂ ಏಳುತ್ತಿಲ್ಲ ಎಂದು ತಿಳಿಸಿದ್ದಾರೆ. ಕೂಡಲೇ ತನ್ನ ಗಂಡನೊಂದಿಗೆ ಅಲ್ಲಿಗೆ ಹೋಗಿ ನೋಡಲಾಗಿ ತಾಯಿ ಮಾಡನಾಡದೇ ಇದ್ದು 108 ನೇ ವಾಹನಕ್ಕೆ ಕರೆ ಮಾಡಿ ಆ ವಾಹನದಲ್ಲಿ ನೆರೆ-ಕರೆಯವರ ಸಹಾಯದೊಂದಿಗೆ ಕಾಪುವಿನ ಪ್ರಶಾಂತ ಆಸ್ಪತ್ರಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿನ ವೈದ್ಯರು ವಿಚಾರಿಸಿ ಕೆಎಮ್‌ ಸಿ ಆಸ್ಪತ್ರಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ಅದರಂತೆ ಮಣಿಪಾಲದ ಕೆಎಮ್‌ ಸಿ ಆಸ್ಪತ್ರಗೆ ದಿನಾಂಕ 28/08/2024 ರಂದು 12:30 ಗಂಟೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ಅಲ್ಲಿನ ವೈದ್ಯಾದಿಕಾರಿಯವರು ಮೃತ ಪಟ್ಟಿದ್ದಾಗಿ ತಿಳಿಸಿದ್ದಾರೆ.

ತಾಯಿ ಯವರ ಮುಖವು ಊದಿಕೊಂಡಿದ್ದು ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್‌, ಒಂದು ಜೊತೆ ಬಳೆ , ಉಂಗುರ ಸ್ವತುಗಳು ಇರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ‌.

ಮನೆಯ ಬೇರೆ ಎಲ್ಲಾ ಸ್ವತ್ತುಗಳು ಯಥಾ ಸ್ಥಿತಿಯಲ್ಲಿರುತ್ತವೆ. ಸುಮತಿ ರವರ ಮರಣದಲ್ಲಿ ಸಂಶಯವಿರುವುದಾಗಿ ನೀಡಿದ ದೂರಿನಂತೆ ಶಿರ್ವಾ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿರುತ್ತದೆ.

Vishwa News 24

Recent Posts

ಉಡುಪಿ : ನೇರ ಸಂದರ್ಶನ -vishwanews24

ಉಡುಪಿ : ನೇರ ಸಂದರ್ಶನ ಉಡುಪಿ : ನಗರದ ಮಣಿಪಾಲದ ಮನೋಹರ್ ಭವನ್ ಹೋಟೆಲ್ ಮುಂಭಾಗದ ಮಣಿಪಾಲ್ ಪೇಮೆಂಟ್ ಐಡೆಂಟಿಟಿ…

35 minutes ago

ಚಾ.ನಗರ: ಗ್ರೈಂಡರ್‌ನಿಂದ ವಿದ್ಯುತ್ ಶಾಕ್ : ನಾಲ್ಕು ವರ್ಷದ ಬಾಲಕಿ ದುರ್ಮರಣ -vishwanews24

ಚಾ.ನಗರ: ಗ್ರೈಂಡರ್‌ನಿಂದ ವಿದ್ಯುತ್ ಶಾಕ್ – ನಾಲ್ಕು ವರ್ಷದ ಬಾಲಕಿ ದುರ್ಮರಣ ಚಾಮರಾಜನಗರ: ಗ್ರೈಂಡರ್‌ನಿಂದ ವಿದ್ಯುತ್ ಶಾಕ್ ಹೊಡೆದು ನಾಲ್ಕು…

40 minutes ago

ಉಡುಪಿ : ಎಸ್‌ಐಆರ್ ಹೆಸರಿನಲ್ಲಿ ಅವರ ಮತದಾನದ ಹಕ್ಕನ್ನು ಕಸಿಯುವ ಕೆಲಸವಾಗುತ್ತಿದೆ :ವಿನಯ ಕುಮಾರ್ ಸೊರಕೆ ಆರೋಪ – vishwanews24

ಉಡುಪಿ : ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ: ಜೂ. 23ರಿಂದ ಜಿಲ್ಲೆಯ ಮನೆಮನೆಗೆ ತೆರಳಿ ಜನಜಾಗೃತಿ: ಕೆ.ಜಯಪ್ರಕಾಶ್ ಹೆಗ್ಡೆ ಉಡುಪಿ:…

55 minutes ago

ಆರ್‌ಎಸ್‌ಎಸ್​ ನವರು ಹಿಂದುಗಳೇ ಅಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ – vishwanews24

ಆರ್‌ಎಸ್‌ಎಸ್​ನವರು ಹಿಂದುಗಳೇ ಅಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ ಮೈಸೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಂತರ ಸಚಿವ ಯತೀಂದ್ರ…

19 hours ago

ಬೆಳ್ತಂಗಡಿ: ಎಸ್‌ಐಟಿ ಅಧಿಕಾರಿಗಳಿದ್ದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ – vishwanews24

ಬೆಳ್ತಂಗಡಿ: ಎಸ್‌ಐಟಿ ಅಧಿಕಾರಿಗಳಿದ್ದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ ಮಂಗಳೂರು: ಧರ್ಮಸ್ಥಳ  ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಎಸ್ಪಿ ಪ್ರಯಾಣಿಸುತ್ತಿದ್ದ…

19 hours ago

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮರುಅಭಿವೃದ್ಧಿಗೆ ಕೇಂದ್ರದ ಗ್ನೀನ್ ಸಿಗ್ನಲ್ : ಎರಡು ಹೊಸ ಪ್ಲಾಟ್‌ ಫಾರ್ಮ್ ನಿರ್ಮಾಣಕ್ಕೆ ಪ್ರಸ್ತಾವನೆ – vishwanews24

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮರುಅಭಿವೃದ್ಧಿಗೆ ಕೇಂದ್ರದ ಗ್ನೀನ್ ಸಿಗ್ನಲ್ : ಎರಡು ಹೊಸ ಪ್ಲಾಟ್‌ಫಾರ್ಮ್ ನಿರ್ಮಾಣಕ್ಕೆ ಪ್ರಸ್ತಾವನೆ ನವದೆಹಲಿ:…

19 hours ago