ಶಿರ್ವ: ಮುಂಬಯಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಕಳೆದ ಒಂದು ವರ್ಷದಿಂದ ತನ್ನ ಚಿಕ್ಕಮ್ಮನ ಮನೆ ಶಿರ್ವ ಮುಖ್ಯರಸ್ತೆ ಬಳಿಯ ಕುಡ್ತಮಜಲು ಎಂಬಲ್ಲಿ ವಾಸವಾಗಿದ್ದ ಶ್ರದ್ಧಾ (21) ಜೂ. 13 ರಂದು ಬೆಳಗ್ಗೆ 9 ಗಂಟೆಯಿಂದ ಮನೆಯಿಂದ ಹೋದವರು ವಾಪಾಸು ಬಾರದೆ ಕಾಣೆಯಾಗಿದ್ದಾರೆ.
ಈಕೆಯ ಚಿಕ್ಕಮ್ಮ ಕುಡ್ತಮಜಲು ನಿವಾಸಿ ಗೌರಿ ಜೂ. 13 ರಂದು ಬೆಳಗ್ಗೆ 9 ಗಂಟೆಗೆ ಕೆಲಸದ ನಿಮಿತ್ತ ಶಾಲೆಗೆ ಹೋಗಿದ್ದು, ಮಧ್ಯಾಹ್ನ 2 ಗಂಟೆಗೆ ಮನೆಗೆ ಬಂದಾಗ ಆಕೆ ಕಾಣೆಯಾಗಿದ್ದಳು.
ಮನೆಯಲ್ಲಿ ಆಕೆ ಹಿಂದಿಯಲ್ಲಿ ಬರೆದ ಪತ್ರ ದೊರೆತಿದ್ದು, ಅದರಲ್ಲಿ ತಾನು ಇಲ್ಲಿಗೆ ಬಂದು 1 ವರ್ಷವಾಗಿದ್ದು,ಇಷ್ಟು ಸಮಯ ನನ್ನನ್ನು ನೋಡಿದ್ದಕ್ಕೆ ಕೃತಜ್ಞತೆಗಳು. ಪೂನಾಕ್ಕೆ ಟೀಚರ್ ಕೆಲಸಕ್ಕೆ ಹೋಗುತ್ತಿದ್ದೇನೆ. ನಾನು ಕಾಣೆಯಾದ ಬಗ್ಗೆ ಪೊಲೀಸ್ ಕೇಸ್ ಮಾಡುವುದು ಬೇಡ, ನನ್ನ ಬಗ್ಗೆ ಚಿಂತೆ ಮಾಡಬೇಡಿ, ನಾನು ಯಾರಿಗೂ ಭಾರವಾಗಿರುವುದು ನನಗೆ ಇಷ್ಟವಿಲ್ಲ ಎಂದು ಬರೆದಿದ್ದಾಳೆ.
ಸಂಬಂಧಿಕರ ಸಹಿತ ಎಲ್ಲಾ ಕಡೆ ಹುಡುಕಾಡಿದ್ದು, ಈವರೆಗೆ ಪತ್ತೆಯಾಗಿರುವುದಿಲ್ಲ ಎಂದು ಆಕೆಯ ಚಿಕ್ಕಮ್ಮ ಗೌರಿ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ ಕಳೆದ 3 ತಿಂಗಳ ಸರಾಸರಿ ವಿದ್ಯುತ್ ಬಳಕೆಯ ಆಧಾರದ ಮೇಲೆ ಜುಲೈ…
ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ ಉಡುಪಿ: ಕಾರಿಗೆ ಫುಲ್…
ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ್ ಕಡತನಮಲೆ 6 ವರ್ಷ ಪಕ್ಷದಿಂದ ಉಚ್ಛಾಟನೆ ಬೆಂಗಳೂರು: ರಾಜ್ಯ ರೈತ…
ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: “ಮಾಗಡಿ…
ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ ಮಡಿಕೇರಿ : ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾದ 'ಇತ್ತಿಹಾದ್' ರೈಲು ಸೇವೆಯ…
ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕೊಂಡ ಅಶ್ವಿನಿಗೆ ಕೃತಕ ಕಾಲುಗಳ ಜೋಡಣೆಗೆ 23 ಲಕ್ಷ ನೆರವು …