ಶಿರ್ವ: ಅಪರಿಚಿತ ವ್ಯಕ್ತಿಗಳು ಮುಂಬಯಿಯ ಸಬ್ ಇನ್‌ಸ್ಪೆಕ್ಟರ್ ಹೆಸರಿನಲ್ಲಿ ಕರೆ ಮಾಡಿ 11 ಲಕ್ಷ ರೂ. ವಂಚಿಸಿದ ಘಟನೆ ಶಿರ್ವದಲ್ಲಿ ನಡೆದಿದೆ. ಶಿರ್ವ ನಿವಾಸಿ ವಿಲಿಯಮ್ ಪಾವ್ಲ್ ಕೊರೆಯ ವಂಚನೆಗೊಳಗಾದವರು.
ಜೂ. 28 ರಂದು ಅಪರಿಚಿತ ವ್ಯಕ್ತಿಯೋರ್ವ ವಿಲಿಯಮ್ ಪಾವ್ ಕೊರೆಯ ಅವರ ಮೊಬೈಲ್ ಗೆ ಕರೆ ಮಾಡಿ ಹಿಂದಿ ಭಾಷೆಯಲ್ಲಿ ನಿಮ್ಮ ಹೆಸರಿನ ಒಂದು ಸಿಮ್ ಸಮಸ್ಯೆ ಆಗಿದೆ. ಈ ನಂಬರ್ ನಲ್ಲಿ 20 ಕೇಸ್ ದಾಖಲಾಗಿದೆ.
ಮನಿ ಲಾಂಡ್ರಿಂಗ್ ಕೇಸ್ ನ ಜೆಸ್ಸಿ ಮೊಹಮ್ಮದ್ ಕೇಸ್ ನಲ್ಲಿ ನಿಮ್ಮ ಹೆಸರಿದೆ ಎಂದು ಹೇಳಿ 6 ಜನರ ಫೋಟೋ ಕಳಿಸಿ ಇವರ ಪರಿಚಯ ಇದೆಯೇ ಎಂದು ಕೇಳಿ ಹೆದರಿಸಿದ್ದಾರೆ. ಅಲ್ಲದೇ ಸಬ್ ಇನ್‌ಸ್ಪೆಕ್ಟರ್ ಮ್ಯಾಥ್ಯು ಕೊಲಬಾ ಪೊಲೀಸ್ ಸ್ಟೇಷನ್ ಎಂದು ಮಾತನಾಡಿ, ವಿಲಿಯಮ್ ಪಾವ್ ಕೊರೆಯ ಅವರಲ್ಲಿ ಕೂಡಲೇ ಹಣ ಹಾಕುವಂತೆ ತಿಳಿಸಿದಾಗ ಅವರು ಭಯದಿಂದ ಯೂನಿಯನ್ ಬ್ಯಾಂಕ್ ನ ಎರಡು ಖಾತೆಯಿಂದ ಜು. 29 ರಂದು ರೂ. 6 ಲಕ್ಷ ಹಾಗೂ ಜು. 30 ರಂದು ರೂ. 5 ಲಕ್ಷ ಹಣವನ್ನು ವರ್ಗಾಯಿಸಿ ವಂಚನೆಗೆ ಒಳಗಾಗಿದ್ದಾರೆ. ಮ್ಯಾಥ್ಯು ಮತ್ತು ಇತರೆ ಅಪರಿಚಿತ ವ್ಯಕ್ತಿಗಳು ಸಬ್ ಇನ್‌ಸ್ಪೆಕ್ಟರ್ ಮ್ಯಾಥ್ಯು ಕೊಲಬಾ ಪೊಲೀಸ್ ಸ್ಟೇಷನ್ ಎಂದು ನಂಬಿಸಿ, ವಂಚನೆ ಮಾಡಿರುವುದಾಗಿ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…
ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…
ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…
ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…
ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…
ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…