ರಾಜ್ಯದಲ್ಲಿ ಹಿಜಾಬ್-ಕೇಸರಿ ಶಾಲು ವಿವಾದ ತಾರಕಕ್ಕೇರುತ್ತಿದೆ. ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದರೂ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸಂಘರ್ಷ ಭುಗಿಲೇಳುತ್ತಿದೆ. ಪ್ರಾಣ ಹೋದ್ರೂ ಹಿಜಾಬ್ ತೆಗೆಯಲ್ಲ. ಪರೀಕ್ಷೆಗೆ ಕೂರಿಸದಿದ್ರೂ, ಪರವಾಗಿಲ್ಲ. ಶಿಕ್ಷಣದಷ್ಟೇ ಹಿಜಾಬ್ ಕೂಡ ನಮಗೆ ಮುಖ್ಯ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ನ್ಯಾಯಾಲಯ ಏನೇ ಹೇಳಿದ್ರೂ, ಸರ್ಕಾರ ಯಾವ ಆದೇಶ ಹೊರಡಿಸಿದ್ರೂ, ಹಿಜಾಬೇ ಬೇಕೇ ಬೇಕು ಅಂತ ಕೂಗು ಹಾಕ್ತಿದ್ದಾರೆ. ಸಮವಸ್ತ್ರ ಸಂಘರ್ಷ ಈಗ ಪ್ರತಿಷ್ಠೆಯ ಸಮರ ಆಗಿದ್ದು, ಆಟ, ಪಾಠ ಅನ್ನುತ್ತಿದ್ದ ಕೆಲ ವಿದ್ಯಾರ್ಥಿನಿಯರು ಹಠಕ್ಕೆ ಬಿದ್ದಿದ್ದಾರೆ.
ಹಿಜಾಬ್‌ಗಾಗಿ ನಮ್ಮ ಪ್ರಾಣ ಹೋದರೂ ಪರವಾಗಿಲ್ಲ. ನಾನು ಮಾತ್ರ ಹಿಜಾಬ್ ತೆಗೆಯಲ್ಲ.. ತೆಗೆಯಲ್ಲ ಎಂದು ಹಿಜಾಬ್ ಧರಿಸಿದ ವಿದ್ಯಾರ್ಥಿನಿ ಖಡಕ್ ಆಗಿ ಉತ್ತರಿಸಿದ್ದಾಳೆ. ನಾವು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯಲ್ಲ. LKGಯಿಂದ ನಾವು ಹಿಜಾಬ್ ಹಾಕಿಕೊಳ್ಳುತ್ತಿದ್ದೇವೆ. ನಾನು ಮುಂದಿನ ದಿನಗಳಲ್ಲೂ ಹಿಜಾಬ್ ಧರಿಸುತ್ತೇನೆ. ನಾನು ಹಿಜಾಬ್ ಹಾಕಿಕೊಂಡೇ ಕೆಲಸ ಮಾಡುತ್ತೇನೆ ಎಂದು ಹೇಳಿದ್ಳು. ಇನ್ನು ಶಿವಮೊಗ್ಗದ DVS ಕಾಲೇಜ್ನಲ್ಲಿ ಹಿಜಾಬ್ ಹಾಕಿಕೊಂಡು ವಿದ್ಯಾರ್ಥಿಗಳು ಎಂಟ್ರಿ ಕೊಟ್ಟಿದ್ದು ಹಿಜಾಬ್ಗೆ ಅವಕಾಶ ಕೊಟ್ರೆ ಕ್ಲಾಸ್ಗೆ ಹೋಗ್ತೀವಿ. ಇಲ್ಲದಿದ್ರೆ ತರಗತಿಗೆ ಹೋಗೋದಿಲ್ಲ ಅಂತಾ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ಕಾಲೇಜು ಸಿಬ್ಬಂದಿ ಜೊತೆ ಸ್ಟೂಡೆಂಟ್ಸ್ ವಾಗ್ವಾದ ನಡೆಸಿದ್ದಾರೆ. ಇನ್ನು ಮತ್ತೊಂದೆಡೆ ಡಿವಿಎಸ್ ಕಾಲೇಜಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಮನೆಗೆ ವಾಪಸ್ ಆಗಿದ್ದಾರೆ.
ಅರ್ಧಂಬರ್ಧ ಬಟ್ಟೆ ಹಾಕಿದ್ರೆ ಒಳಗೆ ಬನ್ನಿ ಅಂತೀರಾ. ಪೂರ್ತಿ ಬಟ್ಟೆ ಹಾಕಿದ್ರೆ ಹೊರಗೆ ಹೋಗಿ ಅಂತೀರಾ. ನಾವು ಎಷ್ಟು ತಾಳ್ಮೆ ವಹಿಸಬೇಕು ಹೇಳಿ ಎಂದು ಡಿವಿಎಸ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ಆಕ್ರೋಶ ಹೊರ ಹಾಕಿದ್ದಾರೆ. ಇಂದು ಹಿಜಾಬ್ ತೆಗೆಯಿರಿ ಎಂದು ಹೇಳುತ್ತೀರಿ. ನಾಳೆ ಕಾಲೇಜಿಗೆ ಬರಬೇಡಿ ಎಂದು ಹೇಳುತ್ತೀರಿ ಎಂದು ಗರಂ ಆಗಿದ್ದಾರೆ. ಪ್ರಾಣ ಆದ್ರೂ ಹೋಗ್ಲಿ, ಹಿಜಾಬ್ ತೆಗೆಯಲ್ಲ.. ತೆಗೆಯಲ್ಲ. ನಾವು ಸತ್ತರೆ ಹಿಜಾಬ್ನಲ್ಲೇ ಸಾಯುತ್ತೇವೆ. ಪ್ರಾಣ ಹೋದ್ರೂ ಕೂಡ ನಾವು ಹಿಜಾಬ್ ತೆಗೆಯಲ್ಲ. ನಾನು ನನ್ನ ಕೆಲಸ ಬೇಕಾದ್ರೂ ಬಿಡ್ತೀನಿ, ಹಿಜಾಬ್ ಬಿಡಲ್ಲ. ನನಗೆ ಶಿಕ್ಷಣ ಎಷ್ಟು ಮುಖ್ಯವೋ ಹಿಜಾಬ್ ಅಷ್ಟೇ ಮುಖ್ಯ. ಹಿಜಾಬ್ ಹಾಕೋದು ನನ್ನ ಹಕ್ಕು, ನನ್ನ ನಿರ್ಧಾರ ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯದಿರಲು ಪಟ್ಟು ಹಿಡಿದಿದ್ದಾರೆ.
ವಿಜಯಪುರದ ಸರ್ಕಾರಿ ಪಿಯು ಹಾಗೂ ಡಿಗ್ರಿ ಕಾಲೇಜಿನಲ್ಲಿ ಹಿಜಾಬ್ ವಿದ್ಯಾರ್ಥಿಗಳಿಗೆ ನೋ ಎಂಟ್ರಿ. ಅಧಿಕಾರಿಗಳು ವಿದ್ಯಾರ್ಥಿಗಳನ್ನ ತರಗತಿಯಿಂದ ಹೊರಹಾಕಿದ್ದಾರೆ. ಹಿಜಾಬ್ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿಗಳನ್ನು ಹೊರಕ್ಕೆ ಹಾಕಿದ್ದಾರೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ವಿ ವಾಂಟ್ ಜಸ್ಟೀಸ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ಲಾಸ್ನಿಂದ ಹೊರಗುಳಿದ ಮಕ್ಕಳ ಬೆಂಬಲಕ್ಕೆ ಪೋಷಕರು ನಿಂತಿದ್ದು ಸರ್ಕಾರಿ ಪಿಯು, ಡಿಗ್ರಿ ಕಾಲೇಜಿನ ಬಳಿ ವಿದ್ಯಾರ್ಥಿನಿಯರ ಜೊತೆ ಪೋಷಕರು ಕೂಡ ಪ್ರತಿಭಟನೆ ನಡೆಸುತ್ತಿದ್ದಾರೆ. ಹಿಜಾಬ್ ಸಹಿತ ಮಕ್ಕಳಿಗೆ ಪ್ರವೇಶ ನೀಡುವಂತೆ ಬಿಗಿಪಟ್ಟು ಹಿಡಿದಿದ್ದಾರೆ. ಪೊಲೀಸರು ಹಾಗೂ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…
ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್‌ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಉಡುಪಿ: ಕೇಂದ್ರ ಸರ್ಕಾರದ ವಿವಿಧ ವಿಭಾಗಗಳ ಅಡಿಯಲ್ಲಿ ನೀಡಲಾಗುವ…