ಶಿವಮೊಗ್ಗ: ʻಹಿಜಾಬ್ʼ ಕಾವು ರಾಜ್ಯದಲ್ಲಿ ಹೆಚ್ಚಾಗಿದೆ. ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ಹಿಜಾಬ್ ಧರಿಸಿ ಶಾಲೆಗೆ ಪರೀಕ್ಷೆ ಬರೆಯಲು ತೆರಳಿದ್ದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಲಾಗಿದೆ.
ಇಂದು ಇಂಗ್ಲೀಷ್ ಮತ್ತು ಸೈನ್ಸ್ ಪರೀಕ್ಷೆ ಇತ್ತು.ಹಿಜಾಬ್ ಧರಿಸಿದ್ದಕ್ಕೆ ಎಕ್ಸಾಂಗೆ ಅವಕಾಶ ಕೊಟ್ಟಿಲ್ಲ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ವಿದ್ಯಾರ್ಥಿನಿಯರು ಎಕ್ಸಾಂಗಿಂತ ಹಿಜಾಬ್ ಮುಖ್ಯ ಅಂತ ಹೇಳಿ ಪರೀಕ್ಷೆ ಬರೆಯದೇ ಮನೆಗೆ ಹೋಗಿದ್ದಾರೆ.
ನಾವು ಹಿಜಾಬ್ ಧರಿಸಿಯೇ ಶಾಲೆಗೆ ಹೋಗುತ್ತೇವೆ. ಪೋಷಕು ಹಿಜಾಬ್ ತೆಗೆಯಬೇಡ ಎಂದಿದ್ದಾರೆ. ಇಷ್ಟು ವರ್ಷ ಹಿಜಾಬ್ ತೆಗೆಯಲು ಸೂಚಿಸಿಲ್ಲ. ಆದರೆ ಇಂದು ಹಿಜಾಬ್ ತೆಗೆಯಿರಿ ಅಂದ್ರೆ ಹೇಗೆ ತೆಗೆಯೋದು. ಇಸ್ಲಾಂ ಧರ್ಮದಲ್ಲಿ ಹಿಜಾಬ್ ತೆಗೆಯಲು ಅವಕಾಶವಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಶಾಲೆ ಬಿಡುತ್ತೇವೆ ಆದ್ರೆ ಹಿಜಾಬ್ ತೆಗೆಯೊಲ್ಲ. ನಮಗೆ ಧರ್ಮ ಬೇಕು ಶಾಲೆ ಬೇಡವೇ ಬೇಡ ಎಂದು ಇಲ್ಲಿನ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ :
ಇಂದು ಎಸ್ ಎಸ್ ಎಲ್ ಸಿ ಪೂರ್ವಸಿದ್ಧತಾ ಪರೀಕ್ಷೆ ನಡೆಯುತ್ತಿದೆ. ಆದರೆ ಶಿವಮೊಗ್ಗದಲ್ಲಿ ಪರೀಕ್ಷೆ ವೇಳೆ ಹಿಜಾಬ್ ಧರಿಸಲು ಬಿಡಲಿಲ್ಲ ಎಂಬ ಕಾರಣಕ್ಕೆ 13 ವಿದ್ಯಾರ್ಥಿನಿಯರು ಪರೀಕ್ಷೆ ಬಹಿಷ್ಕರಿಸಿ ಮನೆಗೆ ತೆರಳಿದ್ದಾರೆ.ಶಿವಮೊಗ್ಗದ ಮೇನ್ ಮಿಡ್ಲ್ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಇಂದು ಶಾಲೆಗೆ ಪರೀಕ್ಷೆ ಬರೆಯಲು 13 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು.ಆದರೆ ಶಿಕ್ಷಕರು ಹಿಜಾಬ್ ಧರಿಸಿ ಬರೆಯಲು ಅವಕಾಶ ನೀಡಲಿಲ್ಲ.ಅದಕ್ಕೆ ವಿದ್ಯಾರ್ಥಿನಿಯರು ‘ನಮಗೆ ಪೋಷಕರು ಹಿಜಾಬ್ ತೆಗೆಯದಂತೆ ಹೇಳಿದ್ದಾರೆ.ಹಾಗಾಗಿ ತೆಗೆಯುವುದಿಲ್ಲ’ ಎಂದು ಪಟ್ಟು ಹಿಡಿದಿದ್ದಾರೆ.ನಂತರ ಹಿಜಾಬ್ ಧರಿಸಲು ಶಿಕ್ಷಕರು ಅವಕಾಶ ನೀಡಲಿಲ್ಲ.ಹಾಗಾಗಿ ವಿದ್ಯಾರ್ಥಿನಿಯರು ಪೋಷಕರನ್ನು ಕರೆಸಿ ಮನೆಗೆ ಕಳಿಸಿದರು.
ಹಿಜಾಬ್- ಕೇಸರಿ ವಿವಾದ ಕುರಿತು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯತ್ತಿದೆ, ತೀರ್ಪು ಬರುವವರೆಗೆ ಧಾರ್ಮಿಕ ಉಡುಗೆಯನ್ನು ಶಾಲೆ ಕಾಲೇಜಿಗೆ ತೊಡುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಇದನ್ನೂ ಓದಿ :
ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…
ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…
ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…
ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…
ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…
ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…