ದಕ್ಷಿಣ ಕನ್ನಡ

ಶೀಘ್ರದಲ್ಲಿ ನಗರಗಳ ಸ್ವಚ್ಛತಾ ರೇಟಿಂಗ್‌ ಪ್ರಕಟ ; ಮಂಗಳೂರಿಗೆ ಅಗ್ರ ಸ್ಥಾನದ ನಿರೀಕ್ಷೆ…..

ಮಹಾನಗರ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ನವಮಂಗಳೂರು ಬಂದರು ಸ್ವಚ್ಛತೆಯಲ್ಲಿ ದೇಶದಲ್ಲಿಯೇ ನಂ. 1 ಸ್ಥಾನಕ್ಕೆ ಭಾಜನವಾದಂತೆ, ಬಹುನಿರೀಕ್ಷಿತ ‘ಸ್ವಚ್ಛ ಸರ್ವೇಕ್ಷಣ್‌’ ವರದಿ ಶೀಘ್ರದಲ್ಲಿ ಪ್ರಕಟವಾಗಲಿದ್ದು, ಮಹಾನಗರ ಪಾಲಿಕೆಗೆ ಅಗ್ರಸ್ಥಾನ ದೊರೆಯುವ ನಿರೀಕ್ಷೆ ಇದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ‘ಸ್ವಚ್ಛ ಭಾರತ ಮಿಷನ್‌’ ಅಡಿಯಲ್ಲಿ ಸ್ವಚ್ಛತೆಗಾಗಿ ನಗರಗಳಿಗೆ ನೀಡುವ ರೇಟಿಂಗ್‌ ಸಂಬಂಧಿಸಿ, ಮಂಗಳೂರು ನಗರದಲ್ಲಿ ಸ್ವಚ್ಛತೆಗಾಗಿ ಕೈಗೊಂಡ ಅಂಶಗಳನ್ನು ಪರಿಶೀಲಿಸಲು ಉನ್ನತ ಮಟ್ಟದ ಅಧಿಕಾರಿಗಳ ತಂಡ ಇತ್ತೀಚೆಗೆ ನಗರಕ್ಕೆ
ಆಗಮಿಸಿ, ಪರಿಶೀಲನೆ ನಡೆಸಿ ಅಂಕಗಳನ್ನು ಹಂಚಿಕೆ ಮಾಡಿದೆ.

ಜತೆಗೆ ನಗರದ ಜನರಿಂದ ಕೆಲವು ಪ್ರಶ್ನೆಗಳಿಗೆ ಉತ್ತರ ಆಹ್ವಾನಿಸಿ ಅದರ ಮೂಲಕವೂ ಅಂಕಗಳ ಹಂಚಿಕೆ ನಡೆಸಲಾಗುತ್ತದೆ. ಈ ಎಲ್ಲ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಅಂತಿಮ ಫಲಿತಾಂಶ ಬರಲು ಬಾಕಿಯಿದೆ.

ಕಳೆದ ಬಾರಿ 63ನೇ ಸ್ಥಾನ
ಕಳೆದ ಬಾರಿ ನಡೆದ ‘ಸ್ವಚ್ಛ ಸರ್ವೇಕ್ಷಣ’ ದಲ್ಲಿ ಕರ್ನಾಟಕದ 27 ನಗರಗಳು ಪಾಲ್ಗೊಂಡಿದ್ದವು. ಅವುಗಳ ಪೈಕಿ ಮಂಗಳೂರು ಪಾಲಿಕೆಯು ದೇಶದಲ್ಲಿಯೇ 63ನೇ ಸ್ಥಾನಗಳಿಸಿದೆ. 2017ರಲ್ಲಿ 1 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ನಗರಗಳನ್ನು ಆಯ್ಕೆ ಮಾಡಲಾಗಿತ್ತು. ಈ ಬಾರಿ ದೇಶದ ಎಲ್ಲ ನಗರಗಳನ್ನು ಆಯ್ಕೆ ಮಾಡಿರುವುದರಿಂದ ಇನ್ನಷ್ಟು ಸವಾಲಿನ ಸ್ಪರ್ಧೆಯನ್ನು ಮಂಗಳೂರು ಎದುರಿಸಲಿದೆ.

‘ಸ್ವಚ್ಛ ಮಂಗಳೂರು’ ಸಂಕಲ್ಪ
ಶ್ರೀ ರಾಮಕೃಷ್ಣ ಮಿಷನ್‌, ಮಾತಾ ಅಮೃತಾನಂದಮಯಿ ಬಳಗದಿಂದ ನಡೆದ ‘ಸ್ವಚ್ಛ ಮಂಗಳೂರು’ ಅಭಿಯಾನದಿಂದಾಗಿ ಮಂಗಳೂರು ಸ್ವಚ್ಛತೆಯಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ. ಇದು ಕೂಡ ಹೆಚ್ಚಿನ ಅಂಕಗಳಿಕೆಗೆ ಸಹಾಯವಾಗಬಹುದು ಎಂಬ ನಿರೀಕ್ಷೆ ಇದೆ.

 

ಸ್ವಚ್ಛ ಸರ್ವೆಕ್ಷಣೆ; ಅಂಕಗಳ ಹಂಚಿಕೆ
ಸ್ವಚ್ಛ ಸರ್ವೇಕ್ಷಣ- 2018 ರಲ್ಲಿ ಎಲ್ಲ ನಗರಗಳಿಗೆ 4 ಹಂತಗಳಲ್ಲಿ ಅಂಕಗಳನ್ನು ನಿಗದಿಪಡಿಸಲಾಗಿದೆ. ಅದರಲ್ಲಿ ಸ್ಥಳೀಯ ಸಂಸ್ಥೆಗಳಿಂದ ಸಲ್ಲಿಸಲಾಗುವ ದಾಖಲೆಗಳಿಗೆ +1,400, ಸಾರ್ವಜನಿಕ ಅಭಿಪ್ರಾಯಗಳಿಗೆ +1,400, ಕೇಂದ್ರ ತಂಡದ ನೇರ ಸಮೀಕ್ಷೆಗೆ + 1,200 ಹಾಗೂ ಸ್ವಂತ ದೃಢೀಕರಣಕ್ಕೆ 440 ಅಂಕ ನಿಗದಿಪಡಿಸಲಾಗಿದೆ. ಸಮೀಕ್ಷೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ವಿಶೇಷ ಆದ್ಯತೆ ನೀಡಿದ್ದು, ಸ್ವಚ್ಛತಾ ಆ್ಯಪ್‌ ಮುಖಾಂತರ ಪ್ರಶ್ನೆಗಳಿಗೆ ಉತ್ತರ ನಿರೀಕ್ಷಿಸಲಾತ್ತು. ಇದರಲ್ಲಿ ಬಂದ ಉತ್ತರದ ಆಧಾರದಲ್ಲಿ ಅಂಕಗಳ ಹಂಚಿಕೆ ಮಾಡಲಾಗುತ್ತದೆ.

ಏರ್‌ಪೋರ್ಟ್‌- ಎನ್‌ಎಂಪಿಟಿಗೆ ಸ್ವಚ್ಛತೆಯ ಗೌರವ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೇಶದಲ್ಲಿಯೇ ನಂ. 1 ‘ಸ್ವಚ್ಛ ನಿಲ್ದಾಣ ಎಂಬ ಹೆಗ್ಗಳಿಕೆ ಲಭಿಸಿದೆ. ಕೇಂದ್ರ ಸರಕಾರ ಫೆಬ್ರವರಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ 15ರಿಂದ 50 ಲಕ್ಷದವರೆಗಿನ ಪ್ರಯಾಣಿಕರ ನಿರ್ವಹಣೆಯ ವಿಭಾಗದಲ್ಲಿ ಮೊದಲ ಸ್ಥಾನ ಲಭಿಸಿದೆ. ನವಮಂಗಳೂರು ಬಂದರು ಸ್ವತ್ಛತೆಯಲ್ಲಿ ದೇಶದ 12 ಬಂದರುಗಳ ಪೈಕಿ ಮೊದಲ ಸ್ಥಾನ ಗಳಿಸಿದ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ನೌಕಾಯಾನ ಇಲಾಖೆಯು ಅಧ್ಯಯನ ನಡೆಸಿ ವರದಿ ನೀಡಲು ಕ್ವಾಲಿಟಿ ಕೌನ್ಸೆಲ್‌ ಆಫ್‌ ಇಂಡಿಯಾ ಸಂಸ್ಥೆಯನ್ನು ನೇಮಿಸಿತ್ತು. ಅದರಂತೆ ಬಂದರು ಒಳಭಾಗ, ಸರಕು ನಿರ್ವಹಣೆ ಪ್ರದೇಶ, ಬಂದರು ಕಚೇರಿ, ಹಸಿರು ವಲಯ ನಿರ್ಮಾಣ ಹೀಗೆ ವಿವಿಧ ವಿಭಾಗದ ಸಾಧನೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ.

ಅಗ್ರಸ್ಥಾನದ ವಿಶ್ವಾಸ
ಈಗಾಗಲೇ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ‘ಸ್ವಚ್ಛ  ಭಾರತ ಮಿಷನ್‌’ ಅಡಿಯಲ್ಲಿ ನಗರಗಳಿಗೆ ನೀಡುವ ಸ್ವಚ್ಛತಾ ರೇಟಿಂಗ್‌ ಬಗ್ಗೆ ಪರಿಶೀಲನ ತಂಡ ಮಂಗಳೂರಿಗೆ ಆಗಮಿಸಿ ಪರಿಶೀಲಿಸಿದೆ. ಮಂಗಳೂರಿಗೆ ಅಗ್ರಸ್ಥಾನ ದೊರೆಯುವ ವಿಶ್ವಾಸವಿದೆ.
 ಮೊಹಮ್ಮದ್‌ ನಝೀರ್‌,
ಮನಪಾ ಆಯುಕ್ತರು

 

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

6 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

6 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

6 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

6 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

6 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

6 days ago