Featured

ಶೀಘ್ರವೇ ದೇಶದಲ್ಲಿ ವಾಟ್ಸ್‌ಆಪ್ ನಿಷೇಧ..?! ಶಾಕಿಂಗ್ ಕಾರಣ ಕೊಟ್ಟ ಮೋದಿ ಸರ್ಕಾರ..!

ಭಾರತದಲ್ಲಿ ಅತೀ ಹೆಚ್ಚು ಮಂದಿ ಬಳಕೆದಾರರನ್ನು ಹೊಂದಿರುವ ಮೂಲಕ ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿರುವ ಫೇಸ್‌ಬುಕ್ ಮಾಲೀಕತ್ವದ ವಾಟ್ಸ್‌ಆಪ್, ಸೋಶಿಯಲ್ ಮೆಸೆಂಜಿಗ್ ಆಪ್ ಸಾಲಿನಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಈ ಆಪ್ ಶೀಘ್ರವೇ ಚೀನಾದಂತೆ ಭಾರತೀಯ ಮಾರುಕಟ್ಟೆಯಲ್ಲಿಯೂ ಬ್ಯಾನ್ ಆಗುವ ಸಾಧ್ಯತೆ ಇದೆ. ಈಗಾಗಲೇ ವಾಟ್ಸ್‌ಆಪ್ ಮೇಲೆ ನಿಯಂತ್ರಣ ಸಾಧಿಸಲು ಮುಂದಾಗಿರುವ ಸರಕಾರ, ತನ್ನ ಹಿಡಿತಕ್ಕೆ ಸಿಗದ ವಾಟ್ಸ್‌ಆಪ್ ಮೇಲೆ ನಿಷೇಧದ ದಂಡ ಪ್ರಯೋಗಕ್ಕೆ ಮುಂದಾಗಲಿದೆ ಎನ್ನಲಾಗಿದೆ.

ದೇಶದಲ್ಲಿ ಅತೀ ಹೆಚ್ಚಿನ ಪ್ರಮಾಣದ ಹಿಂಸಾಚಾರಕ್ಕೆ ಮತ್ತು ನಕಲಿ ಸುದ್ದಿಯನ್ನು ಹರಡಿ ಸಮಾಜದಲ್ಲಿ ಅಶಾಂತಿಯನ್ನು ನಿರ್ಮಾಣವಾಗಲು ವಾಟ್ಸ್‌ಆಪ್ ಸಂದೇಶಗಳೇ ನೇರ ಕಾರಣ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ನಕಲಿ ಸುದ್ದಿಯನ್ನು ನಿಯಂತ್ರಿಸುವ ವಿಷಯದಲ್ಲಿ ವಾಟ್ಸ್‌ಆಪ್ ಸರಕಾರದೊಂದಿಗೆ ಸಮರ ನಡೆಸಲು ಶುರು ಮಾಡಿದೆ.

ಸುಳ್ಳು ಸುದ್ದಿ ತಡೆಗೆ: ವಾಟ್ಸ್‌ಆಪ್‌ನಿಂದಾಗಿ ಕೋಮುಗಲಭೆ, ಗುಂಪು ಹಲ್ಲೆ, ಅಮಾಯಕರ ಮೇಲೆ ದಾಳಿ, ಸುಳ್ಳು ಸುದ್ದಿ, ವ್ಯಕ್ತಿ ನಿಂದನೆ ಸೇರಿದಂತೆ ಹಲವು ಮಾದರಿಯ ತೊಂದರೆಗಳು ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಅಧಿಕ ಮಂದಿ ಬಳಕೆದಾರರು ಕಣ್ಣು ಮುಚ್ಚಿ ವಾಟ್ಸ್‌ಆಪ್‌ನಲ್ಲಿ ಬರುವ ಮಾಹಿತಿಗಳನ್ನು ನಂಬುವುದು ಮತ್ತು ಅದನ್ನು ಬೇರೆಯವರಿಗೆ ಶೇರ್ ಮಾಡುತ್ತಿರುವುದು. ಈ ಹಿನ್ನಲೆಯಲ್ಲಿ ಈ ಪರಿಸ್ಥಿತಿಯನ್ನು ಸುಧಾರಿಸಲು ವಾಟ್ಸ್‌ಆಪ್‌ ಹೆಚ್ಚಿನ ಶ್ರಮ ವಹಿಸಬೇಕು ಎಂದು ಎಂದು ಕೇಂದ್ರ ಸರಕಾರ ಬಯಸುತ್ತಿದೆ.

ಕೇಂದ್ರದ ಪಟ್ಟು: ಇದಲ್ಲದೇ ಕೇಂದ್ರ ಸರಕಾರವೂ ವಾಟ್ಸ್‌ಆಪ್ ಮೂಲಕ ಸುಳ್ಳು ಸುದ್ದಿಯನ್ನು ಹಂಚುವವರನ್ನು ಶಿಕ್ಷಿಸುವ ಕಾರ್ಯಕ್ಕೆ ಮುಂದಾಗಿದೆ. ಇದಕ್ಕಾಗಿ ಸುಳ್ಳು ಸುದ್ದಿಯ ಮೂಲಕದ ಬಗ್ಗೆ ಮಾಹಿತಿ ನೀಡುವಂತೆ ವಾಟ್ಸ್‌ಆಪ್‌ಗೆ ಸರಕಾರ ಮನವಿ ಮಾಡಿದೆ ಎನ್ನಲಾಗಿದೆ.

ದೇಶದ ಸುರಕ್ಷತೆ: ಇದಲ್ಲದೇ ದೇಶದ ಸುರಕ್ಷತೆಯ ದೃಷ್ಠಿಯಿಂದ ವಾಟ್ಸ್‌ಆಪ್ ಸುಳ್ಳು ಸುದ್ದಿಯನ್ನು ತಡೆಯಬೇಕು. ಇಲ್ಲವಾದರೆ ಇದರಿಂದಾಗಿ ಮೊಟ್ಟ ಮಟ್ಟದಲ್ಲಿ ಭದ್ರತೆಗೆ ಅಪಾಯ ಇರುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್ ಅನ್ನು ಬಂದ್ ಮಾಡಿಸಲು ಕೇಂದ್ರ ಸರಕಾರವು ಚಿಂತನೆ ನಡೆಸಿದೆ.

 

Vishwa News 24

Recent Posts

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ – vishwanews24

ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ ; ಇನ್ನು ಮುಂದೆ ಶನಿವಾರ ಅರ್ಧದಿನ ಮಾತ್ರ ಶಾಲೆ ಬೆಂಗಳೂರು: ಶಾಲಾ…

48 minutes ago

ಸುರತ್ಕಲ್ ಬಾಲಕಿ ಆತ್ಮಹತ್ಯೆ ಪ್ರಕರಣ : ಪೋಷಕರ ನಡೆ ಕುರಿತು ವಿಷಾದ ವ್ಯಕ್ತಪಡಿಸಿದ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ – vishwanews24

ಸುರತ್ಕಲ್ ಬಾಲಕಿ ಆತ್ಮಹತ್ಯೆ ಪ್ರಕರಣ : ಪೋಷಕರ ನಡೆ ಕುರಿತು ವಿಷಾದ ವ್ಯಕ್ತಪಡಿಸಿದ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಂಗಳೂರು …

58 minutes ago

ಗೃಹಲಕ್ಷ್ಮಿ ಯೋಜನೆಯಲ್ಲಿ ಯಾವುದೇ ಗೋಲ್‌ಮಾಲ್ ಆಗಿಲ್ಲ:  ಮಹಿಳಾ & ಮಕ್ಕಳಾಭಿವೃದ್ಧಿ ಇಲಾಖೆ ಸ್ಪಷ್ಟನೆ  – vishwanews24

ಗೃಹಲಕ್ಷ್ಮಿ ಯೋಜನೆಯಲ್ಲಿ ಗೋಲ್‌ಮಾಲ್ ಆಗಿಲ್ಲ:  ಮಹಿಳಾ & ಮಕ್ಕಳಾಭಿವೃದ್ಧಿ ಇಲಾಖೆ ಸ್ಪಷ್ಟನೆ  ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಲ್ಲಿ ಮಹಾಲೋಪವಾಗಿದೆ ಅಂತ ಸಿಎಜಿ…

1 hour ago

ನನ್ನ , ಡಿ.ಕೆ.ಶಿವಕುಮಾರ್ ಮಧ್ಯೆ ಯಾವುದೇ ವ್ಯವಹಾರಿಕ ಸಂಬಂಧ ಇಲ್ಲ , ಆತ್ಮೀಯತೆಯೂ ಇಲ್ಲ : ವಿಜಯೇಂದ್ರ – vishwanews24

ನನ್ನ , ಡಿ.ಕೆ.ಶಿವಕುಮಾರ್ ಮಧ್ಯೆ ಯಾವುದೇ ವ್ಯವಹಾರಿಕ ಸಂಬಂಧ ಇಲ್ಲ , ಆತ್ಮೀಯತೆಯೂ ಇಲ್ಲ : ವಿಜಯೇಂದ್ರ ಮಂಗಳೂರು :…

1 hour ago

ಅಯೋಧ್ಯಾ ರಾಮ ಮಂದಿರದಲ್ಲಿ ದೇಣಿಗೆ ದುರುಪಯೋಗ ಆರೋಪ: ಎಂಟು ಆರೋಪಿಗಳ ಬಂಧನ – vishwanews24

ಅಯೋಧ್ಯಾ ರಾಮ ಮಂದಿರದಲ್ಲಿ ದೇಣಿಗೆ ದುರುಪಯೋಗ ಆರೋಪ: ಎಂಟು ಆರೋಪಿಗಳ ಬಂಧನ ಅಯೋಧ್ಯೆ: ಅಯೋಧ್ಯೆ ರಾಮ ಮಂದಿರಕ್ಕೆ ಭಕ್ತಾದಿಗಳು ನೀಡಿದ್ದ…

1 hour ago

ಆರ್‌ ಎಸ್‌ ಎಸ್ ವಿವಿಧ ಆಯಾಮಗಳಲ್ಲಿ ಸಮಾಜ ಸೇವೆ ನಡೆಸಿಕೊಂಡು ಬಂದಿದೆ : ಸತ್ಯಜಿತ್ ಸುರತ್ಕಲ್ – vishwanews24

ಆರ್‌ ಎಸ್‌ ಎಸ್ ವಿವಿಧ ಆಯಾಮಗಳಲ್ಲಿ ಸಮಾಜ ಸೇವೆ ನಡೆಸಿಕೊಂಡು ಬಂದಿದೆ : ಸತ್ಯಜಿತ್ ಸುರತ್ಕಲ್ ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ…

2 hours ago