Featured

ಶೀರೂರು ಶ್ರೀಗಳದ್ದು ಸ್ವಾಭಾವಿಕ ಸಾವಲ್ಲ , ಶ್ರೀಗಳ ಅಸಹಜ ಸಾವಿಗೆ ನ್ಯಾಯ ಸಿಗಲೇ ಬೇಕು : ವಕೀಲ ರವಿಕಿರಣ್‌ -Vishwanews24

ಉಡುಪಿ: ಶೀರೂರು ಶ್ರೀ ಲಕ್ಷ್ಮೇವರ ತೀರ್ಥರ ಮರಣೋತ್ತರ ಪರೀಕ್ಷೆ ನಡೆಸಿದ ಮಣಿಪಾಲ ಕೆಎಂಸಿ ಆಸ್ಪತ್ರೆಯ ತಜ್ಞ ವೈದ್ಯರು ಶ್ರೀಗಳ ರಕ್ತ, ಮೂತ್ರ ಹಾಗೂ ಉದರಾಂಗಗಳಲ್ಲಿ ವಿಷದ ಅಂಶ ಪತ್ತೆಯಾಗಿರುವ ಬಗ್ಗೆ ಉಲ್ಲೇಖ ಮಾಡಿದ್ದು ಹೀಗಾಗಿ ಅವರ ಸಾವು ಸ್ವಾಭಾವಿಕ ಸಾವಲ್ಲ ಅಂತ ವಕೀಲ ರವಿಕಿರಣ್‌ ಮುರ್ಡೇಶ್ವರ ತಿಳಿಸಿದ್ದಾರೆ.

ಅವರು ಶಿರೂರು ಸ್ವಾಮಿಗಳ ಸಾವಿಗೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆ ವಿಶೇಷ ಮಕ್ಕಳ ಸಮ್ಮುಖದಲ್ಲಿ ಸಂಸ್ಮರಣಾ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ಮಾತನಾಡಿದ ಅವರು ಎ.ಸಿ ಕುಂದಾಪುರ ನ್ಯಾಯಲಯದಲ್ಲಿ ನಡೆಯುವ ಈ ಕೇಸು ಇನ್ನೂ ಕೂಡ ತೆರೆಯಲು ಅವಕಾಶ ಇದೆ. ಯಾವುದೆ ಕೊಲೆ ಅಥವಾ ಸಂಶಯಾಶ್ಪದ ಮರಣವಾಗಿದ್ದಲ್ಲಿ ಅದನ್ನು ಮತ್ತೆ ತೆರೆಯಲು ಅವಕಾಶವಿದೆ.

ಮಣಿಪಾಲದ ಕೆಎಮ್ ಸಿ ಆಸ್ಪತ್ರೆಯಲ್ಲಿ ನಡೆದ ಮರಣೋತ್ರರ ಪರೀಕ್ಷಯ ವರದಿ ಮತ್ತು ವಿಧಿ ವಿಜ್ಞಾನ ವರದಿ ಎರಡನ್ನ ಒಟ್ಟು ಗೂಡಿಸಿದ ಸಮಗ್ರ ವರದಿ( report-blood tested positive for organoprosporous urine sample tested for benzodiazepine)ಯನ್ನು ನ್ಯಾಯಲಯಕ್ಕೆ ಸಲ್ಲಿಸಲಾಗಿದ್ದರೂ ವಯೋ ಸಹಜ ಸಾವು ಎಂದು ತೀರ್ಪು ಬಂದಿದ್ದು ಒಪ್ಪತಕ್ಕದ್ದಲ್ಲ. ಇನ್ನೂ ಕೂಡ ಉಚ್ಚ ನ್ಯಾಯಾಲಯಲ್ಲಿ ರಿಟ್ ಪಿಟಿಷನ್ ಹಾಕುವ ಅವಕಾಶವಿದೆ. ಶ್ರೀಗಳ ಅಸಹಜ ಸಾವಿಗೆ ನ್ಯಾಯ ಸಿಗಲೇ ಬೇಕು. ಸ್ವಾಮೀಜಿಯ ಸುತ್ತಮುತ್ತ ಇದ್ದ ವಿರೋದ ಅಂಶಗಳನ್ನು ತೆಗೆದು ಕೊಳ್ಳಬೇಕು. ನ್ಯಾಯ ಪಡೆಯಲು ಎಲ್ಲಾ ದಿಕ್ಕಿನಿಂದ ಆಲೋಚನೆ ಮಾಡುವ ಅನಿವಾರ್ಯತೆ ಇದೆ ಎಂದು ವಕೀಲ ಒತ್ತಾಯಿಸಿದರು.

ಆದ್ರೆ ಮಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲದಿಂದ ಬಂದ ಅಂತಿಮ ವರದಿಯಲ್ಲಿ ಯಾವುದೇ ವಿಷಕಾರಿ ಅಂಶ ಇಲ್ಲ ಎಂದು ಹೇಳಲಾಗಿತ್ತು. ಎರಡನೇ ವರದಿಯ ಆಧಾರದಲ್ಲಿ ತನಿಖಾಧಿಕಾರಿಗಳು ಇದೊಂದು ಸ್ವಾಭಾವಿಕ ಸಾವು ಎಂಬ ನಿರ್ಣಯಕ್ಕೆ ಬಂದಿದ್ದರು. ವಿಷಕಾರಿ ಅಂಶಗಳಿರುವ ವರದಿಯನ್ನಿಟ್ಟುಕೊಂಡು ಪ್ರಕರಣ ರೀ ಓಪನ್ ಮಾಡಬಹುದು ಅ ಅಂತ ಹೇಳಿದರು.

ಈ ಸಂದರ್ಭದಲ್ಲಿ, ಸಾಯಿರಾಧ ಡೆವಲಪರ್ ನ ಮ್ಯಾನೇಜಿಂಗ್ ಡೈರೆಕ್ಟರ್ ಮನೋಹರ್ ಶೆಟ್ಟಿ, ಬಡಗುಬೆಟ್ಟು ಕ್ರೆಡಿಟ್ ಕೋಪರೇಟಿವ್ ನ ಜನರಲ್ ಮ್ಯಾನೇಜರ್ ಜಯಕರ್ ಶೇಟ್ಟಿ ಇಂದ್ರಾಳಿ, ಏಸ್ ಸಂಸ್ಥೆಯ ನಿರ್ದೇಶಕರಾದ ಲತಾವ್ಯ ಆಚಾರ್ಯ ಶ್ರೀಕಾಂತ್ ಶೆಟ್ಟಿ, ಸ್ಪಂಧನ ಶಾಲೆಯ ಮುಖ್ಯಸ್ಥರಾದ ಜನಾರ್ಧನ, ನವೀನ್ ರಾವ್, ರಾಧಾ ಕೃಷ್ಣ ಶೆಟ್ಟಿ, ಸಂತೋಷ್, ಭಾಸ್ಕರ್ ಮತ್ತಿರರು ಉಪಸ್ಥಿತರಿದ್ದರು.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago