ಕುಂದಾಪುರ, : ವಿವಾಹಿತರಾಗಿರುವ ಪ್ರೇಮಿಗಳಿಬ್ಬರು ಕುಂದಾಪುರದ ಲಾಡ್ಜೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಶೃಂಗೇರಿಯ ಕಳಸಪ್ಪ ಗೌಡ ಎಂಬಾತನ ಮಗ ಗುರುಮೂರ್ತಿ(43) ಹಾಗೂ ಕೊಪ್ಪದ ಜಯಪುರ ಎಂಬಲ್ಲಿಯ ನಿವಾಸಿ ಶೃಂಗೇರಿಗೆ ವಿವಾಹ ಮಾಡಿಕೊಟ್ಟಿರುವ ಗೋವಿಂದ ಎಂಬಾತನ ಪುತ್ರಿ ಶಾರದಾ(30) ಎಂದು ಗುರುತಿಸಲಾಗಿದೆ.
ಗುರುಮೂರ್ತಿ ವಿವಾಹಿತನಾಗಿದ್ದು ಆತನಿಗೆ ಇಬ್ಬರು ಮಕ್ಕಳಿದ್ದಾರೆ.ಹಾಗೂ ಶಾರದಾಳಿಗೂ ಎಂಟು ವರ್ಷದ ಓರ್ವ ಪುತ್ರಿಯಿದ್ದಾಳೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಸೆಪ್ಟಂಬರ್ ೨೬ರಂದು ಬೆಳಿಗ್ಗೆ ಕುಂದಾಪುರದ ಹೋಟೆಲ್ ಹರಿಪ್ರಸಾದ್‌ಗೆ ಬಂದಿದ್ದರು. ತಮ್ಮನ್ನು ಗಂಡ ಹೆಂಡತಿ ಎಂದು ಪರಿಚಯಿಸಿ ಗುರುಮೂರ್ತಿಯ ಚುನಾವಣಾ ಗುರುತಿನ ಚೀಟಿ ನೀಡಿ ಕೊಠಡಿ ಸಂಖ್ಯೆ 103ರಲ್ಲಿ ಉಳಿದುಕೊಂಡಿದ್ದರು. ನಾಲ್ಕು ದಿನಕ್ಕಾಗಿ ಹರಿಪ್ರಸಾದ್ ಲಾಡ್ಜ್ ನಲ್ಲಿ ಕೊಠಡಿ ಪಡೆದಿತ್ತು. ಸುತ್ತಮುತ್ತ ಓಡಾಡಿಕೊಂಡು ಮತ್ತೆ ಬಂದು ಲಾಡ್ಜ್ ನಲ್ಲಿ ತಂಗುತ್ತಿದ್ದರು. ಆದರೆ ಕಳೆದ ರಾತ್ರಿಯಿಂದ ಕೊಠಡಿ ಬಂದ್ ಇತ್ತು. ಸಂಜೆಯವರೆಗೆ ಬಾಗಿಲು ತೆಗೆಯದ ಕಾರಣ ಲಾಡ್ಜ್ ಸಿಬ್ಬಂದಿ ಸಂಶಯ ವ್ಯಕ್ತಪಡಿಸಿ, ಬಾಗಿಲು ಒಡೆದಿದ್ದಾರೆ. ಈ ಸಂದರ್ಭ ಎರಡು ಮೃತದೇಹಗಳು ಕಂಡುಬಂದಿದೆ. ಗುರುಮೂರ್ತಿ ಮೃತದೇಹ ಬೆಡ್ ಮೇಲಿದ್ದರೆ, ಶಾರದಾ ದೇಹ ಕೆಳಗೆ ಮಲಗಿದ ಸ್ಥಿತಿಯಲ್ಲಿತ್ತು.
ಗುರುಮೂರ್ತಿ ಹಾಗೂ ಶಾರದಾ ಪ್ರೀತಿಗೆ, ಅಕ್ರಮ ಸಂಬಂಧಕ್ಕೆ ಶಾರದಾ ಗಂಡ ರಮೇಶ ತಡೆಯೊಡ್ಡಿದ್ದನಂತೆ. ಈ ಬಗ್ಗೆ ಸಾಕಷ್ಟು ಬಾರಿ ಗಲಾಟೆಯಾಗಿದೆ ಅಂತ ಮೃತರ ಸಂಬಂಧಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಘಟನೆಯ ಕುರಿತಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ
ಕುಂದಾಪುರ: ಹೋಂ ಸ್ಟೇ ಎನ್ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಕುಂದಾಪುರ…
ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ :…
ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…
ಉಡುಪಿ: ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…
ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…
ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…