Categories: ಉಡುಪಿ

ಶೈಕ್ಷಣಿಕ ಯೋಜನೆಗಳ ಅನುಷ್ಠಾನದಲ್ಲಿ ಅಭಿವೃದ್ಧಿ ಪಥದಲ್ಲಿ ಮಾದರಿಯಾಗಿ ಮೂಡಿ ಬರುತ್ತಿದೆ ಬೆಳಪು ಗ್ರಾಮ -Vishwanews24

ಕಾಪು: ಸುಡುಗಾಡು – ಕುಗ್ರಾಮ ಎಂದೇ ಪ್ರಸಿದ್ಧಿ ಹೊಂದಿದ್ದ, ಜಿಲ್ಲೆಯಲ್ಲಿಯೇ ಅತೀ ಕಡಿಮೆ ಆದಾಯ ಹೊಂದಿರುವ ಕಂದಾಯ ಗ್ರಾಮವಾಗಿರುವ ಬೆಳಪು ಇದೀಗ ಅಭಿವೃದ್ಧಿಯಲ್ಲಿ ಸರಕಾರ ಮತ್ತು ಸರಕಾರೇತರ ಯೋಜನೆಗಳ ಅನುಷ್ಠಾನದಲ್ಲಿ ಮಾದರಿಯಾಗಿ ಮೂಡಿ ಬರುತ್ತಿದೆ.

ಶೈಕ್ಷಣಿಕ ಕೇಂದ್ರವಾಗಿ ಅಭಿವೃದ್ಧಿಗೊಳ್ಳುತ್ತಿರುವ ಬೆಳಪು ಗ್ರಾಮದಲ್ಲಿ ಅತ್ಯಾಧುನಿಕ ಸಂಶೋಧನಾ ಕೇಂದ್ರ, ಪಿ.ಜಿ. ಸೆಂಟರ್‌, ಸರಕಾರಿ ಪಾಲಿಟೆಕ್ನಿಕ್‌ ಕಾಲೇಜು ಮತ್ತು ಕೈಗಾರಿಕಾ ಪಾರ್ಕ್‌ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸರಕಾರಿ ಪಾಲಿಟೆಕ್ನಿಕ್‌ ಕಾಲೇಜು ಕಾರ್ಯಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿವೆ.

ಬೆಳಪು ಮತ್ತು ಸುತ್ತಲಿನ ಗ್ರಾಮಗಳ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣಕ್ಕಾಗಿ ನಗರ ಪ್ರದೇಶವನ್ನು ಅವಲಂಬಿಸುವ ಕಾಲವಿತ್ತು. ಆದರೆ ಇದೀಗ ಬೆಳಪು ಗ್ರಾಮದಲ್ಲಿ ಉನ್ನತ ಶಿಕ್ಷಣದೊಂದಿಗೆ ತಾಂತ್ರಿಕ ಶಿಕ್ಷಣ, ಸಂಶೋಧನಾ ಶಿಕ್ಷಣಕ್ಕೆ ಅವಕಾಶ ಒದಗಿಸಿಕೊಡುವ ಯೋಜನೆಗಳು ಅನುಷ್ಠಾನಗೊಳ್ಳುತ್ತಿರುವುದು ದೇಶ ದಲ್ಲಿಯೇ ಪ್ರಥಮದ್ದಾಗಿದೆ.

ಮಂಗಳೂರು ವಿಶ್ವ ವಿದ್ಯಾಲಯ ಸಂಯೋಜಿತ ಅತ್ಯಾಧುನಿಕ ಸಂಶೋಧನಾ ಕೇಂದ್ರದ ನಿರ್ಮಾಣ ಕಾಮಗಾರಿಯ ಪ್ರಥಮ ಹಂತದಲ್ಲಿ ಕಾಮಗಾರಿಯು ನಡೆಯುತ್ತಿದ್ದು, 49.25 ಕೋಟಿ ರೂ. ವೆಚ್ಚದ ಬಹುಮಹಡಿ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ. ಕರ್ನಾಟಕ ಹೌಸಿಂಗ್‌ ಬೋರ್ಡ್‌ನ ಮೂಲಕ ಸಂಶೋಧನಾ ಕೇಂದ್ರದ ಕಾಮಗಾರಿ ನಡೆಯುತ್ತಿದ್ದು ಕಾಪು ದೇವಿಪ್ರಸಾದ್‌ ಕನ್‌ಸ್ಟÅಕ್ಷನ್ಸ್‌ನ ಕೆ. ವಾಸುದೇವ ಶೆಟ್ಟಿ ಅವರು ಕಾಮಗಾರಿಯ ಗುತ್ತಿಗೆ ವಹಿಸಿ ಕೊಂಡಿದ್ದಾರೆ.

ಬೆಳಪು ಗ್ರಾಮದ ಜನತೆಯ ಬಹುಕಾಲದ ಕನಸು ಈಗ ನನಸಾಗುತ್ತಿದೆ. ತ್ರವಳಿ ಬೃಹತ್‌ ಯೋಜನೆಗಳು ಏಕಕಾಲದಲ್ಲಿ, ಒಂದೇ ಗ್ರಾಮದಲ್ಲಿ ಕಾರ್ಯಗತಗೊಳ್ಳುತ್ತಿದ್ದು, ಆ ಮೂಲಕ ನಮ್ಮ ಹೋರಾಟಕ್ಕೆ ಫಲ ಸಿಕ್ಕಿದೆ. ಈ ಯೋಜನೆಗಳು ಮುಂದಿನ ಯುವ ಪೀಳಿಗೆಗೆ ಆದರ್ಶವಾಗುವ ಯೋಜನೆಗಳಾಗಿದ್ದು ಗ್ರಾಮೀಣಾಭಿವೃದ್ಧಿಯಲ್ಲಿ ದೀರ್ಘ‌ಕಾಲ ಸಲ್ಲಿಸಿರುವ ಸೇವೆಗೆ ಈಗ ಸಾರ್ಥಕವಾಗಿದೆ. ಗಾಂಧೀಜಿಯವರ ಗ್ರಾಮ ರಾಜ್ಯದ ಕನಸು ನನಸಾಗುತ್ತಿದ್ದು, ಗಾಂಧಿ – 150 ಕಾರ್ಯಕ್ರಮಕ್ಕೆ ಪೂರಕವಾಗಿ ಬೆಳಪುವಿನಲ್ಲಿ ಗಾಂಧಿ ಗ್ರಾಮ ಸ್ಥಾಪಿಸುವ ಕಲ್ಪನೆ ನಮ್ಮದಾಗಿದೆ.

-ಡಾ| ದೇವಿಪ್ರಸಾದ್‌ ಶೆಟ್ಟಿ, ಅಧ್ಯಕ್ಷರು, ಬೆಳಪು ಗ್ರಾಮ ಪಂಚಾಯತ್‌

Vishwa News 24

Recent Posts

ಜೂನ್ 15 ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ : ಕೇರಳ ಸರ್ಕಾರ ಘೋಷಣೆ – vishwanews24

ಜೂನ್ 15 ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ : ಕೇರಳ ಸರ್ಕಾರ ಘೋಷಣೆ ತಿರುವನಂತಪುರಂ: ಕೇರಳ ಸರ್ಕಾರ ಮಹತ್ವದ…

6 minutes ago

ರೇಣುಕಾಸ್ವಾಮಿ ಕೊಲೆ ಪ್ರಕರಣ : ಐವರು ಆರೋಪಿಗಳ ಜಾಮೀನು ರದ್ದು ಅರ್ಜಿ ವಜಾಗೊಳಿಸಿದ ಹೈಕೋರ್ಟ್ – vishwanews24

ರೇಣುಕಾಸ್ವಾಮಿ ಕೊಲೆ ಪ್ರಕರಣ : ಐವರು ಆರೋಪಿಗಳ ಜಾಮೀನು ರದ್ದು ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ…

16 minutes ago

ಮನೆ ಕೆಲಸಕ್ಕೆ ಸೇರಿದ್ದ ದಂಪತಿಯಿಂದ ಕಳ್ಳತನ ; 25 ಲಕ್ಷ ಹಣ ಕದ್ದು ನೇಪಾಳಕ್ಕೆ ಎಸ್ಕೇಪ್ ಆಗುತ್ತಿದ್ದ ವೇಳೆ ಅರೆಸ್ಟ್ – vishwanews24

ಮನೆ ಕೆಲಸಕ್ಕೆ ಸೇರಿದ್ದ ದಂಪತಿಯಿಂದ ಕಳ್ಳತನ ; 25 ಲಕ್ಷ ಹಣ ಕದ್ದು ನೇಪಾಳಕ್ಕೆ ಎಸ್ಕೇಪ್ ಆಗುತ್ತಿದ್ದ ವೇಳೆ ಅರೆಸ್ಟ್ ಬೆಂಗಳೂರು:…

36 minutes ago

ಮಂಗಳೂರು: ಜೋಕಟ್ಟೆ ಫ್ಲೈಓವರ್ ಬಳಿ ಅಪರಿಚಿತ ಯುವಕನ ಶವ ಪತ್ತೆ – vishwanews24

ಮಂಗಳೂರು: ಜೋಕಟ್ಟೆ ಫ್ಲೈಓವರ್ ಬಳಿ ಅಪರಿಚಿತ ಯುವಕನ ಶವ ಪತ್ತೆ ಮಂಗಳೂರು: ಪಣಂಬೂರಿನ ಜೋಕಟ್ಟೆ ಬಳಿ ಬುಧವಾರ ಯುವಕನೊಬ್ಬನ ಶವ…

1 hour ago

ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ : ಪ್ರಧಾನಿಗೆ ಮುಸ್ಲಿಂ ಬಾಂಧವ್ಯ ವೇದಿಕೆ ಮನವಿ – vishwanews24

ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ, ಗೋಹತ್ಯೆ, ಗೋಮಾಂಸ ರಫ್ತನ್ನು ನಿಷೇಧಿಸಿ: ಮುಸ್ಲಿಂ ಬಾಂಧವ್ಯ ವೇದಿಕೆ ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ…

2 hours ago

ಪ್ರಧಾನಿಯಾಗಿ ಮೋದಿ ಸರ್ಕಾರಕ್ಕೆ 12 ವರ್ಷ: ನೆಹರೂ ದಾಖಲೆ ಮುರಿದ ನಮೋ – vishwanews24

ಪ್ರಧಾನಿಯಾಗಿ ಮೋದಿ ಸರ್ಕಾರಕ್ಕೆ 12 ವರ್ಷ: ನೆಹರೂ ದಾಖಲೆ ಮುರಿದ ನಮೋ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ದೀರ್ಘಕಾಲ ನಿರಂತರ ಅಧಿಕಾರ…

3 hours ago