ಶ್ರೀನಿವಾಸ್ ಗೌಡರ ಕಂಬಳ ದಾಖಲೆ ಮುರಿದ ಮತ್ತೋರ್ವ ಕಂಬಳ ವೀರ ಉಡುಪಿ ಜಿಲ್ಲೆಯ ನಿಶಾಂತ್ ಶೆಟ್ಟಿ -Vishwanews24

ಕಿನ್ನಿಗೋಳಿಯ ಐಕಳದಲ್ಲಿ ನಡೆದ ಕಂಬಳದಲ್ಲಿ ಶ್ರೀನಿವಾಸ್ ಗೌಡ ಕಂಬಳದ ದಾಖಲೆ ಬರೆದಿದ್ದರು. ಆದರೆ ಇದೀಗ ಶ್ರೀನಿವಾಸಗೌಡರ ದಾಖಲೆಯನ್ನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೊಳಿ ನಿಶಾಂತ್ ಶೆಟ್ಟಿ ಮುರಿದಿದ್ದಾರೆ.

ವೇಣೂರಿನಲ್ಲಿ ನಡೆದ ಕಂಬಳ ಓಟದಲ್ಲಿ ನಿಶಾಂತ್ ಶೆಟ್ಟಿ ಅವರು 143 ಮೀಟರ್ ದೂರವನ್ನು 13.61 ಸೆಕೆಂಡ್‌ನಲ್ಲಿ ಕ್ರಮಿಸಿದ್ದಾರೆ. ಶ್ರೀನಿವಾಸ್ ಗೌಡ ಅವರು 142 ಮೀಟರ್ ದೂರವನ್ನು 13.62 ಸೆಕೆಂಡ್‌ ನಲ್ಲಿ ಓಡಿದ್ದರು. ಶ್ರೀನಿವಾಸ್ ಗೌಡ ಅವರಿಗಿಂತಲೂ ಒಂದು ಮೀಟರ್ ಹೆಚ್ಚಿನ ದೂರವನ್ನು ಒಂದು ಪ್ರಾಕ್ಷನ್ ಆಫ್ ಸೆಕೆಂಡ್ ಕಡಿಮೆ ಸಮಯದಲ್ಲಿ ನಿಶಾಂತ್ ಶೆಟ್ಟಿ ಓಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ನಿಶಾಂತ್ ಶೆಟ್ಟಿ ಇದರಲ್ಲಿ ನಮ್ಮ ಸಾಧನೆ ಏನೂ ಇಲ್ಲ. ಕೋಣಗಳು ಓಡಿದಾಗ ನಾವು ಬೆನ್ನತ್ತಿ ಓಡುತ್ತೇವೆ . ಶ್ರೀನಿವಾಸಗೌಡರ ಸಾಧನೆಯ ಮುಂದೆ ನಮ್ಮದೇನೂ ಇಲ್ಲ. ಅವರು ನೂರೈವತ್ತು ಕ್ಕಿಂತಲೂ ಹೆಚ್ಚು ಮೆಡಲ್ಗಳನ್ನು ಹೊಡೆದಿದ್ದಾರೆ. ಕೆಲವು ದಿನ ಕೆಲವು ಕೋಣಗಳು ಚೆನ್ನಾಗಿ ಓಡುತ್ತವೆ ಎಂದರು.

ಅಲ್ಲದೆ, ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತಕ್ಕಿಂತಲೂ ಹೆಚ್ಚು ಉತ್ತಮ ಓಟಗಾರರು ಇದ್ದೇವೆ. ಕಂಬಳದ ಓಟಗಾರರಿಗೆ ಕರ್ನಾಟಕ ಸರ್ಕಾರ ವಿಮಾ ಸೌಲಭ್ಯವನ್ನು ಕೊಡಬೇಕು ಎಂದು ಮಾಧ್ಯಮಗಳ ಮೂಲಕ ನಿಶಾಂತ್ ಶೆಟ್ಟಿ ಒತ್ತಾಯಿಸಿದರು.

 

 

 

Vishwa News 24

Recent Posts

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ – vishwanews24

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…

9 hours ago

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ – vishwanews24

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…

10 hours ago

ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು – vishwanews24

ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು ಮಂಗಳೂರು: ಮಂಗಳೂರು ಪ್ರಾದೇಶಿಕ ಸಾರಿಗೆ…

10 hours ago

ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ – vishwanews24

ಕಾಪು: ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ಉಡುಪಿ: ಐದನೇ ವರ್ಷದ ಉಚ್ಚಿಲ ದಸರಾ ಲಲಿತ ಪಂಚಮಿಯ ಸಂಭ್ರಮ…

10 hours ago

ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ – vishwanews24

ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ ಉಡುಪಿ: ಉಚ್ಚಿಲ ಮಹಾಲಕ್ಷ್ಮೀ…

10 hours ago

ಕೋಳಿಮರಿ ವಿತರಣೆ : ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ – vishwanews24

 ಕೋಳಿಮರಿ ವಿತರಣೆ: ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ  ಉಡುಪಿ: ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ…

10 hours ago