Featured

ಶ್ರೀರಾಮನ ಪಟ್ಟಾಭಿಷೇಕವನ್ನು ನೋಡಿದ್ದೇವೆ, ಮೋದಿಯವರ ಪಟ್ಟಾಭಿಷೇಕವನ್ನೂ ನೋಡುವವರಿದ್ದೇವೆ : ವಿನಯ್ ಗುರೂಜಿ – Vishwanews24

ರಾಜ್ಯದ ಭವಿಷ್ಯದ ಮುಖ್ಯಮಂತ್ರಿ ವಿಜಯೇಂದ್ರ ಆಗಬೇಕು ಎಂಬುದು ನಮ್ಮ ಬಯಕೆ..

ಯಡಿಯೂರಪ್ಪನವರ ವಯಸ್ಸು ಮತ್ತು ರಾಜಕೀಯ ಎರಡೂ ತೂಕ ಜಾಸ್ತಿ ..

ಪ್ರಮಾಣ ಮಾಡಿ ಹೇಳುತ್ತೇನೆ, ವಿಜಯೇಂದ್ರ  ಅವರು ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ..

ಶಿವಮೊಗ್ಗ : ಜಿಲ್ಲೆಯ ಸಾಗರದಲ್ಲಿ ನಡೆದ ಶಕ್ತಿಸಾಗರ ಸಮಾವೇಶದಲ್ಲಿ ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಮತ್ತು ಪ್ರಣವಾನಂದ ಸ್ವಾಮೀಜಿ, ಯಡಿಯೂರಪ್ಪ ಮತ್ತವರ ಕುಟುಂಬದ ಸದಸ್ಯರನ್ನು ಹಾಡಿ ಹೊಗಳಿದ್ದಾರೆ. ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಸಮಾಜಕ್ಕೆ ಮಾದರಿ ಎಂದಿದ್ದಾರೆ.

” ನಾನು ಗುರೂಜಿಯಾಗಿ ಈ ಕಾರ್ಯಕ್ರಮಕ್ಕೆ ಬಂದಿಲ್ಲ, ಯಡಿಯೂರಪ್ಪನವರಿಗೆ ಮತ್ತೆ ಆಶ್ರಮಕ್ಕೆ ಮನೆಯ ಸಂಬಂಧವಿದೆ. ಸಂಸದರಾದ ರಾಘವೇಂದ್ರ ಅವರು ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ, ನನ್ನ ಮನೆಯ ಕಾರ್ಯಕ್ರಮಕ್ಕೆ ಆಮಂತ್ರಣ ನೀಡುವ ಅವಶ್ಯಕತೆಯಿಲ್ಲ ” ಎಂದು ವಿನಯ್ ಗುರೂಜಿ ಹೇಳಿದ್ದಾರೆ.

ಒಬ್ಬ ಪಂಚಾಯತಿ ಸದಸ್ಯರಿಗೆ ಸಣ್ಣಮಟ್ಟದ ಅಹಂಕಾರವಿರುತ್ತದೆ, ಮೋದಿ, ಅಮಿತ್ ಶಾ ನಂತರ ಯಡಿಯೂರಪ್ಪ ಬಿಜೆಪಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದಾರೆ. ಆದರೆ ಒಂದು ದಿನವೂ ತಾಳ್ಮೆ ತಪ್ಪಿ ಮಾತನಾಡಿದವರಲ್ಲ, ಅವರ ವಯಸ್ಸು ಮತ್ತು ರಾಜಕೀಯ ಎರಡೂ ತೂಕ ಜಾಸ್ತಿ ಎಂದು ವಿನಯ್ ಗುರೂಜಿ ಅಭಿಪ್ರಾಯ ಪಟ್ಟಿದ್ದಾರೆ.

ನಾವೆಲ್ಲಾ ಅವರಿಗಿಂತ ಕಿರಿಯರು, ನಾವು ಬಂದು ನಿಂತಾಗ ಎದ್ದು ನಿಂತು ಗೌರವವನ್ನು ಕೊಡುತ್ತಾರೆ. ಸನ್ಮಾನ ಮಾಡಿಸಿಕೊಳ್ಳುವವರ ತೂಕ ಜಾಸ್ತಿ ಇದ್ದಾಗ, ಸನ್ಮಾನದ ತೂಕ ಹೆಚ್ಚಾಗುತ್ತದೆ. ಬಿಲ್ಲವ ಮತ್ತು ಈಡಿಗ ಸಮುದಾಯದ ಸನ್ಮಾನಕ್ಕೆ ಈ ಗೌರವ ಬಂದಿದೆ. ವೈಯಕ್ತಿಕವಾಗಿ ಹೇಳುವುದಾದರೆ, ಶ್ರೀರಾಮನ ಪಟ್ಟಾಭಿಷೇಕವನ್ನು ನೋಡಿದ್ದೇವೆ, ಮೋದಿಯವರ ಪಟ್ಟಾಭಿಷೇಕವನ್ನೂ ನೋಡುವವರಿದ್ದೀರಿ ಎಂದು ವಿನಯ್ ಗುರೂಜಿ ಆಶಾಭಾವನೆ ವ್ಯಕ್ತ ಪಡಿಸಿದ್ದಾರೆ.

” ಹತ್ತು ವರ್ಷದ ಹಿಂದೆ ನಾನು ನೋಡಿದ ಶಿವಮೊಗ್ಗವೇ ಬೇರೆ, ಈಗಿನ ಶಿವಮೊಗ್ಗವೇ ಬೇರೆ. ಹಿಂದೆ ಶಿವಮೊಗ್ಗದ ರಸ್ತೆಯಲ್ಲಿ ಹಂದಿಗಳು ತಿರುಗಾಡುತ್ತಿದ್ದವು, ಈಗ ವಿಮಾನಗಳು ಹಾರಾಡುತ್ತಿವೆ. ಇದು ರಾಘವೇಂದ್ರ ಅವರು ತಮ್ಮ ಅವಧಿಯಲ್ಲಿ ನಗರವನ್ನು ಅಭಿವೃದ್ದಿ ಪಡಿಸಿದ ರೀತಿ ” ಎಂದು ವಿನಯ್ ಗುರೂಜಿ ಹೇಳಿದ್ದಾರೆ.

” ಇವರ ಒಳ್ಲೆಯ ಕೆಲಸಕ್ಕೆ ದೇವರ ಆಶೀರ್ವಾದವೂ ಇದೆ. ನಾನು ಪ್ರಮಾಣ ಮಾಡಿ ಹೇಳುತ್ತೇನೆ, ಅವರು ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಣವಾನಂದ ಸ್ವಾಮೀಜಿಗಳು ನಾನು ಮೃದುವಾಗಬೇಕಾ ಅಂತ ಕೇಳಿದರೂ, ನೀವು ಹೇಗೆ ಈಗ ಇದ್ದಿರೋ ಹಾಗೇ ಇರಿ ಎಂದು ಹೇಳಿದೆ ” ವಿನಯ್ ಗುರೂಜಿ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಪ್ರಣವಾನಂದ ಸ್ವಾಮೀಜಿ ” ರಾಜ್ಯದ ಭವಿಷ್ಯದ ಮುಖ್ಯಮಂತ್ರಿ ವಿಜಯೇಂದ್ರ ಆಗಬೇಕು ಎಂಬುದು ನಮ್ಮ ಬಯಕೆ. ಅದು ಯಡಿಯೂರಪ್ಪ ಆಸೆ ಕೂಡ ಹೌದು, ಮಾಜಿ ಮುಖ್ಯಮಂತ್ರಿಗಳ ಇಬ್ಬರು ಮಕ್ಕಳಾದ ರಾಘವೇಂದ್ರ ಮತ್ತು ವಿಜಯೇಂದ್ರ ಅವರಿಬ್ಬರಲ್ಲೂ ತಾಳ್ಮೆ ನೋಡಬಹುದು” ಎಂದು ಶ್ರೀಗಳು ಹೇಳಿದರು.

” ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರಿಗೆ ಜಾತಿ ಪದ್ದತಿಯ ಕರಾಳತೆಯನ್ನು ಪ್ರದರ್ಶಿಸಿ, ಹೋರಾಟಕ್ಕೆ ಹೊಸದಿಕ್ಕನ್ನು ತೋರಿಸಿದ ಮಹಾನ್ ಶಕ್ತಿ ಬ್ರಹ್ಮಶ್ರೀ ನಾರಾಯಣ ಗುರುಗಳು. ಈ ದೇಶದ ಸಂಸ್ಕೃತಿ, ಜಾತಿ ಹೋರಾಟ, ಸ್ವಾತಂತ್ರ್ಯ ಹೋರಾಟದ ನೈಜಶಕ್ತಿಯಾಗಿದ್ದವರು ನಾರಾಯಣ ಗುರುಗಳು ” ಎಂದು ಮಾಜಿ ಮುಖ್ಯಮಂತ್ರಿ ಗುರುಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.

Vishwa News 24

Recent Posts

ಉಡುಪಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ – vishwanews24

ಉಡುಪಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ - 1,52,000 ಮೌಲ್ಯದ…

18 hours ago

ಮಂಗಳೂರು: ಎಂಡಿಎಂಎ ಮಾರಾಟ ; ರೂ.2.10 ಲಕ್ಷ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿ ಬಂಧನ – vishwanews24

ಮಂಗಳೂರು: ಎಂಡಿಎಂಎ ಮಾರಾಟ ; ರೂ.2.10 ಲಕ್ಷ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿ ಬಂಧನ ಮಂಗಳೂರು: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು…

19 hours ago

ದೇಣಿಗೆ ಕಳ್ಳತನ ವಿವಾದ: ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್‌ ರಾಯ್‌ ರಾಜೀನಾಮೆ – vishwanews24

ರಾಮಮಂದಿರ ದೇಣಿಗೆ ಕಳ್ಳತನ ವಿವಾದ: ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್‌ ರಾಯ್‌ ರಾಜೀನಾಮೆ ಲಕ್ನೋ: ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ…

19 hours ago

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಫ್‌ಐಆರ್‌ ಕಡ್ಡಾಯ: ಗೃಹ ಸಚಿವ ಪ್ರಿಯಾಂಕ್‌ ಖರ್ಗೆ – vishwanews24

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಫ್‌ಐಆರ್‌ ಕಡ್ಡಾಯ: ಪೊಲೀಸರಿಗೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ  ಬೆಂಗಳೂರು: ಪ್ರತೀಕಾರಾತ್ಮಕ ಅಶ್ಲೀಲತೆ ಹಾಗೂ…

19 hours ago

ರಾಮ ಮಂದಿರ ದೇಣಿಗೆ ಹಣದಲ್ಲಿ ಅಕ್ರಮ ಎಸಗುವವರನ್ನು ಬಿಡುವುದಿಲ್ಲ: ಯೋಗಿ ಆದಿತ್ಯನಾಥ್‌ ಎಚ್ಚರಿಕೆ – vishwanews24

ರಾಮಭಕ್ತರ ಅಗ್ನಿಪರೀಕ್ಷೆ ಮಾಡಬೇಡಿ, ಭಕ್ತರು ತಮ್ಮ ನಂಬಿಕೆ ಮತ್ತು ಭಕ್ತಿಯಿಂದ ಕಾಣಿಕೆ ನೀಡುತ್ತಾರೆ : ಯೋಗಿ ಆದಿತ್ಯನಾಥ್‌ ಲಕ್ನೋ: ರಾಮಭಕ್ತರ…

19 hours ago

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ – vishwanews24

ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ ; ಇನ್ನು ಮುಂದೆ ಶನಿವಾರ ಅರ್ಧದಿನ ಮಾತ್ರ ಶಾಲೆ ಬೆಂಗಳೂರು: ಶಾಲಾ…

21 hours ago