ಶ್ರೀ ಕ್ಷೇತ್ರ ಮಂದಾರಬೈಲು- ವಾರ್ಷಿಕ ನೇಮೋತ್ಸವದ ಆಮಂತ್ರಣ
ಮಾತಾಡುವ ಮಂತ್ರದೇವತೆ ಸನ್ನಿಧಾನದಲ್ಲಿ ವಾರ್ಷಿಕ ಉತ್ಸವದ ಸಂಭ್ರಮ
ಮಂಗಳೂರು:- ಇಲ್ಲಿನ ಕೊಂಚಾಡಿ ಗ್ರಾಮದ ಶ್ರೀ ಕ್ಷೇತ್ರ ಮಂದಾರಬೈಲು ಶ್ರೀ ರಕ್ತೇಶ್ವರಿ -ಮಂತ್ರದೇವತೆ -ಗುಳಿಗ ದೈವಗಳ ವರ್ಷಾವಧಿ ಕೋಲ ಬಲಿ ಸೇವೆ-ಧಾರ್ಮಿಲ ಕಾರ್ಯಗಳು ವಿಶೇಷ ಅಷ್ಟನಾದ ಉಯ್ಯಾಲೆ ಸೇವೆ,ದೀಪಾಲಂಕಾರ ಶೆವೆ,ಸಾಮೂಹಿಕ ಸರ್ವಲಂಕಾರ ಸೇವೆ ಹಾಗೂ 1008 ಕಾಯಿಯ ಸೀಯಾಳಭಿಷೇಕ ನಾಗದೇವರಿಗೆ ಆಶ್ಲೇಷಾ ಬಲಿ ಸೇವೆಯು ಜನವರಿ 25 ರ ಆದಿತ್ಯವಾರದಿಂದ ಮೊದಲ್ಗೊಂಡು ಫೆಬ್ರವರಿ 1 ಆದಿತ್ಯವಾರದವರೆಗಿನ ಸುಮಾರು ಒಂದು ವಾರಗಳ ಉತ್ಸವಾದಿ ಕಾರ್ಯಕ್ರಮಗಳು ಜರುಗಲಿದೆ.
ಜನವರಿ 25 ಆದಿತ್ಯವಾರದಂದು 108 ತೆಂಗಿನಕಾಯಿಯ ಗಣಪತಿಯಾಗ ,ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ,
26 ಸೋಮವಾರ ಶ್ರೀ ಕ್ಷೇತ್ರ ಕದ್ರಿಯಲ್ಲಿ ಮಂಜುನಾಥ ದೇವರಿಗೆ ಶತರುದ್ರಾಭಿಷೇಕ ಮಹಾಪೂಜೆ ರಂಗ ಪೂಜೆ ಬೆಳ್ಳಿ ರಥೋತ್ಸವ ,
27 ಜನವರಿ ಮಂಗಳವಾರ ನಾಗದೇವರಿಗೆ ತಂಬಿಲಾ ಸೇವೆ ,ಆಶ್ಲೇಷಾ ಬಲಿ ,ಮೃತ್ಯುಂಜಯ ಹೋಮ,ರಾತ್ರಿ ಮಂದಾರ ಬಯಲು ಶ್ರೀ ದುರ್ಗಾಪರಮೇಶ್ವರಿ ವೆಂಕಟರಮಣ ದೇವರಿಗೆ ರಂಗ ಪೂಜೆ, 28ನೇ ಬುಧವಾರ
ತಾಯಿಗೆ ಪಂಚಾಮೃತ ಅಭಿಷೇಕ ಅಷ್ಟನಾದದೊಂದಿಗೆ ವಿಶೇಷ ಉಯ್ಯಾಲೆ ಸೇವೆ ಜರಗಲಿದೆ.
29 ಜನವರಿ ಗುರುವಾರ ಸಾಮೂಹಿಕ ಸರ್ವಾಲಂಕಾರ ಪೂಜೆ ಅನ್ನ ಸಂತರ್ಪಣೆ ಶ್ರೀ ರಕ್ತೇಶ್ವರಿ ,ಮಂತ್ರ ದೇವತೆ ಹಾಗೂ ಗುಳಿಗ ದೈವಗಳಿಗೆ ವಿಶೇಷ ದೀಪಲಂಕಾರ ಸೇವೆ ಪಲ್ಲಕ್ಕಿ ಬಲಿ ಪ್ರಸಾದ ವಿತರಣೆ ಜರಗಳಿದೆ, 30 ಜನವರಿ ಶುಕ್ರವಾರ ಬೆಳಗ್ಗೆ 5.30ರಿಂದ ತಾಯಿಗೆ ವಿಶೇಷ 1008 ಸೀಯಾಳಾಭಿಷೇಕ, ಪಂಚಾಮೃತ ಅಭಿಷೇಕ ಮಹಾಪೂಜೆ, ತಾಯಿಗೆ ಹರಕೆ ರೂಪದಲ್ಲಿ ಬರುವ ಬೆಳ್ಳಿ ಬಂಗಾರವನ್ನು ದರ್ಶನ ಸೇವೆಯಲ್ಲಿ ಸಮರ್ಪಿಸುವುದು ನಂತರ ಅನ್ನಸಂತರ್ಪಣೆ ಹಾಗೂ ವಿವಿಧ ಭಜನಾ ಮಂಡದ ತಂಡದವರಿಂದ ಭಜನಾ ಸತ್ಸಂಗ ಕಾರ್ಯಕ್ರಮ.
31 ರಂದು ಶನಿವಾರ ಬೆಳಿಗ್ಗೆ ಸತ್ಯನಾರಾಯಣ ಪೂಜೆ,ಬೆಳಿಗ್ಗೆ 10.30ರ ಶುಭ ಲಗ್ನದಲ್ಲಿ ಭಂಡಾರ ಏರುವುದು,ರಾತ್ರಿ ರಕ್ತೇಶ್ವರಿ -ಹಾಗೂ ಮಂತ್ರದೇವತೆ ದೈವದ ಕೋಲಬಲಿ ಸೇವೆ,ದರ್ಶನ ಬಲಿ,ಪಲ್ಲಕ್ಕಿ ಬಲಿ,ಬೆಳ್ಳಿರಥೋತ್ಸವ,ತುಲಭಾರಸೇವೆ,ಅಭಯ ಪ್ರದಾನ,ಪ್ರಸಾದ ವಿತರಣೆ ನಡೆಯಲಿದೆ.
ಫೆಬ್ರವರಿ ಒಂದರಂದು ಸಂಜೆ ವರ್ಷಾವಧಿ ಅಗೆಲು ಸೇವೆ ಹಾಗೂ ಗುಳಿಗ ದೈವದ ಕೋಲಬಲಿ ಸೇವೆಯೊಂದಿಗೆ ಸಮಾಪ್ತಿಗೊಳ್ಳಲಿದೆ.
ಶ್ರೀ ಕ್ಷೇತ್ರದಲ್ಲಿ ಉತ್ಸವದ ಪ್ರತಿದಿನ ಬೆಳಿಗ್ಗೆ ತಾಯಿಗೆ ಪಂಚಾಮೃತ ಅಭಿಷೇಕ, ಮಹಾಪೂಜೆ ನಡೆದು ಅನ್ನಸಂತರ್ಪಣೆ ನಿರಂತರವಾಗಿ ನಡೆಯಲಿದೆ ಕ್ಷೇತ್ರಾಡಳಿತ ಮಂಡಳಿ ಪ್ರಕಟನೆ ತಿಳಿಸಿದೆ.
ಕ್ಷೇತ್ರದಲ್ಲಿ ನಡೆಯುವ ಸೇವೆಯ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಖ್ಯೆ ಸಂಪರ್ಕಿಸಬಹುದು.9449300017,9880912878
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…