ರಾಜ್ಯ ನ್ಯೂಸ್

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಮಾದಪ್ಪನ ಹುಂಡಿಯಲ್ಲಿ 29 ದಿನಗಳಲ್ಲಿ 1.29ಕೋಟಿ ರೂ ಸಂಗ್ರಹ – Vishwanews24

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಮಾದಪ್ಪನ ಹುಂಡಿಯಲ್ಲಿ 29 ದಿನಗಳಲ್ಲಿ 1.29ಕೋಟಿ ರೂ ಸಂಗ್ರಹ – Vishwanews24

ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಹುಂಡಿಯಲ್ಲಿ ಕಳೆದ 29 ದಿನಗಳಲ್ಲಿ 1.29 ಕೋಟಿ ನಗದು, 44ಗ್ರಾಂ ಚಿನ್ನ ಮತ್ತು 1.300 ಕೆ.ಜಿ ಬೆಳ್ಳಿಯ ಪದಾರ್ಥಗಳು ಸಂಗ್ರಹವಾಗಿವೆ.

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಖಾಸಗಿ ಬಸ್ ನಿಲ್ದಾಣದ ಸಮೀಪದ ವಾಣಿಜ್ಯ ಸಂಕೀರ್ಣದಲ್ಲಿ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಪ್ರಾರಂಭವಾದ ಹುಂಡಿ ಎಣಿಕೆ ಪ್ರಕ್ರಿಯೆಯು ರಾತ್ರ 7 ಗಂಟೆವರೆಗೂ ಜರುಗಿತು.

ಹುಂಡಿ ಎಣಿಕೆ ಪ್ರಕ್ರಿಯೆಯು ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಶ್ರೀಗಳ ದಿವ್ಯಸಾನಿಧ್ಯದಲ್ಲಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮಕ್ಷಮದಲ್ಲಿ ಸಿಸಿಟಿವಿ ಕಣ್ಗಾವಲಿನಲ್ಲಿ ಜರುಗಿತು.

ಈ ಬಾರಿಯ ಹುಂಡಿ ಎಣಿಕೆಯಲ್ಲಿ ಕಳೆದ 29 ದಿನಗಳಲ್ಲಿ 1,29,82,174(ಒಂದು ಕೋಟಿ ಇಪ್ಪತ್ತ ಒಂಭತ್ತು ಲಕ್ಷದ ಎಂಭತ್ತೆರೆಡು ಸಾವಿರದ ನೂರ ಎಪ್ಪತ್ತ ನಾಲ್ಕು) ರೂ ನಗದು, 44ಗ್ರಾಂ ಚಿನ್ನದ ಪದಾರ್ಥಗಳು ಮತ್ತು 1ಕೆ.ಜಿ.300ಗ್ರಾಂ ಬೆಳ್ಳಿಯ ಪದಾರ್ಥಗಳು ಸಂಗ್ರಹವಾಗಿವೆ.

ಹುಂಡಿ ಎಣಿಕೆ ಪ್ರಕ್ರಿಯೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, ಉಪಕಾರ್ಯದರ್ಶಿ ಬಸವರಾಜು, ಅಭಿಯಂತರ ಮನ್ವಾಚಾರ್, ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ, ಮಹದೇಶ್ವರ ಬೆಟ್ಟ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಕೆಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಮ.ಬೆಟ್ಟ ಪೊಲೀಸ್ ಇಲಾಖಾ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

15 hours ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

16 hours ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

16 hours ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

19 hours ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

19 hours ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

19 hours ago